
ಅಕ್ರಮ ಡಿಜಿಟಲ್ ಸಾಲ ಆ್ಯಪ್‌ಗಳ ವಿರುದ್ಧ ಕೇಂದ್ರ, ಆರ್‌ಬಿಐ ಕಠಿಣ ಕ್ರಮ; ಹೊಸ ನಿಯಮ ಜಾರಿ
ನವದೆಹಲಿ: ಅಕ್ರಮ ಡಿಜಿಟಲ್ ಸಾಲ ಆ್ಯಪ್‌ಗಳ ಹಾವಳಿ ತಡೆಯಲು ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹಲವು ಹೊಸ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಿವೆ. ಅಧಿಕೃತ ಡಿಜಿಟಲ್ ಸಾಲ ಆ್ಯಪ್‌ಗಳ ಸಾರ್ವಜನಿಕ ಡೈರೆಕ್ಟರಿ, ಕಠಿಣ ಡಿಜಿಟಲ್ ಸಾಲ ಮಾರ್ಗಸೂಚಿಗಳು ಹಾಗೂ ಸೈಬರ್ ಭದ್ರತಾ ವ್ಯವಸ್ಥೆಗಳ ಮೂಲಕ ಡಿಜಿಟಲ್ ಸಾಲ ಪರಿಸರವನ್ನು ಬಲಪಡಿಸಲಾಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲಿಖಿತ ಉತ್ತರದಲ್ಲಿ, ಅನಧಿಕೃತ ಡಿಜಿಟಲ್ ಸಾಲ ವೇದಿಕೆಗಳ ವಿರುದ್ಧ ಆರ್‌ಬಿಐ ಹಾಗೂ ಇತರ ನಿಯಂತ್ರಣ ಸಂಸ್ಥೆಗಳೊಂದಿಗೆ ಸಮನ್ವಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಆರ್‌ಬಿಐ 2025ರ ಜುಲೈ 1ರಿಂದ ಡಿಜಿಟಲ್ ಲೆಂಡಿಂಗ್ ಆ್ಯಪ್ (DLA) ಡೈರೆಕ್ಟರಿ ಆರಂಭಿಸಿದ್ದು, ಆರ್‌ಬಿಐ ನಿಯಂತ್ರಿತ ಸಂಸ್ಥೆಗಳ ಅಧಿಕೃತ ಆ್ಯಪ್‌ಗಳ ಪಟ್ಟಿಯನ್ನು ಸಾರ್ವಜನಿಕರಿಗೆ ಲಭ್ಯಗೊಳಿಸಿದೆ. ಇದರಿಂದ ಗ್ರಾಹಕರು ಸಾಲ ಪಡೆಯುವ ಮೊದಲು ಆ್ಯಪ್‌ನ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬಹುದಾಗಿದೆ.ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾ...









