Wednesday, August 5

Author: jpprajamani

ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

ದೇಶ, ಪ್ರಮುಖ ಸುದ್ದಿ, ವೀಡಿಯೊ
ಮುಂಬೈ: ಐಪಿಎಲ್ 2026ರ 69ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ತಂಡವು ಮುಂಬೈ ಇಂಡಿಯನ್ಸ್ (Mumbai Indians) ವಿರುದ್ಧ 30 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ.ವಾಂಖೆಡೆ ಸ್ಟೇಡಿಯಂನಲ್ಲಿ(Wankhede Stadium) ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.206 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡವು ರಾಜಸ್ಥಾನದ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿತು. ಮುಂಬೈ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್‌ಗಳಿಗೆ ಸೀಮಿತವಾಯಿತು. Dreams to come true in the City of Dreams 🩷A win at Wankhede sends the @rajasthanroyals straight to the playoffs 👏Scorecard ▶️ https://t.co/h2ze7K0gd6#TATAIPL | #KhelBindaas | #MIvRR pic.twitter.com/SN3sA5wvld—...
ಎಬೋಲಾ ತಲ್ಲಣ: ಆಫ್ರಿಕಾ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ ಎಂದು ಭಾರತ ಸಲಹೆ

ಎಬೋಲಾ ತಲ್ಲಣ: ಆಫ್ರಿಕಾ ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಬೇಡ ಎಂದು ಭಾರತ ಸಲಹೆ

ದೇಶ, ಪ್ರಮುಖ ಸುದ್ದಿ
ನವದೆಹಲಿ: ಎಬೋಲಾ ವೈರಸ್‌ ಸೋಂಕು ಕುರಿತು ವಿಶ್ವ ಆರೋಗ್ಯ ಸಂಸ್ಥೆ (World Health Organization) ಜಾಗತಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಹಿನ್ನೆಲೆ, ಆಫ್ರಿಕಾದ ಕೆಲವು ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ತಪ್ಪಿಸುವಂತೆ ಭಾರತ ಸರ್ಕಾರ ನಾಗರಿಕರಿಗೆ ಸಲಹೆ ನೀಡಿದೆ.ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (Democratic Republic of the Congo, Uganda) ಹಾಗೂ ದಕ್ಷಿಣ ಸುಡಾನ್ (South Sudan) ದೇಶಗಳಿಗೆ ಅನಿವಾರ್ಯವಲ್ಲದ ಪ್ರಯಾಣ ಮಾಡಬಾರದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.ಮೇ 17ರಂದು WHO, ಅಂತರರಾಷ್ಟ್ರೀಯ ಆರೋಗ್ಯ ನಿಯಮಾವಳಿಗಳಡಿ (IHR) ಎಬೋಲಾ ಸೋಂಕಿನ ಏಕಾಏಕಿ ಪರಿಸ್ಥಿತಿಯನ್ನು “ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ” (PHEIC) ಎಂದು ಘೋಷಿಸಿತ್ತು.ಇದರ ಬೆನ್ನಲ್ಲೇ ಆಫ್ರಿಕಾ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಕೂಡ ಕಾಂಗೋ ಮತ್ತು ಉಗಾಂಡಾದಲ್ಲಿ ಹರಡುತ್ತಿರುವ ಬುಂಡಿಬುಗ್ಯೊ ತಳಿ ಎಬೋಲಾ ವೈರಸ್‌ ಸ್ಫೋಟವನ್ನು ಭೂಖಂಡದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ.WHO ತನ್ನ ಇ...
ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಅವರ ಇಲಾಖೆಯ ಸಾಧನೆಯೇ ಶ್ರೇಷ್ಠ !

ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಅವರ ಇಲಾಖೆಯ ಸಾಧನೆಯೇ ಶ್ರೇಷ್ಠ !

ದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸರ್ಕಾರದ ಇಲಾಖೆಗಳ ಪ್ರಗತಿ ಪರಿಶೀಲನೆ ಮತ್ತು ಮೌಲ್ಯಮಾಪನದಲ್ಲಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಅವರು ಮುನ್ನಡೆಸುತ್ತಿರುವ ಗ್ರಾಹಕ ವ್ಯವಹಾರಗಳ ಸಚಿವಾಲಯ ಮೊದಲ ಸ್ಥಾನ ಪಡೆದಿರುವುದು ಕರ್ನಾಟಕಕ್ಕೆ ಹೆಮ್ಮೆಯ ವಿಚಾರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ (B. Y. Vijayendra) ಹೇಳಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಪ್ರಲ್ಹಾದ್ ಜೋಶಿ ಅವರ ನಾಯಕತ್ವದಲ್ಲಿ ಸಚಿವಾಲಯವು ಸಾರ್ವಜನಿಕ ಕುಂದುಕೊರತೆಗಳ ತ್ವರಿತ ಪರಿಹಾರ, ಫೈಲ್ ವಿಲೇವಾರಿ ಸೇರಿದಂತೆ ಹಲವು ಮಾನದಂಡಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ ಎಂದು ತಿಳಿಸಿದ್ದಾರೆ.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಉತ್ತಮ ಆಡಳಿತ” ದೃಷ್ಟಿಕೋನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸಚಿವಾಲಯ ಯಶಸ್ವಿಯಾಗಿದೆ. ಇದು ಪ್ರಲ್ಹಾದ್ ಜೋಶಿ ಅವರ ಸಮರ್ಪಿತ ಆಡಳಿತ, ಪರಿಣಿತಿ ಮತ್ತು ಕರ್ತವ್ಯನಿಷ್ಠೆಗೆ ಸಾಕ್ಷಿಯಾಗಿದೆ ಎಂದು ವಿಜಯೇಂದ್ರ ಶ್ಲಾಘಿಸಿದ್ದಾರೆ. ...
ಆನೇಕಲ್‌ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದೆ ಕಮಿಶನ್‌ ರಾಜಕೀಯ?

ಆನೇಕಲ್‌ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದೆ ಕಮಿಶನ್‌ ರಾಜಕೀಯ?

ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ಆನೇಕಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಯೋಜನೆಯ ಹಿಂದೆ ಜಮೀನಿನ ಬೆಲೆ ಹೆಚ್ಚಿಸಿ ಕಮಿಶನ್‌ ಪಡೆಯುವ ಉದ್ದೇಶವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka) ಆರೋಪಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಪರಿಸರವಾದಿಗಳ ವಿರೋಧದ ನಡುವೆಯೂ ಸರ್ಕಾರ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿದರು.“ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂ (M. Chinnaswamy Stadium) ವರ್ಷಕ್ಕೆ ಕೇವಲ ನಾಲ್ಕೈದು ಬಾರಿ ಮಾತ್ರ ಬಳಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದ ಅಗತ್ಯವೇನು?” ಎಂದು ಅಶೋಕ್ ಪ್ರಶ್ನಿಸಿದರು.ಕ್ರೀಡಾಂಗಣದ ಸುತ್ತಮುತ್ತ ಜಮೀನಿನ ಬೆಲೆ ಹೆಚ್ಚಿಸಿ ಮಾರಾಟ ಮಾಡುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ಆನೇಕಲ್‌ನ ಯಾವುದೇ ಕ್ರೀಡಾಪಟು ಸರ್ಕಾರದ ಬಳಿ ಮನವಿ ಮಾಡಿಲ್ಲ. ಏಕಾಏಕಿ ಯೋಜನೆ ಘೋಷಿಸಿರುವುದು ಹಣ ಸಂಪಾದನೆಗಾಗಿ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.ಚಿನ್ನಸ್ವಾಮಿ ಕ್ರ...
ಕೋಮುಗಲಭೆ ಆರೋಪಿಗಳ ಕೇಸ್ ವಾಪಸ್‌; ಸರ್ಕಾರದ ನಿರ್ಧಾರದಿಂದ ರಾಜ್ಯದ ಭದ್ರತೆಗೆ ಅಪಾಯ

