Thursday, September 24

Tag: Polali Sri Rajarajeshwari Temple

‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ 'ಪೊಳಲಿ ಚೆಂಡು' ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು 'ಕಡೆ ಚೆಂಡು' ನಿಗದಿಯಾಗಿದೆ.ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್‌ ಹೀಗಿದೆ: ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ.ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ  ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುವುದು. ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತಿರುವುದೇ ವಿಶೇಷ. ಈ ಬ...
ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೈವಿಧ್ಯ
ಮಂಗಳೂರು: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಇದೀಗ ಮತ್ತೊಂದು ಕೈಂಕರ್ಯದಿಂದ ಆಸ್ತಿಕರ ಗಮನಸೆಳೆದಿದೆ. 'ಚೆಂಡು ಉತ್ಸವದ ನಾಡು' ಎಂದೇ ಗುರುತಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಶತಮಾನದ ನಂತರ ಶತಚಂಡಿಕಾಯಾಗ ನಡೆಯುತ್ತಿದೆ.ಇದು ನಿಜಕ್ಕೂ ಅಪೂರ್ವ ಹಾಗೂ ಅನನ್ಯ ಕೈಂಕರ್ಯ. ಸುಮಾರು 105 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಇಂತಹಾ ಚಂಡಿಕಾ ಯಾಗ ನಡೆದಿತ್ತು. ಲೋಕ ಕಲ್ಯಾಣಾರ್ಥವಾಗಿ ನೆರವೇರುತ್ತಿರುವ ಈ ಶತಚಂಡಿಕಾಯಾಗದಲ್ಲಿ ದೇಶದ ವಿವಿಧೆಡೆಯ ಯತಿಗಳು ಭಾಗಿಯಾಗುತ್ತಿದ್ದಾರೆ. ಚೆಂಡು ಉತ್ಸವ ಸಂದರ್ಭದ ಜನೋತ್ಸಾಹಕ್ಕೆ ಈ ಶತಚಂಡಿಕಾಯಾಗದ ಸಡಗರ ಸಾಕ್ಷಿಯಾಗುತ್ತಿರುವುದು ವಿಶೇಷ.ಮಾರ್ಚ್ 5ರ ಬೆಳಿಗ್ಗೆ 6 ರಿಂದ ಶತಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ ನೆರವೇರಲಿದೆ. ಮರುದಿನ, ಮಾರ್ಚ್ 6, ಗುರುವಾರ 'ದೊಡ್ಡ ರಂಗಪೂಜೆ' ಉತ್ಸವ ನೆರವೇರಲಿದೆ.ಮಾರ್ಚ್ 1 ರಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ವಿವಿಧ ಕೈಂಕರ್ಯಗಳು ನೆರವೇರುತ್ತಿವೆ. ಮಾರ್ಚ್ 5 ರಂದು ಬುಧವಾರ ಶತಚಂಡಿಕಾಯಾಗ ...