Wednesday, August 12

ವಿದೇಶ

ಬೆಂವಿವಿಯ ಶಿಕ್ಷಣ ವಿಭಾಗದಿಂದ ಸಾವಿತ್ರಿ ಬಾಯಿ ಫುಲೆ 195ನೇ ಜಯಂತಿ ಆಚರಣೆ

ಬೆಂವಿವಿಯ ಶಿಕ್ಷಣ ವಿಭಾಗದಿಂದ ಸಾವಿತ್ರಿ ಬಾಯಿ ಫುಲೆ 195ನೇ ಜಯಂತಿ ಆಚರಣೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಶಿಕ್ಷಣ ವಿಭಾಗದಿಂದ ಅಯೋಜಿಸಿದ್ದ ಮಾತೆ ʻಸಾವಿತ್ರಿ ಬಾಯಿ ಫುಲೆʼ ಅವರ 195ನೇ ಜಯಂತಿ ಸಮಾರಂಭದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.ಶಿಕ್ಷಣ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಂ.ಸಿ. ಎರ್ರಿಸ್ವಾಮಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಸಾವಿತ್ರಿ ಬಾಯಿ ಫುಲೆ ಬಗ್ಗೆ ಹೆಚ್ಚು ಹೆಚ್ಚಾಗಿ ಪುಸ್ತಕಗಳನ್ನು ಓದಬೇಕು. ಸಾವಿತ್ರಿ ಬಾಯಿ ಫುಲೆ ಅವರು ಒಬ್ಬ ಶಿಕ್ಷಕಿಯಾಗಿ ಇವರ ಸೇವೆ ನಮ್ಮ ಸಮಾಜಕ್ಕೆ ದಾರಿ ದ್ವೀಪ ಇದ್ದಂತೆ, ಇವರ ಕೊಡುಗೆ ಅಪಾರ, ಸಮಾಜದ ಬೆಳಕಾಗಿ, ಕವಿಯಾಗಿ ತಮ್ಮ ಜೀವನ ಉದ್ದಕ್ಕೂ ಹಗಲಿರುಳು ಶ್ರಮಿಸಿದ ಹೆಮ್ಮೆಯ ಮಾತೆ ಎಂದರು.ವಿದ್ಯುನ್ಮಾನ ವಿಭಾಗದ ಪ್ರಾಧ್ಯಾಪಕರಾದ ಡಾ.ವಾಹಿನಿ ಅರವಿಂದ್ ಮಾತನಾಡಿ, ನನ್ನ ಅಧ್ಯಯನಕ್ಕೆ ಪೂರಕವಾಗಿ ಇಲ್ಲಿ ನನ್ನ ತಾತ ಅಜ್ಜ, ನನ್ನ ಅಪ್ಪ, ನನ್ನ ಮಾವ ಅಧ್ಯಾಪಕರಾಗಿದ್ದರು. ಪ್ರಮುಖ ಕ್ಷೇತ್ರಗಳೆಂದರೆ ಇವು ಅಧ್ಯಾಪಕ ವೃತ್ತಿ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಇಡೀ ಸಮಾಜಕ್ಕೆ ಮಾದರಿ. ಹಾಗೆ ಮಾತೆ ಸಾವಿತ್ರಿ ಬಾಯಿ ಫುಲೆರವರು ಆ ಕಾಲಘಟ್ಟದಲ್ಲಿ ಎಲ್ಲಾ ಮಹಿಳೆಯರ ಸಬಲೀಕರಣಕ್...
ವೈದ್ಯಕೀಯ ಶಿಕ್ಷಣ ಇಲಾಖೆ: ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆಗಳಿಗೆ ನೇಮಕ

ವೈದ್ಯಕೀಯ ಶಿಕ್ಷಣ ಇಲಾಖೆ: ಹೊರಗುತ್ತಿಗೆ ನೌಕರರನ್ನು ಗುತ್ತಿಗೆ ಹುದ್ದೆಗಳಿಗೆ ನೇಮಕ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸರ್ಕಾರದ ಆಡಳಿತದಲ್ಲಿ ಪ್ರಮುಖ ವಹಿಸುವ ಸಿಬ್ಬಂದಿಗಳಿಗೆ ಸೂಕ್ತ ವಿಮಾ ಭದ್ರತೆ ಒದಗಿವುಸು ಅತಿ ಮುಖ್ಯ ಮತ್ತು ಅತ್ಯಂತ ಜವಾಬ್ದಾರಿ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಸ್ನೇಹಿ ಕ್ರಮ ಕೈಗೊಳ್ಳಲು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ‌. ಶರಣಪ್ರಕಾಶ್ ಆರ್. ಪಾಟೀಲ್ ಮುಂದಾಗಿದ್ದಾರೆ.ತಮ್ಮ ಇಲಾಖೆ ವ್ಯಾಪ್ತಿಯ ಎಲ್ಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮತ್ತು ಕುಟುಂಬ ಸದಸ್ಯರಿಗೆ ವಿಮಾ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ನಿಧನರಾದ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಕುಟುಂಬ ಸದಸ್ಯರು ವಿಮಾ ಹಣ ಪಡೆಯಲು ತಾಂತ್ರಿಕ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಅವರು ತಮ್ಮ ಇಲಾಖೆಯ ಅಡಿಯಲ್ಲಿರುವ ಎಲ್ಲಾ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಾಮಾಜಿಕ ಭದ್ರತಾ ಕ್ರಮವಾಗಿ ಕಡ್ಡಾಯವಾಗಿ ಟರ್ಮ್‌ ಇನ್ಶೂರೆನ್ಸ್‌ ಪಡೆಯಬೇಕೆಂದು ಸೂಚಿಸಿದ್ದಾರೆ.ಶನಿವಾರ ನಡೆದ ವೈದ್ಯಕೀಯ ಕಾಲೇಜಿನ ಆಡಳಿತ ಮಂಡಳಿ ಸಭೆಯಲ್ಲಿ ಈ ವಿಷಯ ...

ಮತ್ತೆ ರಣಕಹಳೆ; ಆಶಾ ಕಾರ್ಯಕರ್ತೆಯರಿಂದ ಶನಿವಾರ ಪ್ರತಿಭಟನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯದ ಆಶಾ ಕಾರ್ಯಕರ್ತೆಯರು ಶನಿವಾರ ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಬಾಕಿ ವೇತನ ಬಿಡುಗಡೆ ಮಾಡಬೇಕು ಹಾಗೂ ರೂ.10,000 ಕನಿಷ್ಠ ವೇತನ ನಿಗದಿಗೆ ಆಗ್ರಹಿಸಿ ಈ ಹೋರಾಟ ನಡೆಯಲಿದೆ ಎಂದು ಆಶಾ ಸಂಘಟನೆ ನಾಯಕಿ ಟಿ.ಸಿ.ರಮಾ ತಿಳಿಸಿದ್ದಾರೆ.ಆಶಾ, ಕಾರ್ಯಕರ್ತೆಯರಿಗೆ ನಾಲ್ಕೈದು ತಿಂಗಳಿಂದ ಬಾಕಿ ಇರುವ ವೇತನ ಮತ್ತು ಮಾನ್ಯ ಮುಖ್ಯಮಂತ್ರಿಗಳು 2025 ಜನವರಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ರೂ.10,000 ಏಪ್ರಿಲ್ 2025 ರಿಂದ ಅನ್ವಯವಾಗುತ್ತದೆ ಎಂದು ಭರವಸೆ ನೀಡಿದ್ದರು. ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು. ಈಎರಡು ಪ್ರಮುಖ ಬೇಡಿಕೆಯೊಂದಿಗೆ ಬೆಂಗಳೂರು ಜಿಲ್ಲಾಮಟ್ಟದ ಪ್ರತಿಭಟನೆ ನಡೆಯಲಿದೆ ಎಂದು ಟಿ.ಸಿ.ರಮಾ ತಿಳಿಸಿದ್ದಾರೆ....
ಬಳ್ಳಾರಿ ಗುಂಡಿನ ದಾಳಿ ‘ಪೂರ್ವಯೋಜಿತ’: ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ ಆರೋಪ

ಬಳ್ಳಾರಿ ಗುಂಡಿನ ದಾಳಿ ‘ಪೂರ್ವಯೋಜಿತ’: ಜನಾರ್ದನ ರೆಡ್ಡಿ ಗುರಿಯಾಗಿಸಿ ದಾಳಿ ಆರೋಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬಳ್ಳಾರಿ: ನಗರದ ಬ್ಯಾನರ್ ಗಲಾಟೆ ಹಾಗೂ ಗುಂಡಿನ ದಾಳಿ ಪ್ರಕರಣ ರಾಜಕೀಯವಾಗಿ ತೀವ್ರ ತಿರುವು ಪಡೆದುಕೊಂಡಿದ್ದು, ಮಾಜಿ ಸಚಿವರಾದ ಬಿ. ಶ್ರೀರಾಮುಲು ಹಾಗೂ ಗಣಿಗಾರಿಕಾ ಉದ್ಯಮಿ ಜನಾರ್ದನ ರೆಡ್ಡಿ ಅವರು, ಈ ದಾಳಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡು ನಡೆಸಿದ ‘ಪೂರ್ವಯೋಜಿತ ದಾಳಿ’ ಎಂದು ಗಂಭೀರ ಆರೋಪ ಮಾಡಿದ್ದಾರೆ.ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಇದು ಆಕಸ್ಮಿಕ ಘಟನೆ ಅಲ್ಲ. ಜನಾರ್ದನ ರೆಡ್ಡಿಯವರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಸಂಪೂರ್ಣವಾಗಿ ಸುಟ್ಟುಹಾಕುವ ಉದ್ದೇಶದೊಂದಿಗೆ ದಾಳಿ ನಡೆಸಲಾಗಿದೆ,” ಎಂದು ಹೇಳಿದರು. ಇದೇ ವೇಳೆ, ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ವಿರುದ್ಧವೂ ಅವರು ಆರೋಪ ಹೊರಿಸಿದರು.“ಕಾಂಗ್ರೆಸ್ ಕಾರ್ಯಕರ್ತರು ಕೇವಲ ಬ್ಯಾನರ್ ಕಟ್ಟಲು ಬಂದಿರಲಿಲ್ಲ. ಜನಾರ್ದನ ರೆಡ್ಡಿಯವರ ಮೇಲೆ ಗುಂಡು ಹಾರಿಸುವ ಹಾಗೂ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದಲೇ ಬಂದಿದ್ದರು. ಗುಂಡು ಗಾಳಿಗೆ ಹಾರಿಸಲ್ಪಟ್ಟಿಲ್ಲ, ಅದು ನೇರವಾಗಿ ಜನಾರ್ದನ ರೆಡ್ಡಿಯವರನ್ನೇ ಗುರಿಯಾಗಿಸಿಕೊಂಡಿತ್ತು. ದುರ್ಬಾಗ್ಯವಶಾತ್, ಅಮಾಯಕ ಯುವಕ ರಾಜಶೇಖರ್ ಪ್ರಾಣ ಕಳೆದುಕೊಂಡ...
ಬಳ್ಳಾರಿ ಘಟನೆ: ಗುಂಪುಘರ್ಷಣೆ ತನಿಖೆಗೆ ಸೂಚನೆ – ಸಿಎಂ ಸಿದ್ದರಾಮಯ್ಯ

ಬಳ್ಳಾರಿ ಘಟನೆ: ಗುಂಪುಘರ್ಷಣೆ ತನಿಖೆಗೆ ಸೂಚನೆ – ಸಿಎಂ ಸಿದ್ದರಾಮಯ್ಯ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬಳ್ಳಾರಿಯಲ್ಲಿ ಮಾಜಿ ಸಚಿವ ಜನಾರ್ಧನ ರೆಡ್ಡಿಯವರ ನಿವಾಸದ ಸಮೀಪ ನಡೆದ ಗುಂಪುಘರ್ಷಣೆ ಹಾಗೂ ಗೋಲಿಬಾರ್ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಎಂಬ ಯುವಕ ಮೃತಪಟ್ಟಿರುವುದು ಅತ್ಯಂತ ದುಃಖಕರ ಸಂಗತಿ ಎಂದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ಆರಂಭಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಗನ್ ಯಾರಿಗೆ ಸೇರಿದ್ದು, ಹೇಗೆ ಬಳಸಲಾಗಿದೆ ಎಂಬ ಎಲ್ಲ ಅಂಶಗಳನ್ನು ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಸತೀಶ್ ರೆಡ್ಡಿಯವರು ಗಾಳಿಯಲ್ಲಿ ಗುಂಡು ಹಾರಿಸಲು ಯತ್ನಿಸಿದ ವೇಳೆ ಅದು ತಪ್ಪಾಗಿ ರಾಜಶೇಖರ್‌ಗೆ ತಗುಲಿರುವ ಸಾಧ್ಯತೆಯೂ ಇದೆ. ಈ ಎಲ್ಲ ಅಂಶಗಳನ್ನು ತನಿಖೆಯ ಮೂಲಕ ಸ್ಪಷ್ಟಪಡಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದ್ದು, ತಪ್ಪಿತಸ್ಥರು ಯಾರು ಎನ್ನುವು...
ಕೋಗಿಲು ವಿವಾದ:  ಸರ್ಕಾರ ನಿಜವಾದ ಸಮಸ್ಯೆಯಿಂದ ಗಮನ ಬೇರೆಡೆ ತಿರುಗಿಸುತ್ತಿದೆ: ಬಿಜೆಪಿ ಶಾಸಕ

ಕೋಗಿಲು ವಿವಾದ: ಸರ್ಕಾರ ನಿಜವಾದ ಸಮಸ್ಯೆಯಿಂದ ಗಮನ ಬೇರೆಡೆ ತಿರುಗಿಸುತ್ತಿದೆ: ಬಿಜೆಪಿ ಶಾಸಕ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೆಂಗಳೂರಿನಲ್ಲಿ ಅತಿಕ್ರಮಣಗೊಂಡ ಸರ್ಕಾರಿ ಭೂಮಿ ತೆರವು ಹಾಗೂ ಅತಿಕ್ರಮಣದಾರರ ಪುನರ್ವಸತಿ ವಿಚಾರ ರಾಜಕೀಯ ತೀವ್ರತೆ ಪಡೆದುಕೊಂಡಿರುವ ನಡುವೆ, ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಶಾಸಕ ಸಿ.ಎನ್. ಅಶ್ವತ್ಥ ನಾರಾಯಣ್ ಅವರು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಅತಿಕ್ರಮಣ ಮಾಡಿದವರೆಲ್ಲರೂ ಬಾಂಗ್ಲಾದೇಶೀಯರು. ತಾಂತ್ರಿಕವಾಗಿ ಯಾರೂ ಮನೆ ಹಂಚಿಕೆಗೆ ಅರ್ಹರಲ್ಲ. ಈ ವಿಚಾರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸಬೇಕು. ಇಲಾಖಾ ವರದಿಗಳಲ್ಲಿಯೇ ಇದಕ್ಕೆ ಸಾಕ್ಷ್ಯವಿದೆ. ರಾಜ್ಯದಲ್ಲಿ ಸುಮಾರು 25 ಲಕ್ಷ ಬಾಂಗ್ಲಾದೇಶೀಯರು ಅಕ್ರಮವಾಗಿ ನೆಲೆಸಿದ್ದಾರೆ” ಎಂದು ಹೇಳಿದರು.ಅಕ್ರಮ ವಲಸೆಯೇ ಮೂಲ ಸಮಸ್ಯೆಯಾಗಿದ್ದು, ಬಡವರಿಗೆ ಮನೆ ನೀಡುವ ನೆಪದಲ್ಲಿ ಸರ್ಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದೆ ಎಂದು ಅವರು ಆರೋಪಿಸಿದರು. “ಚರ್ಚೆ ಅಕ್ರಮ ವಲಸಿಗರ ಕುರಿತು ನಡೆಯಬೇಕಿತ್ತು. ಆದರೆ ಅದನ್ನು ಮರೆಮಾಚಿ ವಸತಿ ವಿಷಯವನ್ನೇ ಮುಂದಿಟ್ಟುಕೊಳ್ಳಲಾಗುತ್ತಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸ...
ಕಾಂಗ್ರೆಸ್ ಬಿಕ್ಕಟ್ಟು ನಡುವೆ ಗೃಹ ಸಚಿವ ಪರಮೇಶ್ವರ್’ಗೆ ಲಕ್?

ಕಾಂಗ್ರೆಸ್ ಬಿಕ್ಕಟ್ಟು ನಡುವೆ ಗೃಹ ಸಚಿವ ಪರಮೇಶ್ವರ್’ಗೆ ಲಕ್?

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಾಯಕತ್ವದ ಚರ್ಚೆಯ ನಡುವೆಯೇ, ರಾಜ್ಯ ಗೃಹ ಸಚಿವ ಹಾಗೂ ಹಿರಿಯ ದಲಿತ ನಾಯಕ ಜಿ. ಪರಮೇಶ್ವರ ಅವರು ಈ ವರ್ಷ ‘ಬಡ್ತಿ’ ಸಿಗುವ ವಿಶ್ವಾಸದಲ್ಲಿದ್ದಾರೆ. ಆದರೆ ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್‌ಗೇ ಸೇರಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ನಾಯಕತ್ವ ಬದಲಾವಣೆಯ ಸಾಧ್ಯತೆ ಕುರಿತು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಸಿದ್ದರಾಮಯ್ಯ ಪಾಳಯವು ಪರಮೇಶ್ವರ ಅವರನ್ನು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಮುಂದಿಟ್ಟು ಮಾತನಾಡುತ್ತಿರುವ ಹಿನ್ನೆಲೆಯಲ್ಲಿ ಅವರ ಹೇಳಿಕೆ ರಾಜಕೀಯ ಮಹತ್ವ ಪಡೆದುಕೊಂಡಿದೆ.ತಮ್ಮ ರಾಜಕೀಯ ಜೀವನದಲ್ಲಿ ಮುಂದಿನ ಹಂತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಹೈಕಮಾಂಡ್ ನಿರ್ಧರಿಸಿದರೆ 2026ರಲ್ಲಿ ಅದು ಸಾಧ್ಯವಾಗಬಹುದು ಎಂದು ಹೇಳಿದರು. “ನಾನು ಸದಾ ಆಶಾವಾದಿಯಾಗಿ ಬದುಕಿದ್ದೇನೆ. ಇದು ಹೊಸ ವಿಚಾರವಲ್ಲ,” ಎಂದರು.ಮಹತ್ವಾಕಾಂಕ್ಷೆ ಕುರಿತು ಮಾತನಾಡಿದ ಅವರು, “ಒಬ್ಬ ಮನುಷ್ಯನಲ್ಲಿ ಮಹತ್ವಾಕಾಂಕ್ಷೆ ಇರಬೇಕು. ರಾಜಕೀಯಕ್ಕೆ ಬಂದಾ...
ಸಿಎಂ ಸಿದ್ದರಾಮಯ್ಯರಿಗೆ ಶೇಮ್; ನಿಮ್ಮ ಕಾನೂನಿಗೆ ಬೆಲೆ ಇಲ್ಲ? ಪೊಳಲಿ ಸೊಸೈಟಿ ಮೆನೇಜರ್ ಮೇಲೆ FIR

ಸಿಎಂ ಸಿದ್ದರಾಮಯ್ಯರಿಗೆ ಶೇಮ್; ನಿಮ್ಮ ಕಾನೂನಿಗೆ ಬೆಲೆ ಇಲ್ಲ? ಪೊಳಲಿ ಸೊಸೈಟಿ ಮೆನೇಜರ್ ಮೇಲೆ FIR

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಮಂಗಳೂರು: ಹಣಕಾಸು ವಹಿವಾಟು ಹೆಸರಿನಲ್ಲಿ ಅಮಾಯಕರನ್ನು ಪೀಡಿಸದಂತೆ ರಾಜ್ಯ ಸರ್ಕಾರ ಕಠಿಣ ಕಾನೂನನ್ನು ಜಾರಿಗೆ ತಂದಿದ್ದರೂ ಸಹಕಾರಿ ಸಂಘಗಳು ತಮ್ಮ ಚಾಳಿಯನ್ನು ಬಿಟ್ಟಿಲ್ಲ. ಸಾಲ ವಸೂಲಾತಿ ಹೆಸರಲ್ಲಿ ಅಮಾಯಕ (ಸಾಲವನ್ನೇ ಪಡೆಯದ) ವೃದ್ಧೆಯನ್ನು ಪೀಡಿಸಿರುವ ಅಮಾನವೀಯ ಕೃತ್ಯವೊಂದು ಮಂಗಳೂರು ಬಳಿ ನಡೆದಿದೆ. ಈ ಸಂಬಂಧ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣ ಸಿಎಂ ಸಿದ್ದರಾಮಯ್ಯ ಅವರ ಸಚಿವಾಲಯವನ್ನೇ ಮುಜುಗರಕ್ಕೀಡು ಮಾಡಿದೆ.ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ವಿಜಯ ಫೆರ್ನಾಂಡೀಸ್ ಎಂಬವರು ನಕಲಿ ದಾಖಲೆಗಳನ್ನು ಹಿಡಿದುಕೊಂಡು ವೃದ್ಧೆಯನ್ನು ಪೀಡಿಸಿ ಇದೀಗ ಬಂಧನ ಭೀತಿಗೆ ಸಿಲುಕಿದ್ದಾರೆ. ಬುಧವಾರ (31.12.2025) ಬೆಳಿಗ್ಗೆ ಅಧಿಕಾರಿಗಳ ಸೋಗಿನಲ್ಲಿ ಮನೆ ಆವರಣಕ್ಕೆ ಅತಿಕ್ರಮಣ ಪ್ರವೇಶ, ಮನೆ ಜಪ್ತಿ ಹೆಸರಿನಲ್ಲಿ ಸಾಲ ವಸೂಲಿಗೆ ಯತ್ನಿಸಿರುವ ಹಾಗೂ ವಯೋವೃದ್ಧೆ ಎಂದೂ ಗಮನಿಸದೆ ಬೆದರಿಕೆ ಒಡ್ಡಿರುವ ಬಗ್ಗೆ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ಪೊಲೀಸ್ ದೂರಿನಲ್ಲಿ ಏನಿದೆ?ದಕ್ಸಿಣಕನ್ನಡ ಜಿಲ್ಲೆ ...
ಎಲ್ಲಾ ಒತ್ತುವರಿಗಳಿಗೂ ‘ಕೋಗಿಲು’ ಮಾನದಂಡ ಅನ್ವಯಿಸುತ್ತದೆಯೇ?

ಎಲ್ಲಾ ಒತ್ತುವರಿಗಳಿಗೂ ‘ಕೋಗಿಲು’ ಮಾನದಂಡ ಅನ್ವಯಿಸುತ್ತದೆಯೇ?

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕೋಗಿಲು ಬಡಾವಣೆಯ ಅಕ್ರಮ ಒತ್ತುವರಿದಾರರಿಗೆ ಪುನರ್ವಸತಿ ನೀಡುವುದೇ ರಾಜ್ಯ ಸರ್ಕಾರದ ನೀತಿಯಾದರೆ, ರಾಜ್ಯದಾದ್ಯಂತ ತೆರವುಗೊಂಡ ಎಲ್ಲಾ ಒತ್ತುವರಿಗಳಿಗೂ ಇದೇ ಮಾನದಂಡ ಅನ್ವಯಿಸುತ್ತದೆಯೇ? ಎಂದು ಪ್ರತಿಪಕ್ಷ ಬಿಜೆಪಿ ಪ್ರಶ್ನಿಸಿದೆ.ರಾಜಕಾಲುವೆ ನುಂಗಿದ ಪ್ರಭಾವಿ ಬಿಲ್ಡರ್‌ಗಳ ಮೇಲೂ ಇದೇ 'ಮಾನವೀಯತೆ' ತೋರುತ್ತೀರಾ? ಮನೆ ಕಳೆದುಕೊಂಡು ಬೀದಿಗೆ ಬಿದ್ದ ಸಾವಿರಾರು ಬಡ ಕನ್ನಡಿಗರಿಗಿಲ್ಲದ ನ್ಯಾಯ, ವಲಸಿಗರಿಗೆ ಮಾತ್ರವೇಕೆ? ಎಂದು ಬಿಜೆಪಿ ಮಾಧ್ಯಮದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದೆ.ಕನ್ನಡಿಗರ ಹಿತ ಕಾಯಬೇಕಾದ ಸರ್ಕಾರಕ್ಕೆ ನೆರೆಯ ರಾಜ್ಯದವರ ಒತ್ತಡವೇ ದೊಡ್ಡದಾಯಿತೇ? ದಶಕಗಳಿಂದ ಸ್ವಂತ ಸೂರಿಲ್ಲದೆ ಕಾಯುತ್ತಿರುವ ಲಕ್ಷಾಂತರ ಬಡ ಕನ್ನಡಿಗರನ್ನು ಕಡೆಗಣಿಸಿ, ಕಾನೂನುಬಾಹಿರವಾಗಿ ಒತ್ತುವರಿ ಮಾಡಿದವರಿಗೆ 'ವಿಶೇಷ ಆತಿಥ್ಯ' ನೀಡುತ್ತಿರುವುದು ನಾಚಿಕೆಗೇಡು ಎಂದಿರುವ ಬಿಜೆಪಿ, ತಕ್ಷಣವೇ ಈ ವಿಶೇಷ ಪುನರ್ವಸತಿ ತೀರ್ಮಾನವನ್ನು ಹಿಂಪಡೆಯಿರಿ. ಕಾನೂನು ಎಲ್ಲರಿಗೂ ಒಂದೇ ಆಗಿರಲಿ ಮತ್ತು ನಮ್ಮ ನೆಲದ ಬಡವರಿಗೆ ವಸತಿ ಯೋಜನೆಗಳಲ್ಲಿ ಮೊದಲ ಆದ್ಯತೆ ಸಿಗಲಿ ಎಂದು ಸಲಹೆ ಮಾಡಿದೆ....
ಮನರೇಗಾ ಮೂಲ ಆಶಯಕ್ಕೆ ಹೊಸ ಕಾಯ್ದೆ ವಿರುದ್ಧವಾಗಿದೆ ಎಂದ ಸಿಎಂ

