
ಹಣದುಬ್ಬರ ಅಳತೆಗೆ ಹೊಸ ಮಾನದಂಡ; ಡಬ್ಲ್ಯುಪಿಐ ಮೂಲ ವರ್ಷ 2022-23ಕ್ಕೆ ಪರಿಷ್ಕರಣೆ
ನವದೆಹಲಿ: ದೇಶದ ಹಣದುಬ್ಬರ ಹಾಗೂ ಬೆಲೆ ಏರಿಳಿತದ ಅಳತೆಯನ್ನು ಮತ್ತಷ್ಟು ನಿಖರಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಗಟು ಬೆಲೆ ಸೂಚ್ಯಂಕದ (ಡಬ್ಲ್ಯುಪಿಐ) ಮೂಲ ವರ್ಷವನ್ನು 2011-12ರಿಂದ 2022-23ಕ್ಕೆ ಪರಿಷ್ಕರಿಸಲು ಅನುಮೋದನೆ ನೀಡಿದೆ. ಜೊತೆಗೆ, ಹೊಸ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು (ಪಿಪಿಐ) ಪರಿಚಯಿಸುವುದಾಗಿ ಘೋಷಿಸಿದೆ.ಪರಿಷ್ಕೃತ ಡಬ್ಲ್ಯುಪಿಐ ಸರಣಿ ಹಾಗೂ ಹೊಸ ಉತ್ಪಾದಕ ಬೆಲೆ ಸೂಚ್ಯಂಕಗಳನ್ನು ಜೂನ್ 15ರಂದು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಅಧೀನದಲ್ಲಿರುವ ಆರ್ಥಿಕ ಸಲಹೆಗಾರರ ಕಚೇರಿ ಬಿಡುಗಡೆ ಮಾಡಲಿದೆ.ಹೊಸ ಡಬ್ಲ್ಯುಪಿಐ ಸರಣಿಯು ಪ್ರಸ್ತುತ ಜಾರಿಯಲ್ಲಿರುವ 2011-12ರ ಮೂಲ ವರ್ಷದ ಸೂಚ್ಯಂಕವನ್ನು ಬದಲಾಯಿಸಲಿದ್ದು, ವ್ಯಾಪಕ ವ್ಯಾಪ್ತಿ, ನವೀಕೃತ ವಿಧಾನ ಮತ್ತು ಹೆಚ್ಚು ಪ್ರಾತಿನಿಧಿಕ ಸರಕುಗಳ ಪಟ್ಟಿಯನ್ನು ಒಳಗೊಂಡಿರಲಿದೆ. ಸೂಚ್ಯಂಕದಲ್ಲಿ ಒಳಗೊಂಡಿರುವ ವಸ್ತುಗಳ ಸಂಖ್ಯೆ 697ರಿಂದ 957ಕ್ಕೆ ಏರಿಕೆಯಾಗಿದೆ.ಈ ಪರಿಷ್ಕರಣೆಯ ಪ್ರಮುಖ ಅಂಶವೆಂದರೆ ಸೌರ ಮತ್ತು ಪವನ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲಗಳನ್ನು ವಿದ್ಯುತ್ ವಿಭಾಗದ...









