Sunday, August 9

ವಿದೇಶ

ಮೋದಿ ತೆರಳಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ; 4 ತಂಡಗಳಿಂದ ತನಿಖೆ

ಮೋದಿ ತೆರಳಿದ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ; 4 ತಂಡಗಳಿಂದ ತನಿಖೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೆಂಗಳೂರಿನ ಹೊರವಲಯದ ಆರ್ಟ್ ಆಫ್ ಲಿವಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಗಂಭೀರ ಲೋಪ ಸಂಭವಿಸಿದ್ದು, ಮೋದಿ ತೆರಳಿದ ಕೆಲವೇ ಗಂಟೆಗಳಲ್ಲಿ ಅವರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವ ಘಟನೆ ಆತಂಕ ಸೃಷ್ಟಿಸಿದೆ. ಕಗ್ಗಲೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಲ್ಕು ವಿಶೇಷ ತನಿಖಾ ತಂಡಗಳನ್ನು ರಚಿಸಿ ವಿಚಾರಣೆ ಆರಂಭಿಸಿದ್ದಾರೆ.ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೂತನ ಧ್ಯಾನ ಮಂದಿರ ಉದ್ಘಾಟನೆ ಹಾಗೂ ಸಂಸ್ಥೆಯ 45ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಕಾರ್ಯಕ್ರಮ ಮುಗಿಸಿ ವಾಪಸ್ ತೆರಳಿದ ಬಳಿಕ ತಾತಗುಣಿ ಬಳಿಯ ರಸ್ತೆ ಪಕ್ಕದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿರುವುದು ಸಂಶಯಕ್ಕೆ ಕಾರಣವಾಗಿದೆ. ಬೆಳಗ್ಗೆ 10 ಗಂಟೆಯ ಸುಮಾರಿಗೆ ಪೆಟ್ರೋಲಿಂಗ್ ವೇಳೆ ಪೊಲೀಸರು ವಸ್ತುವನ್ನು ಪತ್ತೆಹಚ್ಚಿ ತಕ್ಷಣವೇ ವಶಕ್ಕೆ ಪಡೆದಿದ್ದಾರೆ.ಘಟನಾ ಸ್ಥಳವನ್ನು ಸುತ್ತುವರಿದು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ನಂತರ ಸುಕೋ ತಂಡ ಮತ್ತು ಎಫ್‌ಎಸ್‌ಎಲ್ ತಂಡವೂ ...
ಸಚಿವ ಡಿ.ಸುಧಾಕರ್ ನಿಧನಕ್ಕೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂತಾಪ

ಸಚಿವ ಡಿ.ಸುಧಾಕರ್ ನಿಧನಕ್ಕೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂತಾಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕರ್ನಾಟಕದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರ ನಿಧನಕ್ಕೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಸಂತಾಪ ಸೂಚಿಸಿದ್ದಾರೆ.ರಾಹುಲ್ ಗಾಂಧಿ ತಮ್ಮ ಸಂತಾಪ ಸಂದೇಶದಲ್ಲಿ, “ಕಾಂಗ್ರೆಸ್ ಸಿದ್ಧಾಂತದ ದೀವಾಳಿ ಹರಿಕಾರರಾಗಿದ್ದ ಡಿ. ಸುಧಾಕರ್ ಅವರ ಜೀವನ ಚಿತ್ರದುರ್ಗ ಮತ್ತು ಕರ್ನಾಟಕದ ಬಡವರ ಸೇವೆಯಲ್ಲಿ ಕಳೆದಿದೆ” ಎಂದು ಹೇಳಿದ್ದಾರೆ. ಅವರ ನಿಧನವು ಪಕ್ಷಕ್ಕೆ ಮತ್ತು ಸಾರ್ವಜನಿಕ ಬದುಕಿಗೆ ದೊಡ್ಡ ನಷ್ಟವಾಗಿದೆ ಎಂದೂ ತಿಳಿಸಿದ್ದಾರೆ. Deeply saddened by the passing of senior Congress leader and Karnataka Minister, D. Sudhakar ji.A torchbearer of Congress ideology, his life was spent in service of the poor of Chitradurga and Karnataka.My condolences to his family and supporters. pic.twitter.com/3cuBwm9O5f— Rahul Gandhi (@RahulGandhi) May 10, 2026ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ X ಖಾತೆಯಲ್ಲಿ ಭಾವುಕ ಸಂದೇಶ ...
ರಾಜ್ಯ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕ

ರಾಜ್ಯ ಸಚಿವ ಡಿ. ಸುಧಾಕರ್ ನಿಧನ; ರಾಜಕೀಯ ವಲಯದಲ್ಲಿ ಶೋಕ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕರ್ನಾಟಕದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ಅವರು ಭಾನುವಾರ ಮುಂಜಾನೆ ಬೆಂಗಳೂರಿನ KIMS Hospital ನಲ್ಲಿ ನಿಧನರಾಗಿದ್ದಾರೆ.65 ವರ್ಷ ವಯಸ್ಸಿನ ಅವರು, ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.ಮೊದಲು ಮೊಣಕಾಲು ಶಸ್ತ್ರಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಡಿ. ಸುಧಾಕರ್ ಅವರಿಗೆ ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ನಂತರ ಅವರನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಭಾನುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿದ್ದ ಡಿ. ಸುಧಾಕರ್ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ರಾಜ್ಯ ರಾಜಕೀಯದಲ್ಲಿ ಚತುರ ತಂತ್ರಗಾರರಾಗಿ ಗುರುತಿಸಿಕೊಂಡಿದ್ದರು.ಸಚಿವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ರಾಜಕೀಯ ಮುಖಂಡರು ಮತ್ತು ಗಣ್ಯರ...
ವಿಕಲಚೇತನರಿಗೆ ಸಮಗ್ರ ಉದ್ಯೋಗ, ಕೌಶಲ್ಯ ವೇದಿಕೆ ಕಲ್ಪಿಸುವ “ಆದಿದ್ವಾರ” ಅಪ್ಲಿಕೇಶನ್ ಬಿಡುಗಡೆ

ವಿಕಲಚೇತನರಿಗೆ ಸಮಗ್ರ ಉದ್ಯೋಗ, ಕೌಶಲ್ಯ ವೇದಿಕೆ ಕಲ್ಪಿಸುವ “ಆದಿದ್ವಾರ” ಅಪ್ಲಿಕೇಶನ್ ಬಿಡುಗಡೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ವಿಕಲಚೇತನರಿಗೆ ಉದ್ಯೋಗ ಅವಕಾಶ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಲು ಅವಕಾಶ ಒದಗಿಸುವ "ಆದಿದ್ವಾರ" ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಲಾಗಿದೆ.ಅಸಿಸ್ಟೆಕ್ ಫೌಂಡೇಶನ್ (ಎಟಿಎಫ್) ಸಹಯೋಗದೊಂದಿಗೆ ವಿಕಾಸಸೌಧದಲ್ಲಿ ನಡೆದ ಸಮಾರಂಭದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ಅವರು ಅಪ್ಲಿಕೇಷನ್‌ ಬಿಡುಗಡೆ ಮಾಡಿದರು.ನಂತರ ಮಾತನಾಡಿದ ಸಚಿವರು, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಅಂಗವಿಕಲರಿಗೆ (ಪಿಡಬ್ಲ್ಯೂಡಿಗಳು) ವಿಶೇಷ ಉದ್ಯೋಗ ಮೇಳವನ್ನು ಆಗಸ್ಟ್ 2026 ರಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು."ವಿಕಲಚೇತನರು ಯಾರಿಗೂ ಕಡಿಮೆ ಇಲ್ಲ. ಅವರಿಗೆ ವಿಶೇಷ ಪ್ರತಿಭೆ ಇರುತ್ತದೆ. ಕಾರ್ಪೊರೇಟ್‌ ಸಂಸ್ಥೆಗಳು ನೇಮಕಾತಿಯ ಸಮಯದಲ್ಲಿ ಅವರಿಗೆ ಸಮಾನ ಅವಕಾಶ ಮತ್ತು ಚಿಕಿತ್ಸೆಯನ್ನು ನೀಡಬೇಕು" ಎಂದು ಡಾ. ಪಾಟೀಲ್ ಹೇಳಿದರು.ಆದಿದ್ವಾರ ವೇದಿಕೆಯು ಉದ್ಯೋಗಾವಕಾಶಗಳು, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ವೇದಿಕೆ ಕಲ್ಪಿಸುತ್ತದ...
ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಮತದಾರರ ಒಲವು ಇರುವುದು ಸಹಜ; ಬಿ.ವೈ. ವಿಜಯೇಂದ್ರ

ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಮತದಾರರ ಒಲವು ಇರುವುದು ಸಹಜ; ಬಿ.ವೈ. ವಿಜಯೇಂದ್ರ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ದಾವಣಗೆರೆ: ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y. Vijayendra) ಪ್ರತಿಕ್ರಿಯೆ ನೀಡಿದ್ದಾರೆ. ಈ ಉಪಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಗೆಲುವು ಸಾಧಿಸಲು ಸಾಧ್ಯವಾಗಿಲ್ಲವೆಂದು ಅವರು ಒಪ್ಪಿಕೊಂಡಿದ್ದಾರೆ.ಚುನಾವಣೆಯಲ್ಲಿ ಆಡಳಿತ ಪಕ್ಷದ ಪರವಾಗಿ ಮತದಾರರ ಒಲವು ಇರುವುದು ಸಹಜವೆಂದು ಹೇಳಿದ ವಿಜಯೇಂದ್ರ, ಕಾಂಗ್ರೆಸ್ (Congress) ಅಭ್ಯರ್ಥಿಗಳಿಗೆ ಅನುಕಂಪವೂ ಜೊತೆಗೆ ಸರ್ಕಾರದ ವ್ಯವಸ್ಥೆಗಳು, ಮುಖ್ಯಮಂತ್ರಿಗಳು ಹಾಗೂ ಸಚಿವರ ವ್ಯಾಪಕ ಪ್ರಚಾರ ಫಲಿತಾಂಶದ ಮೇಲೆ ಪ್ರಭಾವ ಬೀರಿದೆ ಎಂದು ವಿಶ್ಲೇಷಿಸಿದರು.ಹಿಂದೆ ಬಿ.ಎಸ್. ಯಡಿಯೂರಪ್ಪ (B.S. Yediyurappa) ಮುಖ್ಯಮಂತ್ರಿಯಾಗಿದ್ದ ವೇಳೆ 17 ಉಪಚುನಾವಣೆಗಳಲ್ಲಿ 15 ಕ್ಷೇತ್ರಗಳನ್ನು ಬಿಜೆಪಿ ಗೆದ್ದ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಈ ಬಾರಿ ಕೂಡ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಉತ್ತಮ ವಾತಾವರಣ ಇತ್ತು ಎಂದು ಹೇಳಿದರು.ಬಿಜೆಪಿ ಅಭ್ಯರ್ಥಿ ಶ್ರೀನಿವಾಸದಾಸ್ ಕರಿಯಪ್ಪ (Srinivasadas Kariyappa)...
ಶೃಂಗೇರಿಯಲ್ಲಿ ಕಾಂಗ್ರೆಸ್ ಮೂಕವಾಗಿದೆ, ಸತ್ಯಕ್ಕೆ ಗೆಲುವು ಸಿಕ್ಕಿದೆ; ಅಶೋಕ್ ಪ್ರತಿಕ್ರಿಯೆ

