Wednesday, August 12

ವಿದೇಶ

ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ: ರಾಮಲಿಂಗಾ ರೆಡ್ಡಿ

ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ: ರಾಮಲಿಂಗಾ ರೆಡ್ಡಿ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವಿಶೇಷ
ಬೆಂಗಳೂರು: ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಮುಜರಾಯಿ ಮಂತ್ರಿ ರಾಮಲಿಂಗಾ ರೆಡ್ಡಿ ಪಣತೊಟ್ಟಿದ್ದಾರೆ. ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಅವರು ಮಾಹಿತಿ ಹಂಚಿಕೊಂಡಿದ್ದಾರೆ.ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ‌ ಪುಣ್ಯಸ್ನಾನವನ್ನು ಪ್ರಾರಂಭಿಸಲು ಪ್ರಮುಖರಾದವರು ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಕೈಲಾಸಾಶ್ರಮ ತಿರುಚ್ಚಿ ಮಹಾಸಂಸ್ಥಾನ ಮಠದ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿ. ದಕ್ಷಿಣ ಭಾ...
ಮಂಡ್ಯದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ಖಂಡನೆ

ಮಂಡ್ಯದಲ್ಲಿ ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಬಿಜೆಪಿ ಖಂಡನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಕೃತ್ಯವನ್ನು ಪ್ರತಿಪಕ್ಷ ಬಿಜೆಪಿ ಖಂಡಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದಲೂ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದ್ದು ದಿನಕ್ಕೊಂದು ಮಾನಭಂಗ, ಅತ್ಯಾಚಾರ ಪ್ರಕರಣಗಳು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸುತ್ತಲೇ ಇದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಂಡ್ಯದಲ್ಲಿ 8 ವರ್ಷದ ಬಾಲಕಿಯನ್ನು ಬೆದರಿಸಿ ಸರ್ಕಾರಿ ಶಾಲಾ ಅವರಣದಲ್ಲೇ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಹೃದಯವಿದ್ರಾವಕ ಘಟನೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಅರಾಜಕತೆಗೆ ಮತ್ತೊಮ್ಮೆ ಕನ್ನಡಿ ಹಿಡಿದಿದೆ ಎಂಡಿದ್ದಾರೆ.ಮಹಿಳೆಯರ ಮೇಲೆ ಅತ್ಯಾಚಾರವಾದರೆ ಬಿಜೆಪಿ ಕಾಲದಲ್ಲಿ ರೇಪ್ ಆಗಿಲ್ಲವಾ ಎಂದು ಸಿಎಂ ಸಿದ್ದರಾಮಯ್ಯ ಅವರು ಉಡಾಫೆ ಕೊಡುಕೊಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ಅಶೋಕ್, ಈ ಸರ್ಕಾರದ ಈ ಸಂವೇದನಾರಹಿತ ಧೋರಣೆ, ಅಲಕ್ಷ್ಯ...
ಮಹಾರಾಷ್ಟ್ರಕ್ಕೂ ಮಾದರಿಯಾದ KSRTC; ಬೆಂಗಳೂರಿನಲ್ಲಿ ನಿಯೋಗದ ಕಸರತ್ತು

