Tuesday, August 18

ವಿದೇಶ

ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು: ಯಡಿಯೂರಪ್ಪ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ
ಬೆಂಗಳೂರು: ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಯಡಿಯೂರಪ್ಪ, ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.ರಾಜ್ಯ ಸರ್ಕಾರ ಮುಸ್ಲಿಮರಿಗೆ 4% ಮೀಸಲಾತಿ ನೀಡುವ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರು ದಿನನಿತ್ಯ ಬಳಸುವ ಹಾಲಿನ ಬೆಲೆ ಒಂದು ವರ್ಷದ ಅವಧಿಯಲ್ಲಿ 9 ರೂಪಾಯಿ ಹೆಚ್ಚಾಗಿದೆ.ನಿರಂತರ ಬೆಲೆ ಏರಿಕೆಯ ನೀತಿಯಿಂದ ಜನರನ್ನು ನೆಮ್ಮದಿಯಿಂದ ಬದುಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಬಿಡುತ್ತಿಲ್ಲ. ಈ ಎಲ್ಲಾ ಬೆಲೆ ಏರಿಕೆಯನ್ನು ರಾಜ್ಯ… pic.twitter.com/2oHzWHliEp — BJP Karnataka (@BJP4Karnataka) April 1, 2025...
ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ದಕ್ಷಿಣ ಭಾರತದ ಅತಿ ದೊಡ್ಡ ಅಂಗಾಂಗ ಮರು ಪಡೆಯುವ ಕೇಂದ್ರ ಬೆಂಗಳೂರಿನಲ್ಲಿ ಸ್ಥಾಪನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೈವಿಧ್ಯ
 ಬೆಂಗಳೂರು: ದಾನಗಳಲ್ಲಿ ಶ್ರೇಷ್ಠ ದಾನ ಅಂಗಾಂಗ ದಾನ. ವೈದ್ಯಕೀಯ ಶಿಕ್ಷಣ ಇಲಾಖೆಯು ಈ ಅಂಗಾಂಗ ದಾನ ಯೋಜನೆಗೆ ಹೊಸ ರೂಪ ನೀಡಲು ಕ್ರಮ ಕೈಗೊಂಡಿದೆ. ಮತ್ತೊಬ್ಬರ ಬಾಳಿಗೆ ಬೆಳಕಾಗುವ ಮಹತ್ವದ ಯೋಜನೆಗೆ ಇಲಾಖೆ ಮುಂದಾಗಿದೆ.ವೈದ್ಯಕೀಯ ಶಿಕ್ಷಣ ಇಲಾಖೆಯು ತನ್ನ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ನವೀಕರಿಸಲು ಮತ್ತು ಅಂಗಾಂಗ ಮರು ಪಡೆಯುವ ಕೇಂದ್ರ ಸ್ಥಾಪಿಸಲು 1 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಸಂಬಂಧ ಆದೇಶ ಕೂಡ ಹೊರಡಿಸಲಾಗಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ 125ನೇ ವರ್ಷಾಚರಣೆ ಸಂದರ್ಭದಲ್ಲಿಯೇ ಈ ಮಹತ್ವದ ಕೇಂದ್ರ ಆರಂಭವಾಗುತ್ತಿರುವುದು ಮತ್ತೊಂದು ಗಮನಾರ್ಹ ಸಂಗತಿಯಾಗಿದೆ.ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಈ ಅಂಗಾಂಗ ಮರು ಪಡೆಯುವಿಕೆ ಕೇಂದ್ರವು ಕಾರ್ಯಾರಂಭ ಮಾಡಲಿದೆ ಎಂದು *ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್* ಪತ್ರಿಕಾ ಪ್ರಕಟಣೆಯಲ್ಲಿ ಸೋಮವಾರ ಮಾಹಿತಿ ನೀಡಿದ್ದಾರೆ."ಕಸಿ ಮಾಡಲು ಅಂಗಾಂಗಗಳ ಖರೀದಿಯನ್ನು ಸುಗಮಗೊಳಿಸುವ ಮೂಲಕ ಅಂಗಾಂಗ ಮರುಪಡೆಯುವಿಕೆ ...
ಶಾಸಕ ರಾಜಣ್ಣ ಹತ್ಯೆ ಸಂಚು; ಸ್ಫೋಟಕ ಆಡಿಯೋ ಬಹಿರಂಗ

ಶಾಸಕ ರಾಜಣ್ಣ ಹತ್ಯೆ ಸಂಚು; ಸ್ಫೋಟಕ ಆಡಿಯೋ ಬಹಿರಂಗ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್‌ ಸಂಚಿನ ಪ್ರಕರಣದ ಜೊತೆಯಲ್ಲೇ ವೇಳೆ ಶಾಸಕ ರಾಜೇಂದ್ರ ಹತ್ಯೆ ಸಂಚಿನ ಆರೋಪವೂ ತಲ್ಲಣ ಸೃಷ್ಟಿಸಿದೆ.ತಮ್ಮ ಹತ್ಯೆಗೆ ಸಂಚು ನಡೆದಿದೆ ಎಂದು ಸಹಕಾರ ಸಚಿವ ಕೆಎನ್​ ರಾಜಣ್ಣ ಪುತ್ರ, ಎಂಎಲ್​ಸಿ ರಾಜೇಂದ್ರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಎಫ್​ಐಆರ್​ ಕೂಡ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿರುವಂತೆಯೇ, ಹತ್ಯೆ ಸಂಚಿನದ್ದೆನ್ನಲಾದ ಆಡಿಯೋ ತುಣುಕೊಂದು ವೈರಲ್ ಆಗಿದೆ.ಕೊಲೆ ಸಂಚಿಗೆ ಸಂಬಂಧಿಸಿದ ಆಡಿಯೋವನ್ನೂ ಪೊಲೀಸರಿಗೆ ನೀಡಿದ್ದಾಗಿ ರಾಜೇಂದ್ರ ಹೇಳಿದ್ದರು. ಆ ಆಡಿಯೋದ್ದೆನ್ನಲಾದ ತುಣುಕೊಂದು ಬಹಿರಂಗವಾಗಿದೆ. ಮಹಿಳೆಯು ಆ ಆಡಿಯೋದಲ್ಲಿ ಅನೇಕ ರಹಸ್ಯಗಳನ್ನು ಆಡಿಯೋದಲ್ಲಿ ಹೇಳಿಕೊಂಡಂತಿದೆ. ಆದರೆ, ಹತ್ಯೆ ಸಂಚಿನ ಹಿಂದಿನ ಮಹಾನಾಯಕ ಯಾರು ಎಂಬ ಸುಳಿವು ವ್ಯಕ್ತವಾಗಿಲ್ಲ....
BJD ಶಾಸಕನಿಗೆ 1.4 ಕೋಟಿ ರೂ ವಂಚನೆ; ಕರ್ನಾಟಕದ ವ್ಯಕ್ತಿ ಸೇರಿ 7 ಸೈಬರ್ ಖದೀಮರ ಸೆರೆ

BJD ಶಾಸಕನಿಗೆ 1.4 ಕೋಟಿ ರೂ ವಂಚನೆ; ಕರ್ನಾಟಕದ ವ್ಯಕ್ತಿ ಸೇರಿ 7 ಸೈಬರ್ ಖದೀಮರ ಸೆರೆ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
 ಭುವನೇಶ್ವರ: ಐಪಿಒಗಳು ಮತ್ತು ಒಟಿಸಿ ವಹಿವಾಟಿನಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಹೆಚ್ಚಿನ ಆದಾಯ ನೀಡುವ ನೆಪದಲ್ಲಿ ಬಿಜು ಜನತಾದಳ (ಬಿಜೆಡಿ) ಹಿರಿಯ ಶಾಸಕ ಮತ್ತು ಮಾಜಿ ಸಚಿವರಿಗೆ 1.4 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ಒಡಿಶಾ ಪೊಲೀಸರು ಏಳು ಮಂದಿ ಅಂತರರಾಜ್ಯ ಸೈಬರ್ ವಂಚಕರನ್ನು ಬಂಧಿಸಿದ್ದಾರೆ.ಮಾರ್ಚ್ 25 ರಿಂದ ಮಾರ್ಚ್ 28 ರವರೆಗೆ ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಸ್ಥಳಗಳಲ್ಲಿ ಅಪರಾಧ ವಿಭಾಗದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಂಚಕರನ್ನು ಬಂಧಿಸಲಾಗಿದೆ ಎಂದು ಒಡಿಶಾ ಪೊಲೀಸರು ತಿಳಿಸಿದ್ದಾರೆ.ಆರೋಪಿಗಳನ್ನು ಕರ್ನಾಟಕದ ಜ್ಯೋತಿ ರಾಜು (39), ರಾಜು ಸಿ (34), ಇಸ್ಮಾಯಿಲ್ ರಹೈದ್ (27), ವಾಸಿಮ್ (28) ಮತ್ತು ತಮಿಳುನಾಡಿನ ಪಟ್ಟರಾಜ ಎಸ್ (34), ಜೆಗತೀಶ್ ರಾಧಾಕೃಷ್ಣನ್ (40), ಇ ಶಕ್ತಿಕುಮಾರವೇಲ್ (50) ಎಂದು ಗುರುತಿಸಲಾಗಿದೆ.ಸೈಬರ್ ವಂಚಕರ ಬಲೆಗೆ ಬಿದ್ದ ಬಿಜೆಡಿ ಶಾಸಕರು ಜನವರಿ 13, 2025 ರಂದು ಅಪರಾಧ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೂಲಗಳ ಪ್ರಕಾರ, ಹಿರಿಯ ಬಿಜೆಡಿ ನಾಯಕ ಕೆಲವು ತಿಂಗಳ ಹಿಂದೆ ಸಾಮಾಜಿಕ...
ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್; ನಾಡಿನೆಲ್ಲೆಡೆ ಹಬ್ಬದ ಸಡಗರ

ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್; ನಾಡಿನೆಲ್ಲೆಡೆ ಹಬ್ಬದ ಸಡಗರ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ನವದೆಹಲಿ: ದೇಶಾದ್ಯಂತ ಮುಸಲ್ಮಾನರ ಪವಿತ್ರ ಹಬ್ಬ ಈದ್ ಉಲ್ ಫಿತರ್(ರಂಜಾನ್) ಆಚರಿಸಲಾಗುತ್ತಿದೆ.ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಭಾನಿವಾರ ಈದ್-ಉಲ್-ಫಿತರ್ ಚಂದ್ರ ಗೋಚರಿಸಿದ ನಂತರ ರಮ್ಜಾನ್ ಉಪವಾಸವನ್ನು ಅಂತ್ಯಗೊಳಿಸಿರುವ ಮುಸ್ಲಿಮರು ಹಬ್ಬ ಸಂಭ್ರಮದಲ್ಲಿ ನಿರತರಾಗಿದ್ದಾರೆ. ಎಲ್ಲೆಲ್ಲೂ ಶುಭಾಶಯಗಳ ವಿನಿಮಯ ಸಾಗಿದೆ....
ರಾಜಧಾನಿ ಸೆರಗಿನಲ್ಲಿ ಮತ್ತೊಂದು ಕೊಲೆ; ಕುಖ್ಯಾತ ರೌಡಿ ನೇಪಾಳಿ ಮಂಜನ ಹತ್ಯೆ

ರಾಜಧಾನಿ ಸೆರಗಿನಲ್ಲಿ ಮತ್ತೊಂದು ಕೊಲೆ; ಕುಖ್ಯಾತ ರೌಡಿ ನೇಪಾಳಿ ಮಂಜನ ಹತ್ಯೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಬೆಂಗಳೂರು ಹೊರವಲಯದ ಆನೇಕಲ್ ಬಳಿ ರೌಡಿ ಶೀಟರ್ ಮಂಜ ಅಲಿಯಾಸ್ ನೇಪಾಳಿ ಮಂಜನ ಬರ್ಬರ ಕೊಲೆಯಾಗಿದೆ. ಹೆಬ್ಬಗೋಡಿಯ ಗೊಲ್ಲಹಳ್ಳಿ ಮುಖ್ಯ ರಸ್ತೆಯಲ್ಲಿ ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಹಂತಕರು ಮಂಜನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ನೇಪಾಳಿ ಮಂಜ, ಎರಡು ಕೊಲೆ, ಕೊಲೆ ಯತ್ನ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿದ್ದ. ಹೆಬ್ಬಗೋಡಿ ಸೇರಿದಂತೆ ಹಲವೆಡೆ ಈತನ ಹಾವಳಿ ಇತ್ತೆಂದು ಪೊಲೀಸರು ಹೇಳುತ್ತಿದ್ದಾರೆ.ಕೆಲ ಸಮಯದ ಹಿಂದಷ್ಟೇ ಕುಟುಂಬ ಸಮೇತ ಕುಣಿಗಲ್​​ಗೆ ಶಿಫ್ಟ್ ಆಗಿದ್ದ ಮಂಜ, ಭಾನುವಾರ ಯುಗಾದಿ ಹಬ್ಬದ ಹಿನ್ನೆಲೆ ಬೆಂಗಳೂರಿಗೆ ಭೇಟಿನೀಡಿದ್ದ. ಸ್ನೇಹಿತರ ಜೊತೆ ಗೊಲ್ಲಹಳ್ಳಿ ಬಳಿ ರಾತ್ರಿ ಎಣ್ಣೆ ಪಾರ್ಟಿ ಮಾಡ್ತಿದ್ದಾಗ 2 ಬೈಕ್​ನಲ್ಲಿ ಬಂದಿದ್ದ ಹಂತಕರು ಮಾರಕಾಸ್ತ್ರಗಳಿಂದ ಮಂಜನ ದಾಳಿ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ....
‘RSS ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್ ವೃಕ್ಷ’ವಾಗಿದೆ’: ಪ್ರಧಾನಿ ನರೇಂದ್ರ ಮೋದಿ.

‘RSS ಭಾರತದ ಅಮರ ಸಂಸ್ಕೃತಿಯ ಆಧುನಿಕ ‘ಅಕ್ಷಯ ವತ್ ವೃಕ್ಷ’ವಾಗಿದೆ’: ಪ್ರಧಾನಿ ನರೇಂದ್ರ ಮೋದಿ.

ದೇಶ, ಪ್ರಮುಖ ಸುದ್ದಿ, ವಿದೇಶ, ವೀಡಿಯೊ
ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಾರತದ ಅಮರ ಸಂಸ್ಕೃತಿಯ ಆಧುನಿಕ 'ಅಕ್ಷಯ ವತ್' ಆಗಿದ್ದು, ಇದು ರಾಷ್ಟ್ರವನ್ನು ನಿರಂತರವಾಗಿ ಚೈತನ್ಯಗೊಳಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಆರ್‌ಎಸ್‌ಎಸ್‌ನ ನಿಸ್ವಾರ್ಥ ಸೇವೆ ಮತ್ತು ರಾಷ್ಟ್ರ ನಿರ್ಮಾಣ, ಸಾಮಾಜಿಕ ಸೇವೆ ಮತ್ತು ಸಾಂಸ್ಕೃತಿಕ ಸಂರಕ್ಷಣೆಯಲ್ಲಿ ಅದರ ಪಾತ್ರವನ್ನು ಅವರು ಶ್ಲಾಘಿಸಿದ್ದಾರೆ.ಪ್ರಧಾನಿ ಶ್ರೀ @narendramodi ಅವರು ಮಹಾರಾಷ್ಟ್ರದ ನಾಗಪುರದಲ್ಲಿರುವ ದೀಕ್ಷಾಭೂಮಿಗೆ ಭೇಟಿ ನೀಡಿ ಬಾಬಾ ಸಾಹೇಬ್ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದರು.#BRAmbedkar pic.twitter.com/ZQRnc573wa — BJP Karnataka (@BJP4Karnataka) March 30, 2025ಮಾಧವ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ಹೊಸ ವಿಸ್ತರಣಾ ಕಟ್ಟಡವಾದ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರದ ಅಡಿಪಾಯ ಹಾಕಿದ ನಂತರ ಅವರು"ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತದ ಅಮರ ಸಂಸ್ಕೃತಿಯ ಆಧುನಿಕ ಅಕ್ಷಯ ವತ್ ಆಗಿದೆ; ಈ ಅಕ್ಷಯ ವತ್ ಭಾರತೀಯ ಸಂಸ್ಕೃತಿ ಮತ್ತು ನಮ್ಮ ರಾಷ್...
197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ

197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯ ಸರ್ಕಾರ 2024ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರಕಟಿಸಿದೆ. 197 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ ಘೋಷಣೆ ಮಾಡಲಾಗಿದೆ. ಪದಕ ಪುರಸ್ಕೃತರ ಪಟ್ಟಿ:ಸಿ.ಕೆ. ಬಾಬಾ- ಪೊಲೀಸ್ ಅಧೀಕ್ಷಕರು- ಬೆಂಗಳೂರು ಡಾ: ಅನೂಪ್ ಎ ಶೆಟ್ಟಿ - ಪೊಲೀಸ್ ಅಧೀಕ್ಷಕರು, ಸಿಐಡಿ ಅಂಷುಕುಮಾರ್ - ಪೊಲೀಸ್ ಅಧೀಕ್ಷಕರು, ಹಾವೇರಿ, ರಾಮನಗೌಡ ಎ ಹಟ್ಟಿ - ಅಡಿಷನಲ್ ಎಸ್‌ಪಿ, ವಿಜಯಪುರ, ಸುರೇಶ ಟಿ.ವಿ - ಅಡಿಷನಲ್ ಎಸ್‌ಪಿ, ರಾಮನಗರ ಪ್ರಕಾಶರಾಠೋಡ - ಎಸಿಪಿ, ಕೆ.ಜಿ. ಹಳ್ಳಿ ಉಪ-ವಿಭಾಗ, ಬೆಂಗಳೂರು, ರೀನಾ ಸುವರ್ಣಾ ಎನ್ಎ -ಸಿಪಿ, ವೈಟ್ ಫೀಲ್ಡ್ ಉಪ-ವಿಭಾಗ, ಬೆಂಗಳೂರು ಧನ್ಯ ಎನ್ ನಾಯಕ - ಎಸಿಪಿ, ಮಂಗಳೂರು ಉಪ-ವಿಭಾಗ, ಶಾಂತಮಲ್ಲಪ್ಪ - ಎಸಿಪಿ, ದೇವರಾಜ ಉಪ-ವಿಭಾಗ, ಮೈಸೂರು, ಗೋಪಿ ಬಿ.ಆರ್. - ಡಿವೈಎಸ್‌ಪಿ, ಆಳಂದ ಉಪ-ವಿಭಾಗ, ಕಲಬುರಗಿ, ಅರವಿಂದ ಎನ್ ಕಲಗುಜ್ಜಿ - ಪೊಲೀಸ್ ಉಪಾಧೀಕ್ಷಕರು, ಕಾರ್ಕಳ ಉಪ-ವಿಭಾಗ, ಉಡುಪಿ, ಪಾಂಡುರಂಗ ಎಸ್. - ಡಿವೈಎಸ್‌ಪಿ, ಕೆಜಿಎಫ್ ಉಪ-ವಿಭಾಗ, ಕೆಜಿಎಫ್, ರವಿಕುಮಾರ್ ಕೆ.ವೈ -ಡಿವೈಎಸ್‌ಪಿ, ಸೆನ್ ಪೊಲೀಸ್ ಠಾ...
ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ವಿಜಯಪುರ: ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೊಸ ಪಕ್ಷ ಕಟ್ಟುವ ಸುಳಿವನ್ನು ನೀಡಿದ್ದಾರೆ. ಕುಟುಂಬ ರಾಜಕಾರಣದಿಂದಾಗಿ ಬಿಜೆಪಿ ಸರ್ವನಾಶವಾಗಲಿದೆ ಎಂದಿರುವ ಯತ್ನಾಳ್. ಜನರ ಅಭಿಪ್ರಾಯ ಸಂಗ್ರಹಿಸಿ ಒಂದು ಹಿಂದು ಪಕ್ಷ ಆಸ್ತಿತ್ವಕ್ಕೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ.ಯುಗಾದಿ ಸಂದರ್ಭದಲ್ಲಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಬಹಳಷ್ಟು ಜನರು ಬಿಜೆಪಿಯಿಂದ ಹಿಂದು ರಕ್ಷಣೆ ಅಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಡಿಯೂರಪ್ಪ ಕುಟುಂಬ ಹೊಂದಾಣಿಕೆ ರಾಜಕೀಯ ಮಾಡಿ ಪಕ್ಷವನ್ನು ದುರ್ಬಲ ಮಾಡಿದೆ. ಹೀಗಾಗಿ ಹಿಂದುಗಳ ರಕ್ಷಣೆ, ದೇಶಕ್ಕಾಗಿ ಹಿಂದು ಪಕ್ಷ ಆಸ್ವಿತ್ವ ತರಬೇಕಾಗಿದೆ ಎಂದು ಪ್ರತಿಪಾದಿಸಿದರು.'ನಾವು, ಬಿಜೆಪಿ-ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳಲ್ಲ. ಯಡಿಯೂರಪ್ಪ ಬಿಟ್ಟು ನಮಗೆ ಬೇರೆ ಗತಿಯಿಲ್ಲ ಎಂದು ನೀವು ಹೇಳಿದರೆ ನಮ್ಮ ದಾರಿ ನಾವು ಕಂಡುಕೊಳ್ಳಬೇಕಾಗುತ್ತದೆ ಎಂದಿರುವ ಯತ್ನಾಳ್, ಹಿಂದೂ ಪಕ್ಷ ಕಟ್ಟುವ ಬಗ್ಗೆ ಬೀದರ್‌ನಿಂದ ಹಿಡಿದು ಚಾಮರಾಜನಗರವರೆಗೂ ಒತ್ತಾಯಿಸಿದ್ದಾರೆ. ಹೀಗಾಗಿ ಹೊಸ ಪಕ್ಷದ ಬ...
ಕಿತ್ತೂರು ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಕೇಂದ್ರಕ್ಕೆ ಸಿಎಂ ಆಗ್ರಹ

ಕಿತ್ತೂರು ಚೆನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಕೇಂದ್ರಕ್ಕೆ ಸಿಎಂ ಆಗ್ರಹ

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೈವಿಧ್ಯ
ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪಾತ್ರ ಬರೆದಿದ್ದಾರೆ.ಪ್ರಾಚೀನ ಸ್ಮಾರಕಗಳು, ಐತಿಹಾಸಿಕ ತಾಣಗಳು ಮತ್ತು ಅವಶೇಷಗಳ ಕಾಯ್ದೆ 1958ರ ಅಡಿಯಲ್ಲಿ ವೀರ ರಾಣಿ ಕಿತ್ತೂರು ಚೆನ್ನಮ್ಮನವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಲು ಮನವಿಮಾಡಿದ್ದಾರೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆ ಸಾರುವ ವೀರ ರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ ತಾಣ ಇರುವುದನ್ನು ಸಮಸ್ತ ಕನ್ನಡಿಗರ ಪರವಾಗಿ ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ವಸಾಹತುಶಾಹಿ ಆಳ್ವಿಕೆಯ ವಿರುದ್ಧ ಸಶಸ್ತ್ರ ಹೋರಾಟವನ್ನು ಮುನ್ನಡೆಸಿದ ಮಹಿಳೆಯರಲ್ಲಿ ರಾಣಿ ಚೆನ್ನಮ್ಮ ಮೊದಲಿಗರು. ಅವರ ಶೌರ್ಯ ಮತ್ತು ಅದಮ್ಯ ಚೈತನ್ಯ ಯುವಜನತೆಗೆ ಸ್ಫೂರ್ತಿದಾಯಕವಾಗಿದೆ ಎಂದು ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.ಈ ಅಪ್ರತಿಮ ನಾಯಕಿಯ ಸಮಾಧಿಯು ಕೇವಲ ವಿಶ್ರಾಂತಿ ಸ್ಥಳವಲ್ಲ, ಬದಲಾಗಿ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರತಿನಿಧಿಸುವ ಮಹಾನ್ ಶಕ್ತಿ ಸ್ಥಳವಾಗಿದೆ. 18...