ಶೃಂಗೇರಿಯಲ್ಲಿ ಕಾಂಗ್ರೆಸ್ ಮೂಕವಾಗಿದೆ, ಸತ್ಯಕ್ಕೆ ಗೆಲುವು ಸಿಕ್ಕಿದೆ; ಅಶೋಕ್ ಪ್ರತಿಕ್ರಿಯೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಫಲಿತಾಂಶದ ಕುರಿತು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ.ಸಾಮಾಜಿಕ ಜಾಲತಾಣ ‘X’ನಲ್ಲಿ ಟ್ವೀಟ್ ಮಾಡಿದ ಅವರು, “ಶೃಂಗೇರಿಯಲ್ಲಿ ಕಾಂಗ್ರೆಸ್ ಮೂಕವಾಗಿದೆ – ಸತ್ಯಕ್ಕೆ ಗೆಲುವು!” ಎಂದು ಹೇಳಿದ್ದು, ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.“ಶೃಂಗೇರಿ ಮರುಎಣಿಕೆ ಫಲಿತಾಂಶಗಳು ಕಾಂಗ್ರೆಸ್ ಪಕ್ಷದ ಕರಾಳ ಮುಖವನ್ನು ಮತ್ತೊಮ್ಮೆ ಬಹಿರಂಗಪಡಿಸಿವೆ. ಜನರ ಜನಾದೇಶವನ್ನು ವಂಚಿಸಲು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ನ್ಯಾಯಾಂಗವು ಈಗ ಸೂಕ್ತ ಉತ್ತರ ನೀಡಿದೆ,” ಎಂದು ಅವರು ಆರೋಪಿಸಿದ್ದಾರೆ.2023ರ ಚುನಾವಣೆಯಲ್ಲಿ 279 ಅಂಚೆ ಮತಗಳನ್ನು ಅಕ್ರಮವಾಗಿ ತಿರಸ್ಕರಿಸಿ ಜನಾದೇಶವನ್ನು ಕದ್ದಿದ್ದಾರೆ ಎಂದು ಆರೋಪಿಸಿರುವ ಅವರು, ಆ ವೇಳೆ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರ ಅರ್ಜಿಯನ್ನು ವಜಾಗೊಳಿಸಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರನ್ನು ವಿಜೇತರಾಗಿ ಘೋಷಿಸಲಾಯಿತು ಎಂದು ಹೇಳಿದ್ದಾರೆ.ಹೈಕೋರ್ಟ್‌ಗೆ ಮೊರೆ ಹೋಗಿದ ಜೀವರಾಜ್ ಅವರ ಹ...
ವಾಣಿಜ್ಯ LPG ಸಿಲಿಂಡರ್ ಭಾರೀ ದುಬಾರಿ; ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೊರೆ ಹೆಚ್ಚಳ

ವಾಣಿಜ್ಯ LPG ಸಿಲಿಂಡರ್ ಭಾರೀ ದುಬಾರಿ; ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೊರೆ ಹೆಚ್ಚಳ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ, ಸಿಲಿಂಡರ್ ದರವನ್ನು ಬರೋಬ್ಬರಿ ₹993 ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ ವಲಯಗಳಿಗೆ ನೇರ ಪರಿಣಾಮ ಬೀಳಲಿದೆ.ವಾಣಿಜ್ಯ ಸಿಲಿಂಡರ್ ದರ ಏರಿಕೆಯ ನಡುವೆಯೇ, ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೇಶದ ಸುಮಾರು 33 ಕೋಟಿ ಗ್ರಾಹಕರು ಬಳಸುವ ಈ ಸಿಲಿಂಡರ್ ದರ ಯಥಾಸ್ಥಿತಿಯಲ್ಲೇ ಉಳಿದಿದೆ.ಇದೇ ವೇಳೆ, ವಾಹನ ಸವಾರರಿಗೆ ಮತ್ತೊಂದು ನೆಮ್ಮದಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ನೀಡುವ ಸೀಮೆಎಣ್ಣೆ ದರವೂ ಸ್ಥಿರವಾಗಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯಿದ್ದರೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ಎಟಿಎಫ್ (ATF) ದರವನ್ನು ಬದಲಾವಣೆ ಮಾಡದೇ ಉಳಿಸಲಾಗಿದೆ. ಗ್...
‘ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ’; ಅಶೋಕ್’ಗೆ ರಾಮಲಿಂಗಾ ರೆಡ್ಡಿ ತರಾಟೆ

