Saturday, September 19

Tag: Anitha Kumaraswamy

ಚನ್ನಪಟ್ಟಣ ರಣಾಂಗಣ; ಹೆಚ್‌ಡಿಕೆ ಪೂಜೆಯ ವೇಳೆ ಅಚ್ಚರಿಯ ಸನ್ನಿವೇಶ; ನಿಖಿಲ್ ಗೆಲುವಿನ ಶುಭ ಸೂಚನೆ ಎಂದ ಜೆಡಿಎಸ್ ನಾಯಕರು

ಚನ್ನಪಟ್ಟಣ ರಣಾಂಗಣ; ಹೆಚ್‌ಡಿಕೆ ಪೂಜೆಯ ವೇಳೆ ಅಚ್ಚರಿಯ ಸನ್ನಿವೇಶ; ನಿಖಿಲ್ ಗೆಲುವಿನ ಶುಭ ಸೂಚನೆ ಎಂದ ಜೆಡಿಎಸ್ ನಾಯಕರು

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಹಾಸನ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜಕೀಯ ಪ್ರತಿಷ್ಠೆಯ ಕಣ ಮಾತ್ರವಲ್ಲ, ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯದ ನಿರ್ಣಯವೂ ಹೌದು. ಹಾಗಾಗಿ ಎನ್‌ಡಿಎ ಮಿತ್ರ ಪಕ್ಷಗಳು ಈ ಚುನಾವಣೆಯಲ್ಲಿ ಗೆಲ್ಲಲು ರಣತಂತ್ರ ರೂಪಿಸುತ್ತಿವೆ.ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ನಡುವೆ ನೇರ ಹಣಾಹಣಿ ಎರ್ಪಟ್ಟಿದ್ದು ಕದನ ಕೌತುಕ ಸೃಷ್ಟಿಸಿದೆ.ಈ ನಡುವೆ ಎಚ್.ಡಿ.ಕುಮಾರಸ್ವಾಮಿ ಕುಟುಂಬ ತಮ್ಮ ಪುತ್ರನ ಗೆಲುವಿಗಾಗಿ ಟೆಂಪಲ್ ರನ್ ಕೈಗೊಂಡಿದ್ದು, ಪೂಜೆಯ ವೇಳೆ ಅಚ್ಚರಿಯ ಪ್ರಸಂಗವೊಂದು ನಡೆದಿದೆ. ದೇವರ ವಿಗ್ರಹದ ಬಲಗಡೆಯಿಂದ ಹೂವು ಬಿದ್ದಿದ್ದು, ಈ ಬಗ್ಗೆ ಬಗೆಬಗೆಯ ಚರ್ಚೆ ಶುರುವಾಗಿದೆ.ಕುಮಾರಸ್ವಾಮಿಯವರು ಭಾನುವಾರ ಪತ್ನಿ ಅನಿತಾ ಹಾಗೂ ಸೊಸೆ, ಮೊಮ್ಮಗು ಜೊತೆಗೆ ಹಾಸನಾಂಬೆ ಜಾತ್ರೆಯಲ್ಲಿ ಭಾಗವಹಿಸಿದರು. ಬಳಿಕ ಸಿದ್ದೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಪೂಜೆ ನೆರವೇರಿತ್ತಿರುವಾಗಲೇ ವಿಗ್ರಹದ ಬಲಗಡೆಯಿಂದ ಹೂ ಬಿದ್ದಿದೆ. ದೇವರ ಮೇಲಿಂದ ಹೂವು ಬಿದ್ದಾಗ ಪತ್ನಿ ಅನಿತಾ ಅವರು ಪುಳಕಿತರಾಗಿ ಪ್ರತ...