Friday, May 15

Tag: ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ

ಹಸಿರು ಹೊದಿಕೆ: ಕೊತ್ತನೂರಿನಲ್ಲಿ 22.08ಎಕರೆ ಜಮೀನು ಮರುವಶಕ್ಕೆ ಸಚಿವರ ಆದೇಶ

ಹಸಿರು ಹೊದಿಕೆ: ಕೊತ್ತನೂರಿನಲ್ಲಿ 22.08ಎಕರೆ ಜಮೀನು ಮರುವಶಕ್ಕೆ ಸಚಿವರ ಆದೇಶ

ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಕೊತ್ತನೂರಿನಲ್ಲಿ ಅರಣ್ಯ ಇಲಾಖೆಗೆ ವಹಿಸಲಾದ 22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ್ ಬಿ. ಖಂಡ್ರೆ ಅವರು ನಿರ್ದೇಶನ ನೀಡಿದ್ದಾರೆ.22.08ಎಕರೆ ಜಮೀನಿನ ಮರುವಶಕ್ಕೆ ಪ್ರಕ್ರಿಯೆ ಆರಂಭಿಸಬೇಕು ಎಂದು ಸೂಚಿಸಿರುವ ಅವರು, ಕೆ.ಆರ್.ಪುರ-2 ಹೋಬಳಿಯ ಕೊತ್ತನೂರು ಗ್ರಾಮದ ಸರ್ವೆ ನಂ.48ರಲ್ಲಿ 8 ಗುಂಟೆ ಜಮೀನನ್ನು ಅರಣ್ಯ ಇಲಾಖೆಗೆ 2000 ಇಸವಿಯಲ್ಲಿ ವಹಿಸಲಾಗಿರುತ್ತದೆ. ಆದರೆ, ಅಧಿಕಾರಿಗಳು ಇಲಾಖೆಗೆ ಮಂಜೂರಾದ ಭೂಮಿಯನ್ನು ವಶಕ್ಕೆ ಪಡೆದು ಅರಣ್ಯ ಬೆಳೆಸುವಲ್ಲಿ ವಿಫಲರಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣ 'X'ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವ ಈಶ್ವರ್ ಬಿ. ಖಂಡ್ರೆ, ಬೆಂಗಳೂರಿನಲ್ಲಿ ಹಸಿರು ಹೊದಿಕೆ ಹೆಚ್ಚಿಸುವ ಉದ್ದೇಶದಿಂದ 1999-2000 ಸಾಲಿನಲ್ಲಿ ಕೆಆರ್ ಪುರಂ ಬಳಿಯ ಕೊತ್ತನೂರು ಸರ್ವೇ ನಂ. 48ರಲ್ಲಿನ 22.08 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ, ಈ ಜಮೀನನ್ನು ವಶಕ್ಕೆ ಪಡೆದು ಅರಣ್ಯ ಬೆಳೆಯುವಲ್ಲಿ ಈ ಹಿಂದಿನ ಅರಣ್ಯ ಅ...