‘ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ’; ಅಶೋಕ್’ಗೆ ರಾಮಲಿಂಗಾ ರೆಡ್ಡಿ ತರಾಟೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: 'ತಮ್ಮ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳು ಉತ್ತುಂಗದ ಅಭಿವೃದ್ಧಿಯಲ್ಲಿದ್ದವು ಎಂಬ ಭ್ರಮೆಯಿಂದ ಹೊರಬನ್ನಿ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. .ಅಶೋಕ್ ಅವರು ಸಾಮಾಜಿಕ ಮಾಧ್ಯಮ X ನಲ್ಲಿ ಹಾಕಿರುವ ಪೋಸ್ಟಿಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಸಿರುವ ರಾಮಲಿಂಗ ರೆಡ್ಡಿ, 'ತಾವು ಸಾರಿಗೆ ಮಂತ್ರಿಗಳಾಗಿದ್ದಾಗಲೇ ಮೊದಲ ಬಾರಿಗೆ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡುವ ಪದ್ಧತಿಗೆ ಅಡಿಪಾಯ ಹಾಕಿದ್ದು ತಾವು ಎಂಬುದು ತಿಳಿದಿದೆಯೇ? (ಮುಷ್ಕರದ ದಿನಾಂಕ: 13-09-2012 ಮತ್ತು 14-09-2012 )' ಎಂದು ಪ್ರಶ್ನಿಸಿದ್ದಾರೆ.'ತಮ್ಮದೇ ಬಿ.ಜೆ.ಪಿ ಪಕ್ಷದ ಆಡಳಿತ ಅವಧಿಯಲ್ಲಿ ಸಾರಿಗೆ ಸಂಸ್ಥೆಗಳ‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ 15 ದಿವಸಗಳ ಕಾಲ‌ ಮುಷ್ಕರ ಮಾಡಿಸಿರುವ ಕೀರ್ತಿ ನಿಮಗೆ ಸಲ್ಲಬೇಕು. ನಿಮ್ಮ ಅವಧಿಯಲ್ಲಿ ಎರಡೆರಡು ಬಾರಿ‌ ಮುಷ್ಕರ ನಡೆದದ್ದು ಮರೆತು‌ಬಿಟ್ಟೀರಾ? (ಮುಷ್ಕರದ ದಿನಾಂಕ: 11-12-2020 ರಿಂದ 14-12-2020 ( ನಾಲ್ಕು ದಿವಸ) ಮತ್ತು 07-04-2021 ರಿಂದ 21-04-2021 ( ಹದಿನೈದು ದಿ...
ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆ ಕಟ್ಟಡಗಳು, ಕಾಂಪೌಂಡ್‌ಗಳ ಪರಿಶೀಲನೆಗೆ ಶರಣಪ್ರಕಾಶ ಪಾಟೀಲ್ ಆದೇಶ

ಶಿಥಿಲಾವಸ್ಥೆಯಲ್ಲಿರುವ ಆಸ್ಪತ್ರೆ ಕಟ್ಟಡಗಳು, ಕಾಂಪೌಂಡ್‌ಗಳ ಪರಿಶೀಲನೆಗೆ ಶರಣಪ್ರಕಾಶ ಪಾಟೀಲ್ ಆದೇಶ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ನಮ್ಮ ವೈದ್ಯಕೀಯ ಶಿಕ್ಷಣ ಇಲಾಖೆಯಡಿಯಲ್ಲಿ ಬರುವ ಎಲ್ಲ ಆಸ್ಪತ್ರೆಯ ಕಟ್ಟಡಗಳನ್ನು ಹಾಗೂ ಕಾಂಪೌಂಡ್‌ಗಳನ್ನು ಪರಿಶೀಲನೆ ನಡೆಸಿ ಅಧ್ಯಯನ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ,ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ್ ತಿಳಿಸಿದ್ದಾರೆ.ಮಳೆಯಿಂದ ಬೌರಿಂಗ್‌ ಆಸ್ಪತ್ರೆ ಕಾಂಪೌಂಡ್‌ ಕುಸಿದು ಏಳು ಮಂದಿ ಮೃತಪಟ್ಟ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳು, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಸಚಿವರು ಈ ಮಾಹಿತಿ ನೀಡಿದರು.ಬೌರಿಂಗ್‌ ಆಸ್ಪತ್ರೆಯ ದುರಂತದ ಕುರಿತು ಲೋಕೋಪಯೋಗಿ ಇಲಾಖೆಯ ಮುಖ್ಯ ಅಭಿಯಂತರರ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಈ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಾ. ಪಾಟೀಲ್‌ ತಿಳಿಸಿದರು.ಬೌರಿಂಗ್‌ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿರುವ ಎಲ್ಲ ಆಸ್ಪತ್ರೆ ಕಟ್ಟಡಗಳನ್ನು ಹಾಗೂ ಕಾಂಪೌಂಡ್‌ಗಳನ್ನು ತಜ್ಞರ ತಂಡ ಪರಿಶೀಲನೆ ನಡೆಸಲು ಆದೇಶಿಸಲಾಗಿದ...
ICSE, ISC ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳಿಗೆ ಆನ್‌ಲೈನ್, SMS ಮೂಲಕ ಸಿಗಲಿದೆ ರಿಸಲ್ಟ್

ICSE, ISC ಫಲಿತಾಂಶ ಪ್ರಕಟ: ವಿದ್ಯಾರ್ಥಿಗಳಿಗೆ ಆನ್‌ಲೈನ್, SMS ಮೂಲಕ ಸಿಗಲಿದೆ ರಿಸಲ್ಟ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ನವದೆಹಲಿ: Council for the Indian School Certificate Examinations (CISCE) ಇಂದು 10ನೇ ತರಗತಿ (ICSE) ಹಾಗೂ 12ನೇ ತರಗತಿ (ISC) ಪರೀಕ್ಷೆಗಳ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ.ಫಲಿತಾಂಶವನ್ನು CISCE ಅಧಿಕೃತ ವೆಬ್‌ಸೈಟ್‌ಗಳಲ್ಲಿ — cisce.org ಮತ್ತು results.cisce.org — ನಲ್ಲಿ ಪರಿಶೀಲಿಸಬಹುದು. ವಿದ್ಯಾರ್ಥಿಗಳು ತಮ್ಮ ಯುನಿಕ್ ಐಡಿ (Unique ID) ಮತ್ತು ಇಂಡೆಕ್ಸ್ ಸಂಖ್ಯೆ (Index Number) ಬಳಸಿ ಲಾಗಿನ್ ಆಗಿ ಅಂಕಗಳನ್ನು ನೋಡಬಹುದು.SMS ಮೂಲಕವೂ ಫಲಿತಾಂಶ ಪಡೆಯುವ ವ್ಯವಸ್ಥೆ ಇದೆ:ICSE ವಿದ್ಯಾರ್ಥಿಗಳು: ICSE Unique ID ಎಂದು ಟೈಪ್ ಮಾಡಿ 09248082883 ಗೆ ಕಳುಹಿಸಬೇಕು ISC ವಿದ್ಯಾರ್ಥಿಗಳು: ISC Unique ID ಎಂದು ಟೈಪ್ ಮಾಡಿ 09248082883 ಗೆ ಕಳುಹಿಸಬೇಕುಫಲಿತಾಂಶದಿಂದ ತೃಪ್ತರಾಗದ ವಿದ್ಯಾರ್ಥಿಗಳಿಗೆ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಮೇ 4ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಇದೇ ವೇಳೆ, ಅನುತ್ತೀರ್ಣರಾದವರು ಅಥವಾ ಅಂಕ ಸುಧಾರಣೆ ಬಯಸುವವರು ಜೂನ್ ತಿಂಗಳಲ್ಲಿ ನಡೆಯಲಿರುವ ...