Thursday, August 13

ವಿದೇಶ

‘ಹಿಂದೂ ಧರ್ಮವೂ ನೋಂದಣಿಯಾಗಿಲ್ಲ’: RSS ಕಾನೂನು ಸ್ಥಿತಿ ಕುರಿತು ಭಾಗವತ್ ಸ್ಪಷ್ಟನೆ

‘ಹಿಂದೂ ಧರ್ಮವೂ ನೋಂದಣಿಯಾಗಿಲ್ಲ’: RSS ಕಾನೂನು ಸ್ಥಿತಿ ಕುರಿತು ಭಾಗವತ್ ಸ್ಪಷ್ಟನೆ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು, ಸಂಘದ ಕಾನೂನು ದೃಢೀಕರಣ ಹಾಗೂ ನೋಂದಣಿ ಕುರಿತ ಪ್ರಶ್ನೆಗೆ ಸ್ಪಷ್ಟನೆ ನೀಡುತ್ತಾ — “ನೋಂದಣಿ ಇಲ್ಲದೆ ಅನೇಕ ವಿಷಯಗಳು ಅಸ್ತಿತ್ವದಲ್ಲಿವೆ. ಹಿಂದೂ ಧರ್ಮವೂ ಸಹ ನೋಂದಾಯಿಸಲ್ಪಟ್ಟಿಲ್ಲ” ಎಂದು ಹೇಳಿದರು.ಭಾನುವಾರ ಬೆಂಗಳೂರಿನಲ್ಲಿ ನಡೆದ ‘100 ವರ್ಷಗಳ ಸಂಘ ಪ್ರಯಾಣ: ಹೊಸ ದಿಗಂತಗಳು’ ಕಾರ್ಯಕ್ರಮದ ಎರಡನೇ ದಿನದ ಪ್ರಶ್ನೋತ್ತರ ಸತ್ರದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.“ಈ ಪ್ರಶ್ನೆಗೆ ಹಲವಾರು ಬಾರಿ ಉತ್ತರಿಸಲಾಗಿದೆ. ಕೇಳುವವರು ಪುನಃ ಪುನಃ ಅದನ್ನೇ ಕೇಳುತ್ತಾರೆ. ನಾವು ಪ್ರತೀ ಬಾರಿ ಉತ್ತರಿಸುತ್ತಲೇ ಇದ್ದೇವೆ. ಇದು ಹೊಸ ಪ್ರಶ್ನೆಯೇ ಅಲ್ಲ” ಎಂದು ಭಾಗವತ್ ಹೇಳಿದರು,“ಆರ್‌ಎಸ್‌ಎಸ್ 1925ರಲ್ಲಿ ಪ್ರಾರಂಭವಾಯಿತು. ನಮ್ಮ ಸರಸಂಘಚಾಲಕರೇ ಹೋರಾಡುತ್ತಿದ್ದ ಆ ಸರ್ಕಾರದೊಡನೆ ನಾವು ನೋಂದಾಯಿಸಿಕೊಂಡಿರುತ್ತೇವೇ? ಸ್ವಾತಂತ್ರ್ಯಾನಂತರ ಕಾನೂನುಗಳು ನೋಂದಣಿಯನ್ನು ಕಡ್ಡಾಯಗೊಳಿಸಲಿಲ್ಲ. ನೋಂದಣಿಯಾಗದ ಸಂಸ್ಥೆಗೂ ಕಾನೂನು ಮಾನ್ಯತೆ ಇದೆ. ನಮ್ಮನ್ನೂ ಅಂತಹ ಸಂಸ್ಥೆಯೆಂದು ಪರಿಗಣಿಸಲಾಗಿದೆ,” ...
ಬಿಹಾರ ಚುನಾವಣೆಯ ಕ್ಲೈಮಾಕ್ಸ್: ಎರಡನೇ ಹಂತದ ಪ್ರಚಾರ ಅಂತ್ಯ

ಬಿಹಾರ ಚುನಾವಣೆಯ ಕ್ಲೈಮಾಕ್ಸ್: ಎರಡನೇ ಹಂತದ ಪ್ರಚಾರ ಅಂತ್ಯ

ಪ್ರಮುಖ ಸುದ್ದಿ, ವಿದೇಶ
ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆ 2025 ನಿರ್ಣಾಯಕ ಹಂತಕ್ಕೆ ಕಾಲಿಟ್ಟಿದ್ದು, ಎರಡನೇ ಮತ್ತು ಅಂತಿಮ ಹಂತದ ಪ್ರಚಾರ ಭಾನುವಾರ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ.ವಾರಗಳ ರಾಜಕೀಯ ಬಿಸಿಯಾಗಿರುವ ಬಳಿಕ, ಪಕ್ಷಗಳು ಈಗ ನವೆಂಬರ್ 11ರಂದು ನಡೆಯಲಿರುವ ಮತದಾನದತ್ತ ಗಮನ ಹರಿಸಿವೆ. ಈ ಹಂತದಲ್ಲಿ ರಾಜ್ಯದ 20 ಜಿಲ್ಲೆಗಳಾದ್ಯಂತ 122 ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಬಿಹಾರದ ಮುಂದಿನ ಸರ್ಕಾರವನ್ನು ತೀರ್ಮಾನಿಸುವ ಮಹತ್ವದ ಹಂತವೆಂದು ಪರಿಗಣಿಸಲಾಗಿದೆ.ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ, ಒಟ್ಟು 1,302 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ — ಇವರಲ್ಲಿ 1,165 ಮಂದಿ ಪುರುಷರು, 136 ಮಹಿಳೆಯರು ಹಾಗೂ ಒಬ್ಬ ತೃತೀಯ ಲಿಂಗದ ಅಭ್ಯರ್ಥಿ ಇದ್ದಾರೆ. ಈ ಹಂತದಲ್ಲಿ ಸುಮಾರು 3.7 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ; ಇವರಲ್ಲಿ 1.95 ಕೋಟಿ ಪುರುಷರು ಮತ್ತು 1.74 ಕೋಟಿ ಮಹಿಳೆಯರು ಸೇರಿದ್ದಾರೆ.ಮೊದಲ ಹಂತದ ಮತದಾನ ನವೆಂಬರ್ 6ರಂದು ನಡೆದಿದ್ದು, ಶೇಕಡಾ 64.6 ರಷ್ಟು ಮತದಾನ ದಾಖಲಾಗಿದೆ. ಬೇಗುಸರಾಯ್‌ನಲ್ಲಿ ಶೇ. 67.32 ರಷ್ಟು ಅತಿ ಹೆಚ್ಚು ಮತದಾನವಾಗಿದ್ದರೆ, ಶೇಖ್‌ಪುರದಲ್ಲಿ...
ಕೃಷಿಕ ಸಮಾಜ ರೈತರ ಸಮಸ್ಯೆ ಬಿಂಬಿಸುವ ಸಂಪರ್ಕ ಕೊಂಡಿ: ಎನ್.ಚಲುವರಾಯಸ್ವಾಮಿ

ಕೃಷಿಕ ಸಮಾಜ ರೈತರ ಸಮಸ್ಯೆ ಬಿಂಬಿಸುವ ಸಂಪರ್ಕ ಕೊಂಡಿ: ಎನ್.ಚಲುವರಾಯಸ್ವಾಮಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬಳ್ಳಾರಿ: ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ.ಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಹಯೋಗದಲ್ಲಿ ನಗರದ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿದ ಅವರು, ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.ಎಲ್ಲಾ ಇಲಾಖೆಗಳಿಗಿಂತಲೂ ಕೃಷಿ ಇಲಾಖೆಯು ವಿಶಿಷ್ಟವಾಗಿದೆ. ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಎಂಬುವವರು ಸ್ವತಂತ್ರ ಪೂರ್ವದಲ್ಲಿ ರಾಜ್ಯದ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷಿಕ ಸಮಾಜ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ 36 ತಾಲ್ಲೂಕುಗಳಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕ...
ಶಿಶುವನ್ನು ಬೀದಿಯಲ್ಲಿ ಬಿಸಾಡಿದ ಪಾಪಿಗಳು; ಹಾಲುಣಿಸಿ ಮಾನವೀಯತೆ ಮೆರೆದ ಆಂಜಿನಮ್ಮ ಕುಟುಂಬ

ಶಿಶುವನ್ನು ಬೀದಿಯಲ್ಲಿ ಬಿಸಾಡಿದ ಪಾಪಿಗಳು; ಹಾಲುಣಿಸಿ ಮಾನವೀಯತೆ ಮೆರೆದ ಆಂಜಿನಮ್ಮ ಕುಟುಂಬ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ದೊಡ್ಡಬಳ್ಳಾಪುರ: ಜನ್ಮ ಪಡೆದ ಕೆಲವೇ ವಾರಗಳ ನವಜಾತ ಗಂಡು ಶಿಶುವನ್ನು ಮಾನವೀಯತೆ ಮರೆತ ಪಾಪಿಗಳು ಬೀದಿಯಲ್ಲೇ ಬಿಸಾಡಿ ಹೋದ ಹೃದಯ ಕಲುಕುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಲೇಔಟ್‌ ಬಳಿ ನಡೆದಿದೆ.ಮಗು ಅಳುವ ಶಬ್ದ ಕೇಳಿ ಸ್ಥಳೀಯ ಯುವಕರು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗು ಜೀವಂತವಾಗಿರುವುದನ್ನು ಕಂಡು ಸಹಾಯವಾಣಿ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.ಮಗು ತೀವ್ರ ಹಸಿವಿನಿಂದ ಅಳುತ್ತಿದ್ದುದರಿಂದ ಗ್ರಾಮದ ಆಂಜಿನಮ್ಮ ಕುಟುಂಬವು ಹಾಲುಣಿಸಿ ಮಾನವೀಯತೆ ಮೆರೆದಿದೆ. ನಂತರ ಮಕ್ಕಳ ಸಹಾಯವಾಣಿ ತಂಡ ಸ್ಥಳಕ್ಕೆ ಬಂದು ಮಗುವನ್ನು ವಶಕ್ಕೆ ಪಡೆದಿದೆ.ಘಟನೆ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಪಿ ಪೋಷಕರ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಘಟನೆ ಮತ್ತೆ ಸಮಾಜದಲ್ಲಿ ಮಾನವೀಯತೆ ಹಾಗೂ ಮಕ್ಕಳ ರಕ್ಷಣೆಯ ಅಗತ್ಯತೆಯ ಬಗ್ಗೆ ಚಿಂತನೆ ಮೂಡಿಸಿದೆ....
ರಸ್ತೆ ಗುಂಡಿ, ಕಸ ಅವಾಂತರ ವಿರುದ್ಧ ಬಿಜೆಪಿ ಜಾಗೃತಿ ಅಭಿಯಾನ

ರಸ್ತೆ ಗುಂಡಿ, ಕಸ ಅವಾಂತರ ವಿರುದ್ಧ ಬಿಜೆಪಿ ಜಾಗೃತಿ ಅಭಿಯಾನ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಗುಂಡಿ ಬಿದ್ದ ರಸ್ತೆಗಳು ಮತ್ತು ಕಸ ವಿಲೇವಾರಿಯಾಗದೇ ಇರುವುದು ಕಾಂಗ್ರೆಸ್ ಸರ್ಕಾರ ವೈಫಲ್ಯ ಖಂಡಿಸಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಪಕ್ಷದ ವತಿಯಿಂದ ಜನಜಾಗೃತಿ ಅಭಿಯಾನ ನಡೆಯಿತು.ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ರವರು, ಶಾಸಕರುಗಳಾದ ಎಸ್.ಸುರೇಶ್ ಕುಮಾರ್, ಡಾ.ಸಿ.ಎನ್.ಅಶ್ವಥ್ ನಾರಾಯಣ್, ಮುನಿರತ್ನ, ವಿಧಾನಪರಿಷತ್ ಮಾಜಿ ಸದಸ್ಯ ಅಶ್ವಥ್ ನಾರಾಯಣ್, ಬಿಜೆಪಿ ಉತ್ತರ ಜಿಲ್ಲಾಧ್ಯಕ್ಷರಾದ ಎಸ್.ಹರೀಶ್, ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು, ನಿಕಟಪೂರ್ವ ಬಿಬಿಎಂಪಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿರವರು ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗುಂಡಿ ಬಿದ್ದ ರಸ್ತೆಗಳು ಹಾಗೂ ಕಸ ರಾಶಿಗಳು ಬಿದ್ದಿರುವ ಸ್ಥಳಕ್ಕೆ ವೀಕ್ಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಆರ್.ಅಶೋಕ್ ರವರು ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಗುಂಡಿಗಳ ಸರ್ಕಾರ, ಗುಂಡಿಗಳ ಕ್ಯಾಬಿನೇಟ್ ಆಗಿದೆ ಎಂದರು. ಎರಡುವರೆ ವರ್ಷಗಳಿಂದ ಯಾವುದೇ ಅಭವೃದ್ದಿ ಕೆಲಸವಾಗಿಲ್ಲ ಗ್ಯಾರೆಂಟಿ, ಗ್ಯಾರೆಂಟಿ ಎಂದು ಹೇಳುತ್ತಿದ್ದಾರೆ. ಗುಂಡಿ ಮುಚ್ಚಲು...
‘ನಮ್ಮ ಮತ- ನಮ್ಮ ಹಕ್ಕು’: ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ

‘ನಮ್ಮ ಮತ- ನಮ್ಮ ಹಕ್ಕು’: ಮತಗಳ್ಳತನ ವಿರುದ್ಧ ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: 'ನಮ್ಮ ಮತ- ನಮ್ಮ ಹಕ್ಕು' ಘೋಷಣೆಯಡಿ, ಮತಗಳ್ಳತನ ವಿರುದ್ಧದ ರಾಹುಲ್ ಗಾಂಧಿಯವರ ಹೋರಾಟಕ್ಕೆ ಕೈ ಜೋಡಿಸಿರುವ ಪ್ರದೇಶ ಕಾಂಗ್ರೆಸ್, ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ ಮಾಡಿದೆ.ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಯೂ ಆದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಡೆದ ವೋಟ್ ಚೋರಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ ಎಂದರು.ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು ರಾಜ್ಯದ ಜನರು ಗಮನಿಸಿದ್ದಾ...
‘ಸಂವೇದನೆ ಉಳ್ಳವರು ನರನಿಂದ ನಾರಾಯಣರಾಗಬಲ್ಲರು’ ಡಾ.ಮೋಹನ್‌ ಭಾಗವತ್‌

‘ಸಂವೇದನೆ ಉಳ್ಳವರು ನರನಿಂದ ನಾರಾಯಣರಾಗಬಲ್ಲರು’ ಡಾ.ಮೋಹನ್‌ ಭಾಗವತ್‌

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸಮಾಜದ ಕುರಿತು ಸೂಕ್ಷ್ಮ ಸಂವೇದನೆಯನ್ನು ಬೆಳೆಸಿಕೊಂಡ ವ್ಯಕ್ತಿಯು ನರನಿಂದ ನಾರಾಯಣನಾಗಬಲ್ಲ. ಅದೇ ರೀತಿ ಸಂಸ್ಕಾರ ರಹಿತ ವ್ಯಕ್ತಿಯು ನರಾಧಮನೂ ಆಗುವ ಅಪಾಯವಿದೆ. ಇಡೀ ಸಮಾಜ ಸಂವೇದನಶೀಲವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್‌ ಭಾಗವತ್‌ ಅವರು ಅಭಿಪ್ರಾಯಪಟ್ಟರು.ಅವಕಾಶವಂಚಿತ ಮಕ್ಕಳ ಆಶ್ರಯ ತಾಣವಾದ 'ನೆಲೆ'ಯ 25 ವರ್ಷದ ಸಮಾರೋಪ ಸಮಾರಂಭದ ಪ್ರಯುಕ್ತ ಜೆ.ಪಿ. ನಗರದ ಆರ್‌.ವಿ. ದಂತ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಒಂದು ಕೆಲಸವನ್ನು 25 ವರ್ಷ ನಿರಂತರವಾಗಿ ನಡೆಸುವುದು ಕಷ್ಟದ ಕೆಲಸ. ಕೆಲಸ‌ ಒಳ್ಳೆಯದೇ ಆದರೂ ಸಾಗುವ ದಾರಿಯಲ್ಲಿ ಬಳಲಿಕೆ ಆಗುತ್ತದೆ. ಗುಡ್ಡ ಏರಬೇಕಾದರೆ ಶ್ರಮ ವಹಿಸಬೇಕಾಗುತ್ತದೆ, ಇಳಿಯಬೇಕಾದರೂ ಸಮತೋಲನಕ್ಕೆ ಶ್ರಮ ವಹಿಸಬೇಕಾಗುತ್ತದೆ. ಯಾರು ಜೊತೆಗೆ ಬರಲಿ, ಬಿಡಲಿ ಎಂಬ ಚಿಂತೆಯಿಲ್ಲದೆ ಆರಂಭವಾದ ನೆಲೆಯ ಕೆಲಸ 25 ವರ್ಷ ಪೂರೈಸಿ ಮುನ್ನಡೆಯುತ್ತಿದೆ ಎನ್ನುವುದು ನಮ್ಮೆಲ್ಲರಿಗೆ ಸಂತಸದ ವಿಚಾರ ಎಂದು ನುಡಿದರು‌.ಭೌತಿಕವಾದದ ಜಾಲಕ್ಕೆ ಸಿಕ್ಕಿರುವ ಪ್ರಪಂಚವು ಇಂದು ಎಲ್ಲದರಲ್ಲೂ ಲಾಭ‌-ನಷ್ಟದ ಯೋಚ...
‘ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ’; ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

‘ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ’; ಸರ್ಕಾರಕ್ಕೆ ವಿಜಯೇಂದ್ರ ಎಚ್ಚರಿಕೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಈವರೆವಿಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ದೇಶದ ಬೆನ್ನೆಲುಬು ರೈತ, 'ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ' ಎಂಬ ಇತಿಹಾಸ ಮರುಕಳಿಸಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆದ ಕಬ್ಬು ಬೆಳೆಗಾರ ರೈತರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ರೂ ದರ ನಿಗದಿ ಪಡಿಸಿ ನಿರ್ಧಾರ ಕೈಗೊಂಡಿದೆ. ಹೋರಾಟನಿರತ ರೈತ ಬಂಧುಗಳು ನಿರ್ಧಾರವನ್ನು ಸ್ವಾಗತಿಸಿ ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಅವರು ಹೇಳಿದ್ದಾರೆ.ಈ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ, ರೈತನಾಯಕ ಯಡಿಯೂರಪ್ಪ ಅವರ ಪುತ್ರನಾಗಿ ಭಾಗವಹಿಸಿ ರೈತ ಹೋರಾಟಕ್ಕೆ ದನಿಗೂಡಿಸಿದ ಸಂದರ್ಭ ನನ್ನಲ್...
ಮೈಸೂರು ನಗರ ಸಾರಿಗೆಯಲ್ಲಿ ನ ಧ್ವನಿ ಸ್ಪಂದನ ಯೋಜನೆಗೆ ಕೆಎಸ್‌ಆರ್‌ಟಿಸಿ ಗೆ ‘ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ 2025

ಮೈಸೂರು ನಗರ ಸಾರಿಗೆಯಲ್ಲಿ ನ ಧ್ವನಿ ಸ್ಪಂದನ ಯೋಜನೆಗೆ ಕೆಎಸ್‌ಆರ್‌ಟಿಸಿ ಗೆ ‘ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ 2025

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಮೈಸೂರು ನಗರ ಸಾರಿಗೆಯಲ್ಲಿ ಜಾರಿಗೆ ತಂದ ‘ಧ್ವನಿ ಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ಎಂಬ ನೂತನ ಯೋಜನೆ ದೇಶದ ಮೊದಲ ಮಾದರಿ ಯೋಜನೆಯಾಗಿ ಗುರುತಿಸಿಕೊಂಡಿದ್ದು, ‘ಸ್ವಯಂ ಆಕ್ಸೆಸಿಬಿಲಿಟಿ ಪ್ರಶಸ್ತಿ–2025’ ಅನ್ನು ಪಡೆದುಕೊಂಡಿದೆ.ಈ ಪ್ರಶಸ್ತಿಯನ್ನು ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಉಪ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಿತ್ತಲ್ ಹಾಗೂ ಸ್ವಯಂ ಸಂಸ್ಥೆಯ ಸ್ಥಾಪಕ ಸೈಮು ಜಿಂದಾಲ್ ಅವರು ಕೆಎಸ್‌ಆರ್‌ಟಿಸಿಯ ಮಂಡ್ಯ ವಿಭಾಗದ ನಿಯಂತ್ರಣಾಧಿಕಾರಿ ಶರಣ್ ಬಸವರಾಜ ಕೆ.ಎಂ. ಮತ್ತು ಉಪ ಮುಖ್ಯ ಗಣಕ ವ್ಯವಸ್ಥಾಪಕಿ ಸುಧಾರಾಣಿ ಆರ್. ಅವರಿಗೆ ಪ್ರದಾನ ಮಾಡಿದರು.‘ಸ್ವಯಂ’ ಸಂಸ್ಥೆಯು ಅಂತರರಹಿತ ವಿನ್ಯಾಸ ಹಾಗೂ ಒಳಗೊಳ್ಳುವಿಕೆಯ ಕ್ಷೇತ್ರದಲ್ಲಿ ಮಾದರಿಯಾಗಿರುವ ಸಂಸ್ಥೆಗಳನ್ನು ಗೌರವಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತದೆ. 2025ನೇ ವರ್ಷ ಸಂಸ್ಥೆಯ 25ನೇ ವಾರ್ಷಿಕೋತ್ಸವವಾಗಿದ್ದು, ಜಾಗತಿಕ ಮಟ್ಟದಲ್ಲಿ 25 ವರ್ಷಗಳ ಸೇವೆಯನ್ನು ಆಚರಿಸುತ್ತಿದೆ.ಮೈಸೂರು ನ...
“ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ಚಲುವರಾಯಸ್ವಾಮಿ ಕೊಡುಗೆ ಏನು, ?” – ಕುಮಾರಸ್ವಾಮಿ ಪ್ರಶ್ನೆ

“ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ಚಲುವರಾಯಸ್ವಾಮಿ ಕೊಡುಗೆ ಏನು, ?” – ಕುಮಾರಸ್ವಾಮಿ ಪ್ರಶ್ನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: “ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಚಲುವರಾಯಸ್ವಾಮಿ?” ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.ಅವರು ತಮ್ಮ ಅಧಿಕೃತ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆಯ ಮೂಲಕ ಮಂಡ್ಯ ಸಂಸದ ಚಲುವರಾಯಸ್ವಾಮಿ ಬಗ್ಗೆ ಕಿಡಿಕಾರಿದ್ದಾರೆ. “ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು, ಚಲುವರಾಯಸ್ವಾಮಿ?” ಎಂದು ಪ್ರಶ್ನಿಸಿದ ಅವರು, ಸ್ಥಳೀಯ ಅಭಿವೃದ್ಧಿ, ಕೈಗಾರಿಕಾ ಯೋಜನೆಗಳು ಮತ್ತು ರೈತರ ಹಿತಾಸಕ್ತಿ ವಿಚಾರದಲ್ಲಿ ಯಾವುದೇ ದೃಶ್ಯಮಟ್ಟದ ಬದಲಾವಣೆ ಕಾಣಿಸದಿರುವುದನ್ನು ಟೀಕಿಸಿದರು.ಕೇಂದ್ರದಲ್ಲಿ ಅಧಿಕಾರದಲ್ಲಿರುವಾಗ ಮಂಡ್ಯ ಜಿಲ್ಲೆಯ ಪ್ರಗತಿಗೆ ಎಷ್ಟು ಯೋಜನೆಗಳನ್ನು ತಂದಿದ್ದೀರಿ ಎಂಬುದನ್ನು ಸಾರ್ವಜನಿಕವಾಗಿ ಹೇಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಮಂತ್ರಿಯಾಗಿ ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಚಲುವರಾಯಸ್ವಾಮಿ ? - ಶ್ರೀ @hd_kumaraswamy , ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರು pic.twitter.com/w2FSULOnlv— Janata Dal Secular (...