ಮಹಾರಾಷ್ಟ್ರಕ್ಕೂ ಮಾದರಿಯಾದ KSRTC; ಬೆಂಗಳೂರಿನಲ್ಲಿ ನಿಯೋಗದ ಕಸರತ್ತು

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಸಾರಿಗೆ ವ್ಯವಸ್ಥೆಯಲ್ಲಿ ಮುಂಚೂಣಿ ಸೇವೆಯ ಮೂಲಕ ಗಮನಸೆಳೆದಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಮಹಾರಾಷ್ಟ್ರ ಸರ್ಕಾರಕ್ಕೂ ಮಾದರಿಯಾದಂತಿದೆ.  ಮಹಾರಾಷ್ಟ್ರ ಸರ್ಕಾರದ ಸಾರಿಗೆ ಸಚಿವ ಪ್ರತಾಪ್‌ ಸರ್‌ನಾಯಕ್‌ ನತೃತ್ವದ ನಿಯೋಗ ಬೆಂಗಳೂರಿನಲ್ಲಿರುವ KSRTC ಕೇಂದ್ರ ಕಚೇರಿ ಹಾಗೂ ಕಾರ್ಯಾಗಾರಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿದ ಬೆಳವಣಿಗೆ ಕುತೂಹಲದ ಕೇಂದ್ರಬಿಂದುವಾಯಿತು.ಮಹಾರಾಷ್ಟ್ರ ಸಾರಿಗೆ ನಿಗಮ 'ಎಂ.ಎಸ್.ಆರ್.ಟಿ.ಸಿ' ವ್ಯವಸ್ಥಾಪಕ ನಿರ್ದೇಶಕ ಮಾಧವ್ ಕುಸೆಕರ್ ಹಾಗೂ ಅಧಿಕಾರಿಗಳ ತಂಡ ಈ ನಿಯೋಗದಲ್ಲಿತ್ತು. KSRTC ನಿಗಮದಲ್ಲಿನ ಪ್ರತಿಷ್ಠಿತ ವಾಹನಗಳ ಕಾರ್ಯಾಚರಣೆ, ಕಾರ್ಮಿಕ ಕಲ್ಯಾಣ ಉಪಕ್ರಮಗಳು, ವಾಣಿಜ್ಯ ಆದಾಯ, ಬಸ್ಸುಗಳ ಪುನಃಶ್ಚೇತನ/ ನವೀಕರಣ, ಹೆಚ್.ಆರ್.ಎಂ.ಎಸ್., ಇ-ಟೆಕೇಟಿಂಗ್, KSRTC ಆರೋಗ್ಯ ಯೋಜನೆ, ರೂ 1 ಕೋಟಿ ಅಪಘಾತ ವಿಮೆ ಹಾಗೂ ಇತರೆ ಉಪಕ್ರಮಗಳ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಂದ ಮಾಹಿತಿ ಪಡೆಯಿತು. KSRTC ಉಪಾಧ್ಯಕ್ಷ ರಿಜ್ವಾನ್ ನವಾಬ್, ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಕಾರ್ಯದರ್ಶಿ, KSRTC ವ್ಯವಸ್ಥಾಪಕ ನಿರ್ದೇಶಕರು ಈ...
ಕರ್ನಾಟಕವನ್ನು ಪ್ರತಿನಿಧಿಸಿರುವ ನಿರ್ಮಲಾ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು?

ಕರ್ನಾಟಕವನ್ನು ಪ್ರತಿನಿಧಿಸಿರುವ ನಿರ್ಮಲಾ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು?

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕೇಂದ್ರದ ಬಜೆಟ್‌ನಲ್ಲಿ ಜನಸಾಮಾನ್ಯರ ಬದುಕು ಬದಲಾಯಿಸುವಂಥ ಯಾವುದೇ ಯೋಜನೆಗಳನ್ನು ಘೋಷಣೆ ಮಾಡಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್. ಪೂಜಾರಿ ವಿಶ್ಲೇಷಿಸಿದ್ದಾರೆ.ಇಂಗ್ಲಿಷ್'ನಲ್ಲೂ ಉದಯ ನ್ಯೂಸ್ ಲಭ್ಯ..Siddaramaiah's criticism of Budget 2025 purely politically motivated: K'taka BJPಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪದ್ಮರಾಜ್ ಆರ್. ಪೂಜಾರಿ, ಉದ್ಯೋಗ ಸೃಷ್ಟಿಗೆ ಕೆಲವು ಘೋಷಣೆಗಳನ್ನು ಮಾಡಿದ್ದಾರೆ. ಕಳೆದ ಹತ್ತ ವರ್ಷಗಳಿಂದಲೂ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗವುದು ಎಂದು ಹೇಳುತ್ತಾ ಬಂದಿದ್ದಾರೆ. ಅದು ಘೋಷಣೆಯಾಗಿ ಮಾತ್ರ ಉಳಿದಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ ಎಂದಿದ್ದಾರೆ.12 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ ಮತ್ತು ಕೆಲವೊಂದು ತೆರಿಗೆ ವಿನಾಯಿತಿ ಮಾಡಿರುವುದು ಮಾತ್ರ ಸ್ವಾಗತಾರ್ಹ. ಆದರೇ, ಕರ್ನಾಟಕದ ದೃಷ್ಟಿಯಿಂದ ಇದೊಂದು ನಿರಾಶದಾಯಕ ಆಯವ್ಯಯ ಎಂದು ಬಣ್ಣಿಸಿದ ಪದ್ಮರಾಜ್, ಕಳೆದ 10 ವರ್ಷ...
ಕೇಂದ್ರದ ‘ಸಾಲದ ಬಜೆಟ್’: ಮಂಜುನಾಥ್ ಭಂಡಾರಿ ಟೀಕೆ

ಕೇಂದ್ರದ ‘ಸಾಲದ ಬಜೆಟ್’: ಮಂಜುನಾಥ್ ಭಂಡಾರಿ ಟೀಕೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಕೇಂದ್ರ ಬಜೆಟ್‌ನಲ್ಲಿ ಬಿಜೆಪಿ ಮೈತ್ರಿ ಸರ್ಕಾರವಿರುವ ರಾಜ್ಯಗಳಿಗೆ ಬಂಪರ್, ವಿಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಬಿಡಿಕಾಸು..? ಅನ್ಯಾಯವಾಗಿದೆ, ವಿತ್ತ ಸಚಿವರು ಹಾಗೂ ಪ್ರಧಾನಿಯವರು ಪುನರ್ ಪರಿಶೀಲಿಸಬೇಕು ಎಂದು ಭಂಡಾರಿ ಸಲಹೆ..!ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಮಂಡಿಸಿರುವುದು 'ಸಾಲದ ಬಜೆಟ್' ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆದ ಶಾಸಕ ಮಂಜುನಾಥ ಭಂಡಾರಿ ವಿಶ್ಲೇಷಿಸಿದ್ದಾರೆ.ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಬಡವರಿಗೆ, ಮಧ್ಯಮ ವರ್ಗದವರಿಗೆ, ರೈತರಿಗೆ, ಮಹಿಳೆಯರಿಗೆ ಪೂರಕವಾದ ಒಂದೇ ಒಂದು ಯೋಜನೆ ಈ ಬಾರಿಯ ಆಯವ್ಯಯದಲ್ಲಿ ಇಲ್ಲ ಎಂದು ಬೊಟ್ಟು ಮಾಡಿದ್ದಾರೆ.ಕೇಂದ್ರ ಬಿಜೆಪಿ ಸರ್ಕಾರದ "ಸಬ್ ಕಾ ಸಾಥ್, ಸಬ್ ಕಾ ವಿಕಾಸ್" ಬಜೆಟ್ ನಲ್ಲಿ ಎಲ್ಲೂ ಪ್ರತಿಫಲಿಸಿಲ್ಲ. ಅದು ಕೇವಲ ಘೋಷಣೆಯಾಗೇ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಮಂಜುನಾಥ್ ಭಂಡಾರಿ, ದೆಹಲಿ, ಬಿಹಾರ ಚುನಾವಣೆಯನ್ನು ಗುರಿಯಾಗಿರಿಸಿಕೊಂಡು ಮಂಡಿಸಿದ ಬಜೆಟ್ ಇದಾಗಿದೆ ಎಂದಿದ್ದಾರೆ.ಕೇಂದ್ರ ಸರ್ಕಾರದ ಮೈತ್ರಿ ಪಕ್ಷಗಳ ಸರ್ಕಾರವಿರುವ ರಾಜ್ಯಗಳಿ...
ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ: ಅಶೋಕ ಆಗ್ರಹ

