
ಉದ್ಯಮಿ ಸಿ.ಜೆ.ರಾಯ್ ಸಾವಿನ ಬಗ್ಗೆ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ SIT ತನಿಖೆಗೆ ಕ್ರಿಶ್ಚಿಯನ್ ಸಮುದಾಯ ಆಗ್ರಹ
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್‌ನ ಅಧ್ಯಕ್ಷರಾದ ಡಾ.ಸಿ.ಜೆ.ರಾಯ್ ಅವರ ಸಾವಿನ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಬೇಕೆಂದು ಕ್ರಿಶ್ಚಿಯನ್ ಸೇವಾ ಸಂಘ ಒತ್ತಾಯಿಸಿದೆ.ಕ್ರಿಶ್ಚಿಯನ್ ಸೇವಾ ಸಂಘ (ಸಿಎಸ್‌ಎಸ್) ದಕ್ಷಿಣ ಭಾರತದಾದ್ಯಂತ ಕ್ರಿಶ್ಚಿಯನ್ನರ ಕಲ್ಯಾಣ ಮತ್ತು ಉನ್ನತಿಯನ್ನು ಪರಿಶೀಲಿಸುವ ಜಾತ್ಯತೀತ ವೇದಿಕೆಯಾಗಿದ್ದು, ಇದೀಗ ತಮ್ಮ ಸಮುದಾಯದ ಖ್ಯಾತ ಉದ್ಯಮಿ ಡಾ.ಸಿ.ಜೆ.ರಾಯ್ ಸಾವಿನ ಪ್ರಕರಣದಲ್ಲಿ ಕಾನೂನು ಹೋರಾಟದ ಅನಿವಾರ್ಯತೆಯನ್ನು ಪ್ರತಿಪಾದಿಸಿದೆ. ಈ ಪ್ರಕರಣ ಬಗ್ಗೆ ಕರ್ನಾಟಕ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ (ವಿಶೇಷ ತನಿಖಾ ತಂಡ) ರಚಿಸಬೇಕೆಂದು ಕೋರಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಹಾಗೂ ಡಿಜಿಪಿಗೆ ಸಿಎಸ್‌ಎಸ್ ಅಧ್ಯಕ್ಷ ಶಾಜಿ ಟಿ ವರ್ಗೀಸ್ ಶನಿವಾರ ಮನವಿ ಸಲ್ಲಿಸಿದ್ದಾರೆ.ಕಾನ್ಫಿಡೆಂಟ್ ಗ್ರೂಪ್‌ನ ಡಾ.ಸಿ.ಜೆ. ರಾಯ್, ಕ್ರಿಶ್ಚಿಯನ್ ಉದ್ಯಮಿ, ದಾರ್ಶನಿಕ ರಿಯಲ್ ಎಸ್ಟೇಟ್ ಡೆವಲಪರ್, ಲೋಕೋಪಕಾರಿ ಮತ್ತು ಸಮಾಜ ಮತ್ತು ವಿ...







