Saturday, August 8

ದೇಶ

ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ

ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
📝 ಡಾ.ನೀರಜ್ ಪಾಟೀಲ್, ಯುನೈಟೆಡ್ ಕಿಂಗ್‌ಡಮ್ಸಾಗರೋತ್ತರ ರಾಷ್ಟ್ರ, ಆಂಗ್ಲರ ನಾಡಿನಲ್ಲೂ ಕನ್ನಡದ ಕಂಪು ಆವರಿಸಿದೆ. ಲಂಡನ್‌ಗೂ ಕರುನಾಡಿನ ಆರಾಧ್ಯ ದೈವ ವಿಶ್ವಗುರು ಬಸವೇಶ್ವರರನ್ನು ಕೊಂಡೊಯ್ದಿರುವ ಕನ್ನಡಿಗರು, ಇದೀಗ ಕನ್ನಡ ರಾಜ್ಯೋತ್ಸವವನ್ನೂ ನಾಡಭಕ್ತಿಯ ವೈಭವದೊಂದಿಗೆ ಆಚರಿಸಿದ್ದಾರೆ.ಕನ್ನಡ ರಾಜೋತ್ಸವದ ಮುನ್ನಾದಿನದಂದು, ಲಂಡನ್‌ನಲ್ಲಿರುವ ಕನ್ನಡಿಗರು ಕರುನಾಡಿನ ಶ್ರೀಮಂತ ಪರಂಪರೆ, ಭಾಷೆ ಮತ್ತು ಸಂಸ್ಕೃತಿ ವೈಭವದ ಪ್ರತೀಕವಾಗಿ ಆಚರಿಸಿದರು. ಪ್ರತೀ ವರ್ಷ ನವೆಂಬರ್ 1 ರಂದು ಲಂಡನ್‌ನಲ್ಲೂ ಅನಿವಾಸಿ ಕನ್ನಡಿಗರು ಕನ್ನಡ ರಾಜೋತ್ಸವ ಆಚರಿಸಿ ಕರ್ನಾಟಕ ರಚನೆಯನ್ನು ಸ್ಮರಿಸುತ್ತಾರೆ. ಇದು ವಿಶ್ವಾದ್ಯಂತ ಕನ್ನಡಿಗರಿಗೆ ಹೆಮ್ಮೆ ಮತ್ತು ಏಕತೆಯ ದಿನವಾಗಿದೆ. ಈ ಸಂದರ್ಭವು ಕರ್ನಾಟಕ ಮತ್ತು ಭಾರತವನ್ನು ತಮ್ಮ ಮನೆ ಎಂದು ಕರೆಯುವ ಪ್ರತಿಯೊಬ್ಬರ ಏಕತೆ, ಹೆಮ್ಮೆ ಮತ್ತು ಹಂಚಿಕೆಯ ಹೆಗ್ಗುರುತನ್ನು ಪ್ರತಿನಿಧಿಸುತ್ತದೆ.ಕರ್ನಾಟಕದ ವೈವಿಧ್ಯಮಯ ಸಂಪ್ರದಾಯಗಳು, ಕಲಾ ಪ್ರಕಾರಗಳು ಮತ್ತು ಭಾಷಾ ಪರಂಪರೆಗೆ ಗೌರವವಾಗಿ, ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮತ್ತು ಉತ್...
ದೆಹಲಿಯಲ್ಲಿ ಕನ್ನಡದ ಕಂಪು; ರಾಜ್ಯೋತ್ಸವ ಸಮಾರಂಭ

ದೆಹಲಿಯಲ್ಲಿ ಕನ್ನಡದ ಕಂಪು; ರಾಜ್ಯೋತ್ಸವ ಸಮಾರಂಭ

ದೇಶ, ಪ್ರಮುಖ ಸುದ್ದಿ, ರಾಜ್ಯ
ನವದೆಹಲಿ: ೬೯ನೇ ಕನ್ನಡ ರಾಜ್ಯೋತ್ಸವವನ್ನು ನವದೆಹಲಿಯಲ್ಲಿ ಆಚರಿಸಲಾಯಿತು. ನವದೆಹಲಿಯ ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರೇಲ್ವೆ ಮತ್ತು ಜಲ ಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಭಾಗವಹಿಸಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ದ್ವಜಾರೋಹಣ ನಡೆಸಿದರು.ಭಾರತ ಸರ್ಕಾರದಲ್ಲಿ ಮಂತ್ರಿಯಾಗಿ ಕೆಲಸದ ನಿಮಿತ್ತ ದೆಹಲಿಯಲ್ಲಿ ತಂಗಿದ್ದೆ, ದೆಹಲಿಯಲ್ಲಿ ತಾಯಿ ಕನ್ನಡಾಂಭೆಯ ಪೂಜೆ ಮಾಡುವ ಮತ್ತು ಧ್ವಜಾರೋಹಣ ಮಾಡುವ ಸದಾವಕಾಶ ನನಗೆ ಲಭ್ಯವಾಗಿದೆಯೆಂದು ಸಚಿವ ವಿ. ಸೋಮಣ್ಣ ಅತ್ಯಂತ ಹರ್ಷ ವ್ಯಕ್ತ ಪಡೆಸಿದರು.ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಾಂಬೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಇನ್ನು ಮುಂದೆಯು ಕನ್ನಡ ಪರ ಹತ್ತಾರು ಕಾರ್ಯಕ್ರಮಗಳನ್ನು ವಿಶೇಷ ರೀತಿಯಿಂದ ಆಯೋಜಿಸುವಂತೆ ಸಲಹೆ ನೀಡಿದರುಕರ್ನಾಟಕ ಏಕೀಕರಣಕ್ಕೆ ಹೋರಾಡಿದ ಮಹನಿಯರ ವ್ಯಕ್ತಿತ್ವವನ್ನು ರಾಷ್ಟ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಅವರ ಬಗ್ಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಣೆ...
ದೇಶದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ; ಗಡಿಯಲ್ಲಿ ಮೋದಿ ಗರ್ಜನೆ

ದೇಶದ ಒಂದಿಂಚು ಭೂಮಿಯನ್ನೂ ಬಿಟ್ಟುಕೊಡಲ್ಲ; ಗಡಿಯಲ್ಲಿ ಮೋದಿ ಗರ್ಜನೆ

ದೇಶ, ಪ್ರಮುಖ ಸುದ್ದಿ
ಕಚ್ : ಪ್ರಧಾನಿ ನರೇಂದ್ರ ಮೋದಿ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ಒಂದು ಇಂಚು ಭೂಮಿಯನ್ನೂ ಬಿಟ್ಟುಕೊಡುವುದಿಲ್ಲ ಎಂದು ಗುಡುಗಿದ್ದಾರೆ.ಗುಜರಾತಿನ ಕಚ್ ಪ್ರದೇಶದಲ್ಲಿ ಸೈನಿಕರೊಂದಿಗೆ ದೀಪಾವಳಿ ಆಚರಿಸಿ ದೀಪಗಳ ಹಬ್ಬದ ಶುಭಾಶಯ ಹಂಚಿಕೊಂಡ ಮೋದಿ, ಯೋಧರ ಬಗ್ಗೆ ಕುಶಲೋಪರಿ ವಿಚಾರಿಸಿದರು. ಈ ವೇಳೆ ಮಾತನಾಡಿದ ಮೋದಿ, ದೇಶ ರಕ್ಷಣೆ ವಿಷಯದಲ್ಲಿ ಮಿಲಿಟರಿ ಶಕ್ತಿ ಮೇಲೆ ದೇಶದ ಜನತೆಗೆ ನಂಬಿಕೆಯಿದೆ ಎಂದರು.ದೇಶದ ನೆಲದ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದ ಅವರು, ನಮ್ಮ ನೀತಿಗಳು ನಮ್ಮ ಸಶಸ್ತ್ರ ಪಡೆಗಳ ಸಂಕಲ್ಪದೊಂದಿಗೆ ಹೊಂದಿಕೊಂಡಿವೆ ಎಂದರು. ಇದೇ ವೇಳೆ, ಯೋಧರಿಂದಾಗಿ ದೇಶವು ಸುರಕ್ಷಿತವಾಗಿದೆ ಎಂದು ಹೇಳುವ ಮೂಲಕ ಸೈನ್ಯವನ್ನು ಹುರಿದುಂಭಿಸಿದರು....
BMTC ಮುಕುಟಕ್ಕೆ ಪ್ರಶಸ್ತಿಯ ಸಿಂಗಾರ; ನಿಗಮಕ್ಕೆ ಸಿಕ್ತು ‘Excellence in Urban Transport award’