ಪ್ರಣಾಳಿಕೆಯಲ್ಲಿ ಹೇಳಿದಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಿ: ಅಶೋಕ ಆಗ್ರಹ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿದಂತೆಯೇ, ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ.ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಆರ್‌.ಅಶೋಕ ಭೇಟಿ ನೀಡಿದರು. ನಂತರ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಅವರ ಮೇಲೆ ಪೊಲೀಸರು ದೌರ್ಜನ್ಯ ಮಾಡಿದ್ದಾರೆ. ಗಂಟು ಮೂಟೆ ಕಟ್ಟಿಕೊಂಡು ಮನೆಗೆ ಹೋಗಿ ಎಂದು ಬೆದರಿಸಿದ್ದಾರೆ. ಅವರಿಗೆ ಪ್ರತಿಭಟನೆಗೆ ಅವಕಾಶ ನೀಡುತ್ತಿಲ್ಲ. ಅವರಿಗೆ ಕುಡಿಯುವ ನೀರು, ಶೌಚಾಲಯ, ಟೆಂಟ್‌ ಮೊದಲಾದ ಸೌಲಭ್ಯ ನೀಡುತ್ತಿಲ್ಲ. ಕಾಂಗ್ರೆಸ್‌ ಪಕ್ಷದ ಪ್ರಣಾಳಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರೂ. ಹಾಗೂ ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 7,000 ರೂ. ನೀಡಲಾಗುವುದು ಎಂದು ಘೋಷಿಸಲಾಗಿದೆ. ಇದರಂತೆಯೇ ಈಗಲೇ ಸರ್ಕಾರ ಗೌರವಧನ ನೀಡಲಿ ಎಂದು ಆಗ್ರಹಿಸಿದರು.ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಬಿಜೆಪಿ ಬೆಂಬಲ ನೀಡುತ್ತಿದೆ. ಅವರನ್ನು ಕರೆದು ...
ಬಿಎಂಟಿಸಿ-ಕೆನರಾ ಬ್ಯಾಂಕ್ ಒಡಂಬಡಿಕೆ; ನೌಕರರಿಗೆ ವಿಮೆ, ಮೃತರ ಅವಲಂಬಿತರಿಗೆ ಪರಿಹಾರ

ಬಿಎಂಟಿಸಿ-ಕೆನರಾ ಬ್ಯಾಂಕ್ ಒಡಂಬಡಿಕೆ; ನೌಕರರಿಗೆ ವಿಮೆ, ಮೃತರ ಅವಲಂಬಿತರಿಗೆ ಪರಿಹಾರ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಕೆನರಾ ಬ್ಯಾಂಕ್ ನೊಂದಿಗೆ ರೂ. 1.5 ಕೋಟಿ ಅಪಘಾತ ಪರಿಹಾರ ವಿಮಾ ಯೋಜನೆಯ ಒಡಂಬಡಿಕೆ ಮಾಡಿಕೊಂಡಿದ್ದು, ಮೃತರ ಅವಲಂಬಿತರಿಗೆ ರೂ. 1 ಕೋಟಿ ವಿಮಾ ಪರಿಹಾರ ಮೊತ್ತದ ಚೆಕ್ ವಿತರಣಾ ಕಾರ್ಯಕ್ರಮ ನಡೆಯಿತು.ಬೆಂ.ಮ.ಸಾ.ಸಂಸ್ಥೆಯು ಒಟ್ಟು 51 ಘಟಕಗಳನ್ನು ಹೊಂದಿದದ್ದು, ಪ್ರತಿದಿನ 5861 ಅನುಸೂಚಿಗಳಿಂದ 61536 ಸುತ್ತುವಳಿಗಳನ್ನು 12.04 ಲಕ್ಷ ಕಿ.ಮೀ.ಗಳಲ್ಲಿ ಆಚರಣೆಗೊಳಿಸಲಾಗುತ್ತಿದೆ. ಪ್ರತಿ ದಿನ ಸರಾಸರಿ 40 ಲಕ್ಷ ಪ್ರಯಾಣಿಕರು ಸಂಸ್ಥೆಯ ಸಾರಿಗೆಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.ಬೆಂಗಳೂರು ನಗರದಲ್ಲಿ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಪ್ರಸ್ತುತ 1279 ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ ಹಾಗೂ ಮುಂದಿನ ದಿನಗಳಲ್ಲಿ 352 ಎಲೆಕ್ನಿಕ್ ಬಸ್ಸುಗಳನ್ನು ಸೇರ್ಪಡೆಗೊಳಿಸಲು ಯೋಜಿಸಲಾಗಿದೆ. ಪ್ರಸ್ತುತ ಒಟ್ಟು 6158 ವಾಹನಗಳನ್ನು ಹೊಂದಿದ್ದು, ಪರಿಸರಸ್ನೇಹಿ ಹಾಗೂ ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಇದರ ಜೊತೆಯಲ್ಲೇ, ನಿಗಮದ ನೌಕರರ...
ALF 4.0 : ‘ಏಷ್ಯನ್ ಶತಮಾನ’ ಸಾಹಿತ್ಯ ಮತ್ತು ಸಂಸ್ಕೃತಿಗೆ ‘ಅಲಯನ್ಸ್‌ ವಿಶ್ವವಿದ್ಯಾಲಯ’ ವೇದಿಕೆ

ALF 4.0 : ‘ಏಷ್ಯನ್ ಶತಮಾನ’ ಸಾಹಿತ್ಯ ಮತ್ತು ಸಂಸ್ಕೃತಿಗೆ ‘ಅಲಯನ್ಸ್‌ ವಿಶ್ವವಿದ್ಯಾಲಯ’ ವೇದಿಕೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಅಲೈಯನ್ಸ್ ವಿಶ್ವವಿದ್ಯಾಲಯವು ಫೆಬ್ರವರಿ 13 ರಿಂದ ಫೆಬ್ರವರಿ 15, 2025 ರವರೆಗೆ ಮೂರು ದಿನಗಳ ಸಾಹಿತ್ಯ, ಸಂಸ್ಕೃತಿ ಮತ್ತು ಬೌದ್ಧಿಕ ಸಂವಾದವನ್ನೊಳಗೊಂಡ 'ಅಲಯನ್ಸ್ ಸಾಹಿತ್ಯ ಉತ್ಸವ (ALF 4.0)' ನಾಲ್ಕನೇ ಆವೃತ್ತಿಯನ್ನು ಆಚರಿಸಲಿದೆ. ಈ ವರ್ಷದ ವಿಷಯವಾದ “ದಿ ಏಷ್ಯನ್ ಸೆಂಚುರಿ” ಜಾಗತಿಕ ಸಂಸ್ಕೃತಿ, ರಾಜಕೀಯ, ಆರ್ಥಿಕತೆ ಮತ್ತು ಕಲೆಯ ಮೇಲೆ ಏಷ್ಯಾದ ಆಳವಾದ ಪ್ರಭಾವವನ್ನು ಎತ್ತಿ ತೋರಿಸುತ್ತದೆ, ಸಾಹಿತ್ಯ ಉತ್ಸಾಹಿಗಳು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ರಾಜತಾಂತ್ರಿಕರು ಮತ್ತು ಸಾಂಸ್ಕೃತಿಕ ಅಭಿಜ್ಞರು ಅರ್ಥಪೂರ್ಣ ಸಂಭಾಷಣೆಗಳು ಮತ್ತು ತಲ್ಲೀನಗೊಳಿಸುವ ಅನುಭವಗಳಲ್ಲಿ ತೊಡಗಿಸಿಕೊಳ್ಳಲು ಅಸಾಧಾರಣ ವೇದಿಕೆಯನ್ನು ಕಲ್ಪಿಸಿದೆ ಎಂದು ಸಂಘಟಕರು ತಿಳಿಸಿದ್ದಾರೆ.ಈ ಉತ್ಸವವು 25 ಕ್ಕೂ ಹೆಚ್ಚು ದೇಶಗಳ ಸಾಹಿತ್ಯ ಸೇರಿದಂತೆ 120 ಕ್ಕೂ ಹೆಚ್ಚು ಭಾಷಣಕಾರರನ್ನು ಒಳಗೊಂಡ ಅಸಾಧಾರಣ ಶ್ರೇಣಿಯನ್ನು ಭರವಸೆ ನೀಡುತ್ತದೆ. ಪ್ರಸಿದ್ಧ ಭಾರತೀಯ ಚಿತ್ರಕಥೆಗಾರ ಮತ್ತು ಗೀತರಚನೆಕಾರ ಜಾವೇದ್ ಅಖ್ತರ್; ಪ್ರಸಿದ್ಧ ಜಪಾನಿನ ಲೇಖಕ ಅಸಕೊ ಯುಜುಕಿ, ಏಷ್ಯನ್ ಶತಮಾನದ ಭಾರತದ ಧ್ವನಿ ಪಾಲ್ಕಿ ಶರ್ಮ...
ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಡ್ಡಿ; ಟೆಂಟ್ ಕಿತ್ತುಹಾಕಿಸಿದ ಸರ್ಕಾರದ ವಿರುದ್ಧ ಆಕ್ರೋಶ

ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಡ್ಡಿ; ಟೆಂಟ್ ಕಿತ್ತುಹಾಕಿಸಿದ ಸರ್ಕಾರದ ವಿರುದ್ಧ ಆಕ್ರೋಶ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜಧಾನಿಯ ಫ್ರೀಡಂ ಪಾರ್ಕ್ ನಲ್ಲಿ ಅಂಗನವಾಡಿ ಕಾರ್ಯರ್ತೆಯರ ಹೋರಾಟಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯರ್ತೆಯರ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರ ಅಟ್ಟಹಾಸ ಮೆರೆದಿದ್ದು, ಪೊಲೀಸರ ಮೂಲಕ ಟೆಂಟ್ ಕಿತ್ತುಹಾಕಿಸಿ ಬಲವಂತವಾಗಿ ಪ್ರತಿಭಟನೆ ಅಂತ್ಯಗೊಳಿಸುವ ಮೂಲಕ ಹಿಟ್ಲರ್ ಧೋರಣೆ ತೋರಿದೆ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ಚುನಾವಣೆ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಕೊಟ್ಟ ಆಶ್ವಾಸನೆ ಈಡೇರಿಸುವುದಕ್ಕಂತೂ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ನಾಲ್ಕು ದಿನದಿಂದ ಅಹೋರಾತ್ರಿ ಪ್ರತಿಭಟನೆ ಮಾಡುತ್ತಿರುವ ಮಹಿಳೆಯರ ಬಳಿ ಹೋಗಿ ಕನಿಷ್ಠ ಪಕ್ಷ ಅವರನ್ನ ಸಮಾಧಾನ ಪಡಿಸುವ ಸೌಜನ್ಯವೂ ನಿಮ್ಮ ಸರ್ಕಾರಕ್ಕೆ ಇಲ್ಲ. ಈಗ ಅವರ ಶಾಂತಿಯುತ ಪ್ರತಿಭಟನೆಗೂ ಅಡ್ಡಿಪಡಿಸುವುದು ಯಾವ ...
ಮುಡಾ ಪ್ರಕರಣ: ಇಡೀ ವರದಿ ರಾಜಕೀಯ ಪ್ರೇರಿತ ಎಂದ ಸಿಎಂ

ಮುಡಾ ಪ್ರಕರಣ: ಇಡೀ ವರದಿ ರಾಜಕೀಯ ಪ್ರೇರಿತ ಎಂದ ಸಿಎಂ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವರದಿ ರಾಜಕೀಯ ಪ್ರೇರಿತವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣದ ಅಕ್ರಮ ವರ್ಗಾವಣೆ ಆಗಿರುವ ಬಗ್ಗೆ ಯಾವುದೇ ಸಾಕ್ಷಿಯಿಲ್ಲ. ಮುಡಾದ ಮಾಜಿ ಆಯುಕ್ತ ನಟೇಶ್ ಅವರ ಮೇಲೆ ಇಡಿ ಯವರ ಕ್ರಮ ಕಾನೂನು ಬಾಹಿರ ಮತ್ತು ಮನಿಲ್ಯಾಂಡ್ರಿಂಗ್ ಅಗಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಡಿ ಯ ಸಂಪೂರ್ಣ ವರದಿಯನ್ನು ಮಾಧ್ಯಮದಲ್ಲಿ ಬಿಡುಗಡೆ ಮಾಡುವ ಮೂಲಕ ಸಂಪೂರ್ಣ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ರಾಜಕೀಯಗೊಳಿಸಿದ್ದಾರೆ. ಸರ್ಕಾರ ಹಾಗೂ ಮುಖ್ಯಮಂತ್ರಿ ಹುದ್ದೆಯ ವರ್ಚಸ್ಸಿಗೆ ಕುಂದು ತರುವಂತಹ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಕಾರಣದಿಂದ ನನ್ನ ತೇಜೋವಧೆ ಮಾಡಲಾಗುತ್ತಿದೆ. ನನ್ನ ಶ್ರೀಮತಿಯವರಿಗೆ ಇಡಿ ಯವರ ನೋಟೀಸ್ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತರಲಾಗಿದೆ. ನನ್ನ ವರ್ಚಸ್ಸಿಗೆ ಭಂಗ ತರಬೇಕೇಂಬ ದುರುದ್ದೇಶದಿಂದ, ಇಂತಹ ಕುಕೃತ್ಯಗಳನ್ನು ಮಾಡಲಾಗುತ್ತಿದೆ. ಆದರೆ ಅವರ ಪ್ರಯತ್ನಗಳು ಸಫಲವಾಗಲು...