ಮನರೇಗಾ ಮೂಲ ಆಶಯಕ್ಕೆ ಹೊಸ ಕಾಯ್ದೆ ವಿರುದ್ಧವಾಗಿದೆ ಎಂದ ಸಿಎಂ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಹೊಸ ಕಾಯ್ದೆಯು ರಾಜ್ಯವು ತನ್ನ ಮಾನದಂಡ ಹಂಚಿಕೆಯನ್ನು ಮೀರಿ ಭರಿಸಬೇಕಾದ ಯಾವುದೇ ವೆಚ್ಚವನ್ನು ಕೇಂದ್ರ ಸರ್ಕಾರವು ನಿರ್ದೇಶಿಸಿದ ಕ್ರಮಗಳ ಪ್ರಕಾರ ರಾಜ್ಯಗಳೇ ಹೊರಬೇಕು ಎಂದು ಹೇಳುತ್ತದೆ. ಇದು ಕೇಂದ್ರವು ನಿಗದಿಪಡಿಸಿದ ಮಿತಿಯನ್ನು ಮೀರಿದ ಬೇಡಿಕೆಗೆ 100% ಜವಾಬ್ದಾರಿಯನ್ನು ರಾಜ್ಯಗಳು ಹೊರುವಂತೆ ಮಾಡಬಹುದು. ರಾಜ್ಯವು ನಿಗದಿತ ಅಥವಾ ಅದನ್ನು ಮೀರಿದ ವೆಚ್ಚವನ್ನು ಭರಿಸಲು ಸಾಧ್ಯವಾಗದಿದ್ದರೆ, ಜನರ ಅರ್ಹ ಕೂಲಿ ಅವಧಿಯ ಹಕ್ಕನ್ನು ಜಾರಿಗೊಳಿಸಲು ಸಾಧ್ಯವಿಲ್ಲ, ಇದು ಬೇಡಿಕೆ ಇರುವ ಕಡೆಗಳಲ್ಲಿ ಅನುದಾನ ನೀಡಲೇಬೇಕು ಎಂಬ ಮೂಲ ಆಶಯಕ್ಕೆ ವಿರುದ್ಧವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.ಈ ಕಾಯ್ದೆಯು ಬಿತ್ತನೆ ಮತ್ತು ಕೊಯ್ಲು ಹೆಚ್ಚಾಗಿ ನಡೆಯುವ ಸಮಯದಲ್ಲಿ ಒಟ್ಟು 60 ದಿನಗಳ ಅವಧಿ ಕಾಮಗಾರಿಗಳನ್ನು ನಡೆಸದಿರುವ ಬಗ್ಗೆ ಮುಂಚಿತವಾಗಿ ಅಧಿಸೂಚಿಸಬೇಕು ಎಂದು ಆದೇಶಿಸುತ್ತದೆ. ಕೃಷಿ ಚಟುವಟಿಕೆಗಳು ಆ ಸಮಯದಲ್ಲಿ ಹೆಚ್ಚಾಗಬಹುದಾದರೂ, ಇ...