BMTC ಮುಕುಟಕ್ಕೆ ಪ್ರಶಸ್ತಿಯ ಸಿಂಗಾರ; ನಿಗಮಕ್ಕೆ ಸಿಕ್ತು ‘Excellence in Urban Transport award’

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮುಕುಟಕ್ಕೆ ಪ್ರಶಸ್ತಿಯ ಸಿಂಗಾರವಾಗಿದೆ. ಸಾಲು ಸಾಲು ಪ್ರಶಸ್ತಿಗಳ ಜೊತೆ ಇದೀಗ BMTCಗೆ 'Excellence in Urban Transport award' ಸಿಕ್ಕಿದೆ.ಭಾರತ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ನೀಡುವ City with Best Record of Public Involvement in Transport ವಿಭಾಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು Award of Excellence in Urban Transport ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಅಕ್ಟೋಬರ್ 27 ರಂದು ಗುಜರಾತ್‌ನ ಗಾಂಧಿನಗರದಲ್ಲಿ ನಡೆದ ಆಯೋಜಿಸಿದ್ದ ಸಮಾರಂಭದಲ್ಲಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರಲಾಲ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್ ಅವರು ಪ್ರಶಸ್ತಿ ಸ್ವೀಕರಿಸಿದರು.ಭಾರತ ಸರ್ಕಾರದ ಈ ಪ್ರತಿಷ್ಠಿತ ಈ ಪ್ರಶಸ್ತಿಯು ನಾಗರಿಕರ ಸುರಕ್ಷತೆ ಮತ್ತು ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಪ್ರೋತ್ಸಾಹಿಸುವುದಾಗಿದ್ದು ಅಕ್ಟೋಬರ್ ತಿಂಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಬೆ...
ಅನ್ನದಾತರಿಗೆ ‘ಮೋದಿ ದೀಪಾವಳಿ ಗಿಫ್ಟ್’; ಭತ್ತದ ಬೆಂಬಲ ಬೆಲೆ 2500ರೂ. ಘೋಷಣೆ

ಅನ್ನದಾತರಿಗೆ ‘ಮೋದಿ ದೀಪಾವಳಿ ಗಿಫ್ಟ್’; ಭತ್ತದ ಬೆಂಬಲ ಬೆಲೆ 2500ರೂ. ಘೋಷಣೆ

ದೇಶ, ಪ್ರಮುಖ ಸುದ್ದಿ, ವಿದೇಶ
ನವದೆಹಲಿ: ದೀಪಾವಳಿ ಸಂದರ್ಭದಲ್ಲಿ ದೇಶದ ಜನತೆಗೆ ಕೇಂದ್ರ ಸರ್ಕಾರ ಗಿಫ್ಟ್ ನೀಡಿದೆ. ಅನ್ನದಾತರಿಗೆ ಆಧಾರವಾಗಿ ಮಹತ್ವದ ಘೋಷಣೆಯನ್ನು ಕೇಂದ್ರ ಸರ್ಕಾರ ಮಡಿದೆ.ಕೇಂದ್ರ ಸರ್ಕಾರ ಭತ್ತದ ಬೆಂಬಲ ಬೆಲೆ ಹೆಚ್ಚಿಸಿ ಆದೇಶ ಹೊರಡಿಸಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ, ಕೇಂದ್ರ ಸರ್ಕಾರ ಭತ್ತದ ಬೆಳೆಗಾರರ ಬೆಂಬಲಕ್ಕೆ ನಿಂತಿದೆ ಎಂದರು.2300 ರೂಪಾಯಿ ದರದಲ್ಲಿ ಭತ್ತಕ್ಕೆ ಬೆಂಬಲ ಬೆಲೆ ಹೆಚ್ಚಳ ಮಾಡಲಾಗಿದೆ ಎಂದವರು ತಿಳಿಸಿದರು. 2013-14ರಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ 1310 ರೂಪಾಯಿ ಇತ್ತು. ಇದೀಗ ಅದನ್ನು 2300 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಪ್ರಲ್ಹಾದ್ ಜೋಷಿ ತಿಳಿಸಿದರು.ಇದೇ ವೇಳೆ, 185 ಲಕ್ಷ ಟನ್ ಭತ್ತ, 124 ಲಕ್ಷ ಟನ್ ಅಕ್ಕಿ ಸಂಗ್ರಹಕ್ಕೆ ಕೇಂದ್ರ ಆಹಾರ ಇಲಾಖೆ ಮತ್ತು ಭಾರತೀಯ ಆಹಾರ ನಿಗಮ ಕ್ರಮ ಕೈಗೊಂಡಿದೆ ಎಂದೂ ಅವರು ಮಾಹಿತಿ ನೀಡಿದರು....
ದೀಪಾವಳಿ ವೇಳೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ; ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬಹುದು..

ದೀಪಾವಳಿ ವೇಳೆ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ; ರಾತ್ರಿ 8ರಿಂದ 10 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಬಹುದು..

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ರಾಜ್ಯದಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ ಇದೆ.ಈ ಬಗ್ಗೆ ಅಧಿಕಾರಿಗಳಿಗೆ ಆದೇಶ ನೀಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಪರಿಸರ ಸ್ನೇಹಿ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು ಎಂದು ತಾಕೀತು ಮಾಡಿದ್ದಾರೆ.ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಪಟಾಕಿ ದುರಂತಗಳಿಗೆ ಅವಕಾಶ ನೀಡಬಾರದು. ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಬೇಕು. ರಾತ್ರಿ 8 ರಿಂದ 10 ರವರೆಗೆ ಪಟಾಕಿ ಸಿಡಿಸಲು ಅವಕಾಶ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.‌...
ಸಮರ ಸಂತ್ರಸ್ತ ಗಾಜಾದಲ್ಲಿ ಇಸ್ರೇಲ್ ಬೀಕರ ದಾಳಿ; 38 ಮಂದಿ ಸಾವು