ಕೋಮುಗಲಭೆ ಆರೋಪಿಗಳ ಕೇಸ್ ವಾಪಸ್‌; ಸರ್ಕಾರದ ನಿರ್ಧಾರದಿಂದ ರಾಜ್ಯದ ಭದ್ರತೆಗೆ ಅಪಾಯ

ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ಕಲಬುರ್ಗಿಯಲ್ಲಿ ಕೋಮುಗಲಭೆ ಮಾಡಿದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್‌ ಸರ್ಕಾರ ಮತ್ತೆ ಮತಬ್ಯಾಂಕ್‌ ರಾಜಕಾರಣ ಮಾಡಿದೆ. ಇದು ರಾಜ್ಯದ ಭದ್ರತೆಗೆ ಅಪಾಯ ತಂದೊಡ್ಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿರುವವರ, ಸಚಿವರ ಕಾರಿನ ಮೇಲೆ ದಾಳಿ ಮಾಡಿರುವವರ, ದರ್ಗಾ ಹೆಸರಲ್ಲಿ ಕೋಮುಗಲಭೆ ಮಾಡಿರುವವರ ವಿರುದ್ಧ ಇದ್ದ ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆದಿದೆ. ಈ ಪ್ರಕರಣದಲ್ಲಿ ಪಾಪ್ಯುಲರ್‌ ಫ್ರಂಟ್‌ ಸೇರಿದಂತೆ ಸುಮಾರು 150 ಮಂದಿಯ ಮೇಲಿದ್ದ ಕೇಸುಗಳನ್ನು ತೆಗೆದುಹಾಕಿ ವೋಟ್‌ ಬ್ಯಾಂಕ್‌ ರಾಜಕೀಯ ಮಾಡಲಾಗಿದೆ. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಹಾಗೂ ಮುಖ್ಯಮಂತ್ರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮತ ನೀಡಿದರೆ ಸಾಕು, ಭಯೋತ್ಪಾದನೆ ಮಾಡಿದರೂ ಬೆಂಬಲಿಸುತ್ತೇವೆ ಎಂಬ ಸಂದೇಶವನ್ನು ಕಾಂಗ್ರೆಸ್‌ ನೀಡಿದೆ. ಇಂತಹ ಕ್ರಮಗಳಿಂದಾಗಿ ದೇಶದ ಭದ್ರತೆಗೆ ಅಪಾಯ ಬರುತ್ತದೆ ಎ...
ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

ಶ್ರೇಯಸ್ ಅಯ್ಯರ್ ಶತಕ: ಲಕ್ನೋಗೆ ಸೋಲುಣಿಸಿ ಪ್ಲೇಆಫ್ ರೇಸ್‌ನಲ್ಲಿ ಉಳಿದ ಪಂಜಾಬ್ ಕಿಂಗ್ಸ್

ದೇಶ, ಪ್ರಮುಖ ಸುದ್ದಿ, ವೀಡಿಯೊ
ಐಪಿಎಲ್ 2026ರ 68ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವು ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ತಂಡದ ಪರ ಜೋಶ್ ಇಂಗ್ಲಿಸ್ (Josh Inglis) 72 ರನ್ ಸಿಡಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪಂಜಾಬ್ ಪರ ಮಾರ್ಕೊ ಜಾನ್ಸೆನ್ (Marco Jansen) ಹಾಗೂ ಯುಜ್ವೇಂದ್ರ ಚಾಹಲ್ (Yuzvendra Chahal) ತಲಾ ಎರಡು ವಿಕೆಟ್ ಪಡೆದು ಮಿಂಚಿದರು.197 ರನ್ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶ್ರೇಯಸ್ ಐಯ್ಯರ್ (Shreyas Iyer) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 51 ಎಸೆತಗಳಲ್ಲಿ ಶತಕ ಸಿಡಿಸಿದ ಅಯ್ಯರ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. Cometh the hour, cometh the Captain! 🫡🔥🎥 What a way to bring up a maiden #TATAIPL ton and seal victory 👏Scorecard ▶️ https://t.co/2A...
ರಾಜ್ಯಸಭೆಗೆ ದೇವೇಗೌಡ ಮರು ಆಯ್ಕೆಗೆ ಮೈತ್ರಿ ಕಸರತ್ತು, ಪ್ರಧಾನಿ ನಿರ್ಧಾರದತ್ತ ಜೆಡಿಎಸ್ ಚಿತ್ತ

ರಾಜ್ಯಸಭೆಗೆ ದೇವೇಗೌಡ ಮರು ಆಯ್ಕೆಗೆ ಮೈತ್ರಿ ಕಸರತ್ತು, ಪ್ರಧಾನಿ ನಿರ್ಧಾರದತ್ತ ಜೆಡಿಎಸ್ ಚಿತ್ತ

ದೇಶ, ಪ್ರಮುಖ ಸುದ್ದಿ, ರಾಜ್ಯ
ಬೆಂಗಳೂರು: ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ರಾಜ್ಯಸಭಾ ಸ್ಥಾನಗಳ ಪೈಕಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸುವ ಕುರಿತು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದಲ್ಲಿ ಚರ್ಚೆಗಳು ಜೋರಾಗಿವೆ.ಪ್ರಸ್ತುತ ವಿಧಾನಸಭೆಯ ಸಂಖ್ಯಾಬಲದ ಲೆಕ್ಕಾಚಾರ ಪ್ರಕಾರ, ಒಬ್ಬ ಅಭ್ಯರ್ಥಿ ಗೆಲ್ಲಲು ಕನಿಷ್ಠ 45 ರಿಂದ 46 ಮತಗಳ ಅಗತ್ಯವಿದೆ. ಕಾಂಗ್ರೆಸ್ ಬಳಿ 136 ಶಾಸಕರ ಬಲವಿದ್ದು, ಪಕ್ಷವು ಮೂರು ಸ್ಥಾನಗಳನ್ನು ಸುಲಭವಾಗಿ ಗೆಲ್ಲುವ ಸ್ಥಿತಿಯಲ್ಲಿದೆ.ಇನ್ನೊಂದೆಡೆ ಬಿಜೆಪಿ ಬಳಿ 63 ಹಾಗೂ ಜೆಡಿಎಸ್ ಬಳಿ 18 ಶಾಸಕರಿದ್ದು, ಮೈತ್ರಿಕೂಟದ ಒಟ್ಟು ಬಲ 81ಕ್ಕೆ ತಲುಪುತ್ತದೆ. ಹೀಗಾಗಿ ಮೈತ್ರಿ ಅಭ್ಯರ್ಥಿಯಾಗಿ ಎಚ್.ಡಿ. ದೇವೇಗೌಡರನ್ನು ಕಣಕ್ಕಿಳಿಸಿದರೆ ಅವರ ಗೆಲುವು ಬಹುತೇಕ ಖಚಿತ ಎನ್ನಲಾಗುತ್ತಿದೆ.ದೇವೇಗೌಡರ ರಾಜಕೀಯ ಅನುಭವ, ಹಿರಿತನ ಮತ್ತು ರಾಷ್ಟ್ರೀಯ ಮಟ್ಟದ ಪ್ರಭಾವವನ್ನು ಪರಿಗಣಿಸಿ ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕು ಎಂಬ ಅಭಿಪ್ರಾಯ ಜೆಡಿಎಸ್ ವಲಯದಲ್ಲಿ ವ್ಯಕ್ತವಾಗಿದೆ. ಈ ಸಂಬಂಧ ಜೆಡಿಎಸ್ ನಾಯಕರು ಈಗಾಗಲೇ ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ಕಸರತ್ತು ಆರಂಭಿ...
ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

ಪ್ರಮುಖ ಸುದ್ದಿ, ರಾಜ್ಯ
ಕಲಬುರಗಿ: ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಚಿತ್ತಾಪುರ ತಾಲೂಕಿನ ಇಂಗಳಗಿ ಗ್ರಾಮದ ನಿವಾಸಿಗಳಾದ ತೋಲುಸಾಬ್ ಕ್ಯಾಶ್ವಾರ್ (27), ಹುಸೇನ್ ಷಾ (48), ಮೈಬೂಬ್ ಅಲಿ (45), ರಸೂಲ್ ಬೀ (42) ಹಾಗೂ ಫಾತೀಮಾ ಅಲಿ (38) ಮೃತಪಟ್ಟವರು ಎಂದು ಗುರುತಿಸಲಾಗಿದೆ.ಇವರೆಲ್ಲರೂ ಕೆಲಸ ಮುಗಿಸಿಕೊಂಡು ಕ್ರೂಸರ್ ವಾಹನದಲ್ಲಿ ತಮ್ಮ ಊರಾದ ಇಂಗಳಗಿಗೆ ಹಿಂದಿರುಗುತ್ತಿದ್ದರು. ಈ ವೇಳೆ ಲಾಡ್ಲಾಪುರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಲಾರಿಯೊಂದು ಕ್ರೂಸರ್ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.ಡಿಕ್ಕಿಯ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.ಒಂದೇ ಕುಟುಂಬದ ಐವರು ಒಂದೇ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಇಂಗಳಗಿ ಗ್ರಾಮದಲ್ಲಿ ಶೋಕ ಮಡುಗಟ್ಟುವಂತೆ ಮಾಡಿದೆ....
ಮತ್ತೆ ಏರಿದ ಇಂಧನ ದರ; ಬೆಂಗಳೂರಿನಲ್ಲಿ ಪೆಟ್ರೋಲ್ ₹107.14, ಡೀಸೆಲ್ ₹95.04

ಮತ್ತೆ ಏರಿದ ಇಂಧನ ದರ; ಬೆಂಗಳೂರಿನಲ್ಲಿ ಪೆಟ್ರೋಲ್ ₹107.14, ಡೀಸೆಲ್ ₹95.04

ದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ದೇಶದಲ್ಲಿ ದೀರ್ಘಕಾಲ ಸ್ಥಿರವಾಗಿದ್ದ ಇಂಧನ ದರಗಳಿಗೆ ಇದೀಗ ಜಾಗತಿಕ ಮಾರುಕಟ್ಟೆಯ ಬಿಸಿ ತಟ್ಟಿದೆ. ಶನಿವಾರ ತೈಲ ಕಂಪನಿಗಳು ಪೆಟ್ರೋಲ್ ದರವನ್ನು ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ದರವನ್ನು 91 ಪೈಸೆ ಹೆಚ್ಚಿಸಿವೆ.ಇಂಧನ ದರ ಏರಿಕೆಯಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ₹107.14 ಆಗಿದ್ದರೆ, ಡೀಸೆಲ್ ದರ ₹95.04ಕ್ಕೆ ಏರಿಕೆಯಾಗಿದೆ.ಇತ್ತೀಚಿನ ದಿನಗಳಲ್ಲಿ ತೈಲ ಕಂಪನಿಗಳು ನಿರಂತರವಾಗಿ ಇಂಧನ ದರ ಹೆಚ್ಚಳ ಮಾಡುತ್ತಿದ್ದು, ಮೇ ತಿಂಗಳಲ್ಲಿ ಇದು ಮೂರನೇ ಬಾರಿ ಏರಿಕೆಯಾಗಿದೆ. ಈ ವಾರದ ಆರಂಭದಲ್ಲಿಯೇ ಲೀಟರ್‌ಗೆ 90 ಪೈಸೆ ಹೆಚ್ಚಳ ಮಾಡಲಾಗಿತ್ತು. ಅದಕ್ಕೂ ಮೊದಲು ಸಾರ್ವಜನಿಕ ತೈಲ ಮಾರುಕಟ್ಟೆ ಕಂಪನಿಗಳು ಒಮ್ಮೆಗೆ ಸುಮಾರು ₹3ರವರೆಗೆ ದರ ಹೆಚ್ಚಿಸಿ ದೀರ್ಘಕಾಲದ ಸ್ಥಿರತೆಗೆ ಬ್ರೇಕ್ ಹಾಕಿದ್ದವು.ಇತ್ತೀಚಿನ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ₹98.64ರಿಂದ ₹99.51ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ ₹91.58ರಿಂದ ₹92.49ಕ್ಕೆ ತಲುಪಿದೆ.ಮುಂಬೈನಲ್ಲಿ ಪೆಟ್ರೋಲ್ ದರ ₹107.56 ಹಾಗೂ ಡೀಸೆಲ್ ₹94.05 ಆಗಿದೆ. ಚೆನ್ನೈನಲ್ಲಿ...
IPLನಲ್ಲಿ ಸನ್ ರೈಸರ್ಸ್ ಬೃಹತ್ ಮೊತ್ತದ ದಾಖಲೆ, RCB ಹೀನಾಯ ಸೋಲಿನ ಇತಿಹಾಸ

IPLನಲ್ಲಿ ಸನ್ ರೈಸರ್ಸ್ ಬೃಹತ್ ಮೊತ್ತದ ದಾಖಲೆ, RCB ಹೀನಾಯ ಸೋಲಿನ ಇತಿಹಾಸ

ದೇಶ, ಪ್ರಮುಖ ಸುದ್ದಿ
ಹೈದರಾಬಾದ್‌: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯ ಶುಕ್ರವಾರದ ಮಹತ್ವದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಜಯ ಸಾಧಿಸಿದೆ.ಹೈದರಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್‌ಗಳಲ್ಲಿ 255 ರನ್ ಕಲೆಹಾಕಿತು.ಬೃಹತ್ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್‌ಗಳಲ್ಲಿ 200 ರನ್ ಗಳಿಸಲಷ್ಟೇ ಶಕ್ತವಾಯಿತು. ಪರಿಣಾಮ, ಸನ್‌ರೈಸರ್ಸ್ ಹೈದರಾಬಾದ್ ತಂಡ ಭರ್ಜರಿ ಜಯ ದಾಖಲಿಸಿತು.ಈ ಪಂದ್ಯದಲ್ಲಿ 255 ರನ್ ಸಿಡಿಸಿದ ಹೈದರಾಬಾದ್ ತಂಡ ಐಪಿಎಲ್ ಇತಿಹಾಸದಲ್ಲೇ ಒಂದೇ ತಂಡದ ವಿರುದ್ಧ ಎರಡು ಬಾರಿ 250ಕ್ಕೂ ಅಧಿಕ ಮೊತ್ತ ಪೇರಿಸಿದ ವಿಶೇಷ ದಾಖಲೆಯನ್ನು ನಿರ್ಮಿಸಿದೆ.ಇನ್ನೊಂದೆಡೆ, ಈ ಸೋಲಿನೊಂದಿಗೆ ಆರ್‌ಸಿಬಿ ತಂಡ ಹೀನಾಯ ದಾಖಲೆಯೊಂದನ್ನು ತನ್ನ ಹೆಸರಿಗೆ ಸೇರಿಸಿಕೊಂಡಿದೆ. ಆದರೂ ಅಂಕಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನ ಕಾಯ್ದುಕೊಂಡಿದೆ.ಪ್ರಸ್ತುತ ಆರ್‌ಸಿಬಿ 18 ಅಂಕಗಳೊಂದಿಗೆ +0.783 ನೆಟ್ ರನ್‌ರೇಟ್ ಹ...