Friday, September 18

Tag: ಬಸವರಾಜ ಬೊಮ್ಮಾಯಿ ವಿರುದ್ಧ ಕೇಸ್

ಕೋವಿಡ್ ಕರ್ಮಕಾಂಡ; ಹೆಣಗಳ ರಾಶಿಯಲ್ಲೂ ಹಣ ಹುಡುಕಾಟ; ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ?

ಕೋವಿಡ್ ಕರ್ಮಕಾಂಡ; ಹೆಣಗಳ ರಾಶಿಯಲ್ಲೂ ಹಣ ಹುಡುಕಾಟ; ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ರಾಜ್ಯದ ಹಿಂದಿನ ಬಿಜೆಪಿ ಸರ್ಕಾರ?

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿರುವ ಕೋವಿಡ್ ಕರ್ಮಕಂಡ ಇದೀಗ ಕಾಂಗ್ರೆಸ್-ಬಿಜೆಪಿ ನಡುವಿನ ವಾಗ್ಯುದ್ಧಕ್ಕೆ ಕಾರಣವಾಗಿದೆ. ಉಪಚುನಾವಣಾ ಹೊತ್ತಲ್ಲೇ ಕೋವಿಡ್ ಹಗರಣವನ್ನು ಮುಂದಿಟ್ಟು ಬಿಜೆಪಿ ನಾಯಕರ ಓಟವನ್ನು ಕಟ್ಟಿಹಾಕುತ್ತಿರುವ ಕಾಂಗ್ರೆಸ್ ಮುಖಂಡರು ಹಿಂದಿನ ಸರ್ಕಾರದ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಹೆಣಗಳಿಂದಲೂ ಹಣ ಮಾಡಿರುವ ಹಿಂದಿನ ಸರ್ಕಾರವು, ಪ್ರಧಾನಿ ಮೋದಿ ಆದೇಶಕ್ಕೂ ಬೆಲೆಕೊಟ್ಟಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.ಬೆಂಗಳೂರಿನಲ್ಲಿ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಹಗರಣದ ಬಗ್ಗೆ ಮಾಹಿತಿ ಹಂಚಿಕೊಂಡ ಪ್ರಿಯಾಂಕ್ ಖರ್ಗೆ, ಕೊರೋನ ಸಮಯದಲ್ಲಿ ಯಡಿಯೂರಪ್ಪ ಹಾಗೂ ಶ್ರೀ ರಾಮುಲು ಅವರು ಹೆಣದ ಮೇಲೆ ಹೇಗೆ ಹಣ ಮಾಡಿದರು ಎಂಬುದನ್ನು ಜಸ್ಟೀಜ್ ಕುನ್ಹಾ ಅವರ ಕೊರೋನ ಮಧ್ಯಂತರ ವರದಿಯಲ್ಲಿದೆ. ಈ ಮಧ್ಯಂತರ ವರದಿಯಲ್ಲಿ ಸುಮಾರು 700 ಕೋಟಿ ಹಗರಣದ ಬಗ್ಗೆ ಬೆಳಕು ಚೆಲ್ಲಲಾಗಿದೆ...