ಸಮರ ಸಂತ್ರಸ್ತ ಗಾಜಾದಲ್ಲಿ ಇಸ್ರೇಲ್ ಬೀಕರ ದಾಳಿ; 38 ಮಂದಿ ಸಾವು

ದೇಶ, ಪ್ರಮುಖ ಸುದ್ದಿ
ಗಾಜಾ: ಇಸ್ರೇಲ್ ಪ್ಯಾಲೆಸ್ಟೈನ್ ನಡುವಿನ ಸಮರ ತಾರಕಕ್ಕೇರಿದೆ. ಸಮರ ಸಂತ್ರಸ್ತ ಗಾಜಾ ಮೇಲೆ ಇಸ್ರೇಲ್​ ಸೇನೆ ಮತ್ತೆ ಭೀಕರ ವೈಮಾನಿಕ ದಾಳಿ ನಡೆಸಿದೆ.ಗಾಜಾ ಪ್ರದೇಶದ ಖಾನ್ ಯೂನಿಸ್‌ ಎಂಬಲ್ಲಿ ಬಹುಮಹಡಿ ವಸತಿ ಕಟ್ಟಡಗಳ ಇಸ್ಯೇಲ್ ವಾಯುಪಡೆ ಶುಕ್ರವಾರ ವೈಮಾನಿಕ ದಾಳಿ ನಡೆಸಿದೆ. ಸರಣಿ ಬಾಂಬ್ ದಾಳಿಯಲ್ಲಿ 14 ಮಕ್ಕಳು ಸೇರಿ 35ಕ್ಕೂ ಹೆಚ್ಚು ಮಂದಿ ಪ್ಯಾಲೆಸ್ಟೀನ್ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮೃತಪಟ್ಟ 14 ಮಕ್ಕಳ ಪೈಕಿ 13 ಮಕ್ಕಳು ಒಂದೇ ಕುಟುಂಬದವರಾಗಿದ್ದು, ಇಸ್ರೇಲಿ ಕ್ಷಿಪಣಿಗಳಿಂದ ಹರಬಂದ ಹೊಗೆಯಿಂದ ಮಕ್ಕಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಲ್ ಜಜೀರಾ ತಿಳಿಸಿದೆ....
ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಝಣಝಣ ಕಾಂಚಾಣ; ಬರೋಬ್ಬರಿ 139 ಕೋಟಿ ರೂ ಚಿನ್ನಾಭರಣ ವಶ

ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಝಣಝಣ ಕಾಂಚಾಣ; ಬರೋಬ್ಬರಿ 139 ಕೋಟಿ ರೂ ಚಿನ್ನಾಭರಣ ವಶ

ದೇಶ, ಪ್ರಮುಖ ಸುದ್ದಿ
ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆಯ ನಡುವೆ ರಣಾಂಗಣದಲ್ಲಿ ಝಣಝಣ ಕಾಂಚಾಣದ ಸದ್ದು ಮೊಳಗಿದೆ.ಮತದಾನದ ಅಖಾಡದಲ್ಲಿ ಅಕ್ರಮವಾಗಿ ಚಿಣ್ಣಾಭರಣ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಶುಕ್ರವಾರ ಭರ್ಜರಿ ಭೇಟೆಯಾಡಿದ್ದು, ಪುಣೆಯ ಲಾಜಿಸ್ಟಿಕ್ ಸೇವಾ ಸಂಸ್ಥೆಯೊಂದರ ವಾಹನದಲ್ಲಿ ಸಾಗಿಸುತ್ತಿದ್ದ 139 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಇದು ತಮಗೆ ಸೇರಿದ್ದು, ಕಾನೂನು ಬದ್ದವಾಗಿಯೇ ಸಾಗಿಸಲಾಗುತ್ತಿತ್ತು ಎಂದು ಜ್ಯುವೆಲ್ಲರ್ಸ್ ಸಂಸ್ಥೆಯೊಂದು ಸ್ಪಷ್ಟನೆ ನೀಡಿದೆ....
ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

ದೇಶ, ಪ್ರಮುಖ ಸುದ್ದಿ
ಹೈದರಾಬಾದ್: ಬರ್ತ್ ಡೇ ಪಾರ್ಟಿ ಮಾಡಲು ಖಾಸಗಿ ಹೊಟೆಲ್ ಗೆ ಆಗಮಿಸಿದ್ದ ವ್ಯಕ್ತಿಯೋರ್ವ ನಾಯಿಯನ್ನು ಓಡಿಸುವ ಆತುರದಲ್ಲಿ ತಾನೇ 3ನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.ಹೈದರಾಬಾದ್ ನ ಚಂದಾನಗರದಲ್ಲಿ ಈ ಘಟನೆ ನಡೆದಿದ್ದು ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೃತ ವ್ಯಕ್ತಿಯನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಏರೆ ಬಗ್ಗೆ ಪ್ರಕರಣ ದಾಖಲಿಸಿರುವ ಚಂದಾನಗರ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ....