Friday, September 18

Tag: ED Case against Shobha Karandlaje

ಸಿದ್ದು ಬಂಟನ ವಿರುದ್ದ ತೊಡೆತಟ್ಟಿದ ಶೋಭಾ; ಭ್ರಷ್ಟಾಚಾರದ ದಾಖಲೆ ಬಿಡುಗಡೆಗೆ ಭೈರತಿಗೆ ಸವಾಲು

ಸಿದ್ದು ಬಂಟನ ವಿರುದ್ದ ತೊಡೆತಟ್ಟಿದ ಶೋಭಾ; ಭ್ರಷ್ಟಾಚಾರದ ದಾಖಲೆ ಬಿಡುಗಡೆಗೆ ಭೈರತಿಗೆ ಸವಾಲು

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಳಗಾವಿ: ರಾಜ್ಯದ ಸಚಿವ ಭೈರತಿ ಸುರೇಶ್ ಹಾಗೂ ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ನಡುವಿನ ವಾಕ್ಸಮರ ಮುಂದುವರಿದಿದೆ. ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿರುವ ಶೋಭಾ ಕರಂದ್ಲಾಜೆ, ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಸಚಿವ ಭೈರತಿ ಸುರೇಶ್ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.ಮುಡಾ ಹಗರಣದ ಮಹತ್ವದ ದಾಖಲೆಗಳನ್ನು ಭೈರತಿ ಸುರೇಶ ಸುಟ್ಟಿರುವದು ನಿಜ ಎಂದು ಪುನರುಚ್ಛರಿಸಿದ ಶೋಭಾ ಕರಂದ್ಲಾಜೆ, ಈ ಹಗರಣ ಬಗ್ಗೆ ಜಾರಿ ನಿರ್ದೇಶನಾಲಯವೂ ತನಿಖೆ ನಡೆಸುತ್ತಿದೆ. ನಾನು ಸಚಿವ ಸುರೇಶ ವಿರುದ್ಧ ಖಚಿತವಾಗಿ ಆರೋಪ ಮಾಡಿದ ಮೇಲೆ ನನ್ನ ವಿರುದ್ಧ ಭ್ರಷ್ಟಾಚಾರದ ಮಾತು ಆಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು....