Tuesday, August 11

ವಿದೇಶ

ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಬೆಂಗಳೂರಿನ BGS ಆಸ್ಪತ್ರೆಗೆ ನಟ ದರ್ಶನ್ ದಾಖಲು

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ಸಿನಿಮಾ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರು ಬೆನ್ನು ನೋವಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್​ ಗ್ಲೋಬಲ್ ಆಸ್ಪತ್ರೆಗೆ ದರ್ಶನ್ ಅವರು ಶನಿವಾರ ದಾಖಲಾಗಿದ್ದಾರೆ.ದರ್ಶನ್ ಆಗಮನ ಹಿನಯ ಆಸ್ಪತ್ರೆಗೆ ಬಳಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ಕಾರಣದಿಂದಾಗಿ ಆಸ್ಪತ್ರೆ ಬಳಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ....
‘ವಕ್ಫ್ ರಾಷ್ಟ್ರೀಕರಣವಾಗಲಿ’; ಸಂಚಲನ ಸೃಷ್ಟಿಸಿದ ಯತ್ನಾಳ್ ಪತ್ರ..!

‘ವಕ್ಫ್ ರಾಷ್ಟ್ರೀಕರಣವಾಗಲಿ’; ಸಂಚಲನ ಸೃಷ್ಟಿಸಿದ ಯತ್ನಾಳ್ ಪತ್ರ..!

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರೈತರ ಜಮೀನು ವಕ್ಫ್ ಆಸ್ತಿ ಎಂಬಂತೆ ಬಿಂಬಿತವಾಗುತ್ತಿರುವ ಬೆಳವಣಿಗೆ ಬಗ್ಗೆ ಬಿಜೆಪಿ ನಾಯಕ ಮಾಜಿ ಕೇಂದ್ರ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಅವರು ಪ್ರಧಾನಿಗೆ ಬರೆದಿರುವ ಪತ್ರ ಗಮನಸೆಳೆದಿದೆ.ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸುವ ಅಗತ್ಯವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದಲ್ಲಿ ಪ್ರತಿಪಾದಿಸಿದ್ದಾರೆ."ದೇಶದಾದ್ಯಂತ ರೈತರ, ದೇವಸ್ಥಾನಗಳ, ಟ್ರಸ್ಟ್‌ಗಳ ಮತ್ತು ಮಠಗಳ ಜಮೀನುಗಳ ಮೇಲೆ ವಕ್ಫ್ ಮಂಡಳಿಯು ಹಕ್ಕು ಸಾಧಿಸುತ್ತಿರುವುದು ವಿಷಾದದ ಸಂಗತಿ. ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸಿ ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಬೇಕು" -ಯತ್ನಾಳ್ ಆಗ್ರಹ.Karnataka BJP MLA Basanagouda R Patil writes a letter to PM Narendra Modi "I humbly request your esteemed office to consider nationalizing Waqf properties to ensure fair administration and to prevent further injustices. The Waqf Bo...
ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ

ಆಂಗ್ಲರ ನಾಡಲ್ಲೂ ಕರುನಾಡ ವೈಭವ; ‘ಕನ್ನಡ ಡಿಂಡಿಮ’ಕ್ಕೆ ಸಾಕ್ಷಿಯಾದ ಲಂಡನ್ ಮಂದಿ

ದೇಶ, ಪ್ರಮುಖ ಸುದ್ದಿ, ರಾಜ್ಯ, ವಿದೇಶ
📝 ಡಾ.ನೀರಜ್ ಪಾಟೀಲ್, ಯುನೈಟೆಡ್ ಕಿಂಗ್‌ಡಮ್ಸಾಗರೋತ್ತರ ರಾಷ್ಟ್ರ, ಆಂಗ್ಲರ ನಾಡಿನಲ್ಲೂ ಕನ್ನಡದ ಕಂಪು ಆವರಿಸಿದೆ. ಲಂಡನ್‌ಗೂ ಕರುನಾಡಿನ ಆರಾಧ್ಯ ದೈವ ವಿಶ್ವಗುರು ಬಸವೇಶ್ವರರನ್ನು ಕೊಂಡೊಯ್ದಿರುವ ಕನ್ನಡಿಗರು, ಇದೀಗ ಕನ್ನಡ ರಾಜ್ಯೋತ್ಸವವನ್ನೂ ನಾಡಭಕ್ತಿಯ ವೈಭವದೊಂದಿಗೆ ಆಚರಿಸಿದ್ದಾರೆ.ಕನ್ನಡ ರಾಜೋತ್ಸವದ ಮುನ್ನಾದಿನದಂದು, ಲಂಡನ್‌ನಲ್ಲಿರುವ ಕನ್ನಡಿಗರು ಕರುನಾಡಿನ ಶ್ರೀಮಂತ ಪರಂಪರೆ, ಭಾಷೆ ಮತ್ತು ಸಂಸ್ಕೃತಿ ವೈಭವದ ಪ್ರತೀಕವಾಗಿ ಆಚರಿಸಿದರು. ಪ್ರತೀ ವರ್ಷ ನವೆಂಬರ್ 1 ರಂದು ಲಂಡನ್‌ನಲ್ಲೂ ಅನಿವಾಸಿ ಕನ್ನಡಿಗರು ಕನ್ನಡ ರಾಜೋತ್ಸವ ಆಚರಿಸಿ ಕರ್ನಾಟಕ ರಚನೆಯನ್ನು ಸ್ಮರಿಸುತ್ತಾರೆ. ಇದು ವಿಶ್ವಾದ್ಯಂತ ಕನ್ನಡಿಗರಿಗೆ ಹೆಮ್ಮೆ ಮತ್ತು ಏಕತೆಯ ದಿನವಾಗಿದೆ. ಈ ಸಂದರ್ಭವು ಕರ್ನಾಟಕ ಮತ್ತು ಭಾರತವನ್ನು ತಮ್ಮ ಮನೆ ಎಂದು ಕರೆಯುವ ಪ್ರತಿಯೊಬ್ಬರ ಏಕತೆ, ಹೆಮ್ಮೆ ಮತ್ತು ಹಂಚಿಕೆಯ ಹೆಗ್ಗುರುತನ್ನು ಪ್ರತಿನಿಧಿಸುತ್ತದೆ.ಕರ್ನಾಟಕದ ವೈವಿಧ್ಯಮಯ ಸಂಪ್ರದಾಯಗಳು, ಕಲಾ ಪ್ರಕಾರಗಳು ಮತ್ತು ಭಾಷಾ ಪರಂಪರೆಗೆ ಗೌರವವಾಗಿ, ನಾವು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಮತ್ತು ಉತ್...
69ನೇ ಕನ್ನಡ ರಾಜ್ಯೋತ್ಸವ; ಅದ್ಧೂರಿ ವೈಭವ

69ನೇ ಕನ್ನಡ ರಾಜ್ಯೋತ್ಸವ; ಅದ್ಧೂರಿ ವೈಭವ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ 69 ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ನೆರವೇರಿಸಿ, ಶಾಲ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಮಾತನಾಡಿದರು.ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಪ್ರಾಥಮಿಕ ಶಾಲಾ ಮತ್ತು ಪ್ರೌಡ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಅವರು ಮುಖ್ಯ ಅತಿಥಿಗಳಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಿಜ್ವಾನ್ ಅರ್ಷದ್ ವಹಿಸಿದ್ದರು....
“ನಾನು ಧನ್ಯ”; ವೈದ್ಯೆ ಜೊತೆ ಡಾಲಿ ಮದುವೆ..! ಮನಮೋಹಕ ವೀಡಿಯೋ.. ಸುಂದರ ಸಾಲು..

“ನಾನು ಧನ್ಯ”; ವೈದ್ಯೆ ಜೊತೆ ಡಾಲಿ ಮದುವೆ..! ಮನಮೋಹಕ ವೀಡಿಯೋ.. ಸುಂದರ ಸಾಲು..

ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವೀಡಿಯೊ, ಸಿನಿಮಾ
ನಟ ಡಾಲಿ ಧನಂಜಯ್ ಅವರು ವೈದ್ಯೆಯನ್ನು ವಿವಾಹವಾಗಲಿದ್ದಾರೆ. ತಾವು ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಎಂಬವರೊಂದಿಗೆ ವಿವಾಹವಾಗುವ ಮಾಹಿತಿಯನ್ನು ಧನಂಜಯ್ ಹಂಚಿಕೊಂಡಿದ್ದಾರೆ.ಪ್ರೀತಿಯ ಕರುನಾಡಿಗೆ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯ ಕೋರಿ ಪೋಸ್ಟ್ ಹಾಕಿರುವ ಧನಂಜಯ್, 'ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ' ಎಂದು ಕೋರಿದ್ದಾರೆ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗೋಕು ಎಂದೂ ಬರೆದುಕೊಂಡಿದ್ದಾರೆ.ಸ್ತ್ರೀರೋಗ ತಜ್ಞೆಯಾಗಿರುವ ಧನ್ಯತಾ ಜೊತೆ ಡಾಲಿ ಧನಂಜಯ ಅವರು ಅನೇಕ ವರ್ಷಗಳ ಪರಿಚಯ ಹೊಂದಿದ್ದರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಇದೀಗ ವಿವಾಹವಾಗಲು ನಿರ್ಧರಿಸಿದ್ದಾರೆ. View this post on Instagram  A post shared by Daali Dhana...
ಎಚ್ಎಂಟಿಗೆ ಜಾಗ ನೀಡಿದ್ದೇ ಕಾಂಗ್ರೆಸ್; ಅಶೋಕ್

ಎಚ್ಎಂಟಿಗೆ ಜಾಗ ನೀಡಿದ್ದೇ ಕಾಂಗ್ರೆಸ್; ಅಶೋಕ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಎಚ್ಎಂಟಿಗೆ ಜಾಗ ನೀಡಿದ್ದೇ ಕಾಂಗ್ರೆಸ್‌ ಸರ್ಕಾರ. ಹಾಗಿರುವಾಗ ಅದು ಅರಣ್ಯ ಭೂಮಿಯಾಗಲು ಹೇಗೆ ಸಾಧ್ಯ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬದಿಂದ 65 ಎಕರೆ ಜಾಗವನ್ನು ಎಚ್ಎಂಟಿಗೆ ನೀಡಿದ್ದೆವು. ಈಗ ಆ ಜಾಗದಲ್ಲಿ ಅರಣ್ಯ ನಾಶವಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಇದು ಅರಣ್ಯ ಭೂಮಿ ಎನ್ನುವುದಾದರೆ, ಇದನ್ನು ನೀಡಿದ್ದೇ ಕಾಂಗ್ರೆಸ್ ಸರ್ಕಾರ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.ಎಚ್ಎಂಟಿ ಕಾರ್ಖಾನೆಯನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರು ಉದ್ಘಾಟಿಸಿದ್ದರು‌. ಅವರೇ ಜಾಗ ನೀಡಿ, ಈಗ ಅದು ಅರಣ್ಯ ಭೂಮಿ ಎಂದು ಹೇಳುತ್ತಿದ್ದಾರೆ. ನಾನು ಒಂದನೇ ತರಗತಿಯಲ್ಲಿ ಇದ್ದಾಗಲೂ ಅದು ಎಚ್ಎಂಟಿಗೆ ಸೇರಿತ್ತು. ಈಗ ಇವರು ಮಾಜಿ ಪ್ರಧಾನಿ ನೆಹರು ವಿರುದ್ಧ ಪ್ರಕರಣ ದಾಖಲಿಸುತ್ತಾರಾ? ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ವಿರುದ್ಧ ಕೇಸು ದಾಖಲಿಸುತ್ತಾರಾ? ಎಂದು ಅಶೋಕ್ ಪ್ರಶ್ನಿಸಿದರು.ಎಚ್.ಡಿ.ಕುಮಾರಸ್ವಾಮಿ ಅವರನ್ನ...
ವಕ್ಫ್ ಜಮೀನು ವಿವಾದ: ನವೆಂಬರ್ 4 ರಿಂದ ಬಿಜೆಪಿ 

ವಕ್ಫ್ ಜಮೀನು ವಿವಾದ: ನವೆಂಬರ್ 4 ರಿಂದ ಬಿಜೆಪಿ 

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರೈತರ ಜಮೀನು, ದೇವಸ್ಥಾನಗಳ ಆಸ್ತಿಗಳನ್ನು ಕಬಳಿಸುತ್ತಿರುವ ವಕ್ಫ್ ಮಂಡಳಿ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನವೆಂಬರ್ 4 ರಿಂದ ತೀವ್ರ ಹೋರಾಟ ಆರಂಭಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಬಳಿಕ ಕೋಲಾರದಲ್ಲಿ ದೇವಸ್ಥಾನದ ಆಸ್ತಿಗಳನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ನಮೂದಿಸಲಾಗಿದೆ. ನಾಗಮಂಗಲ, ಚನ್ನಪಟ್ಟಣ, ಬೆಳಗಾವಿ ಮೊದಲಾದ ಕಡೆಗಳಲ್ಲಿ ರೈತರ ಜಮೀನುಗಳನ್ನು ಕೊಳ್ಳೆ ಹೊಡೆಯಲು ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ಆರಂಭಿಸಿದೆ ಎಂದು ತಿಳಿಸಿದರು.ಭೂಗಳ್ಳರು ಮಾತ್ರವಲ್ಲದೆ, ಸರ್ಕಾರವೇ ಅಧಿಕೃತವಾಗಿ ಒತ್ತುವರಿ ಆರಂಭ ಮಾಡಿದೆ. ಇದರ ವಿರುದ್ಧ ರೈತ ಸಂಘಟನೆಗಳು ತೀವ್ರವಾಗಿ ಪ್ರತಿಭಟಿಸಬೇಕು. ಹಿಂದೆ ಮುಸ್ಲಿಂ ರಾಜರು ದಾಳಿ ಮಾಡಿ, ಮತಾಂಧತೆ ಮೆರೆದಿದ್ದರು. ಟಿಪ್ಪು ಸುಲ್ತಾನ ಕೊಡಗಿನಲ್ಲಿ ಮತಾಂತರ ಮಾಡಿರುವುದು ಇದಕ್ಕೆ ಸಾಕ್ಷಿ. ಇದೇ ರೀತಿ ಈಗ ಜಮೀನಿನ ಕಬಳಿಕೆ ನಡೆಯುತ್ತಿದೆ. ಇಂತಹವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಓಲೈಸುತ್ತಿದ್ದಾರೆ ಎಂದು ದೂರ...
ಡಿಕೆಶಿ ಚನ್ನಪಟ್ಟಣದ ಮನೆ ಮಗನಾದರೆ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತುಕೊಳ್ಳಲಿ:  ಆರ್‌.ಅಶೋಕ

ಡಿಕೆಶಿ ಚನ್ನಪಟ್ಟಣದ ಮನೆ ಮಗನಾದರೆ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತುಕೊಳ್ಳಲಿ:  ಆರ್‌.ಅಶೋಕ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಚನ್ನಪಟ್ಟಣ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಚನ್ನಪಟ್ಟಣದ ಮನೆ ಮಗ ಎನ್ನುವುದಾದರೆ ಇಲ್ಲಿನ ಜಿಲ್ಲಾ ಉಸ್ತುವಾರಿಯ ಹೊಣೆ ಹೊತ್ತುಕೊಳ್ಳಲಿ. ಚುನಾವಣೆ ಬಂದಾಗ ನಾಟಕ ಮಾಡಲು ಮಾತ್ರ ಈ ರೀತಿಯ ಭಾವನಾತ್ಮಕ ಮಾತು ಆಡುತ್ತಾರೆ ಎಂದು ಪ್ರತಿಪಕ್ಷ ಆರ್‌.ಅಶೋಕ ಟೀಕಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್‌ ಕುಮಾರಸ್ವಾಮಿ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಎರಡೂ ಪಕ್ಷ ಇರುವುದರಿಂದ ಗೆಲುವು ಸಮೀಪದಲ್ಲಿದೆ. ಎಚ್‌.ಡಿ.ಕುಮಾರಸ್ವಾಮಿ ಅವರು ಈ ಹಿಂದೆ 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದರು. ಈ ಬಾರಿ ಬಿಜೆಪಿಯ ಸಾಂಪ್ರದಾಯಿಕ ಮತಗಳೂ ಸಿಗುವುದರಿಂದ ಗೆಲ್ಲುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ, ಮುಡಾ ಹಗರಣ, ದಲಿತರ ಹಣವನ್ನು ಬೇರೆಡೆ ವರ್ಗಾಯಿಸಿರುವುದು ಮೊದಲಾದ ಕಾರಣಗಳಿಂದ ಜನರಿಗೆ ಕಾಂಗ್ರೆಸ್‌ ಮೇಲೆ ವಿಶ್ವಾಸವಿಲ್ಲ ಎಂದರು.ಈ 16 ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚನ್ನಪಟ್ಟಣಕ್ಕಾಗಲೀ, ರಾಮನಗರಕ್ಕಾಗಲೀ ಭೇಟಿ ನೀಡಿಲ್ಲ. ಭೇಟಿ ನೀಡಲು ಕೂಡ ಸಮಯವಿಲ್ಲವೆಂದಾದರೆ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಡಿಸ...
ಒಳ ಮೀಸಲಾತಿ ಹೆಸರಲ್ಲಿ‌ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಂಬಲಿಗರ ತಯಾರಿ

ಒಳ ಮೀಸಲಾತಿ ಹೆಸರಲ್ಲಿ‌ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಂಬಲಿಗರ ತಯಾರಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಒಳ ಮೀಸಲಾತಿ ಹೆಸರಲ್ಲಿ‌ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಬೆಂಬಲಿಗರಿಂದ ತಯಾರಿ ನಡೆದಿದೆ. ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಸಮಾರಂಭ ನಡೆಸಲಾಗುವುದು ಎಂದು ಮಾಜಿ ಸಚಿವ ಎಚ್ ಆಂಜನೇಯ ತಿಳಿಸಿದ್ದಾರೆ.ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಜಾರಿಗೆ ಸಿದ್ದರಾಮಯ್ಯ ಅವರ ಸರ್ಕಾರ ಮುಂದಾಗಿದೆ. ಶೋಷಿತರ ಪರವಾಗಿ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಏಕೆ ಸದಸ್ಯ ಆಯೋಗವನ್ನು ಈಗ ರಚನೆ ಮಾಡಿದ್ದು. ಈ ಆಯೋಗವು ಮೂರು ತಿಂಗಳಲ್ಲಿ ವರದಿಯನ್ನು ನೀಡಬೇಕು. ನಾಲ್ಕನೇ ತಿಂಗಳಲ್ಲಿ ಇದು ಅನುಷ್ಠಾನಕ್ಕೆ ಬರಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.ಬಡವರ, ಶೋಷಿತರ, ತುಳಿತಕ್ಕೆ ಒಳಗಾದವರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ಹರಿಕಾರರು. ಒಳ ಮೀಸಲಾತಿ ವಿಚಾರ ನಿರ್ಧಾರವಾಗುವ ತನಕ, ಹೊಸದಾಗಿ ನೇಮಕಾತಿ ಆದೇಶ ಹೊರಡಿಸಬಾರದು ಎಂದು ಹೇಳಿದ್ದಾರೆ ಎಂದು ತಿಳಿಸಿದರು.ಒಳ ಮೀಸಲಾತಿ ಪರವಾಗಿ ನಿಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ, ಉಪಚುನಾವಣೆಯ ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ಮಾಡಿ ಅಭಿನಂ...
KSRTCಯಲ್ಲಿ ಪ್ರಯಾಣ ಮತ್ತಷ್ಟು ಅಹ್ಲಾದಕರ.. ‘ಐರಾವತ ಕ್ಲಬ್‌ ಕ್ಲಾಸ್‌ 2.0’ ವೋಲ್ವೋ ಬಸ್ಸುಗಳಿಗೆ ಚಾಲನೆ

KSRTCಯಲ್ಲಿ ಪ್ರಯಾಣ ಮತ್ತಷ್ಟು ಅಹ್ಲಾದಕರ.. ‘ಐರಾವತ ಕ್ಲಬ್‌ ಕ್ಲಾಸ್‌ 2.0’ ವೋಲ್ವೋ ಬಸ್ಸುಗಳಿಗೆ ಚಾಲನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು. ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಕ್ಕೆ ಆಧುನಿಕ ಸ್ಪರ್ಷ ಸಿಕ್ಕಿದೆ. ನಿಗಮದ 'ಐರಾವತ ಕ್ಲಬ್‌ ಕ್ಲಾಸ್‌ 2.0' ವೋಲ್ವೋ ಬಸ್ಸುಗಳಿಗೆ ಚಾಲನೆ ನೋಡಲಾಯಿತು.ವಿಧಾನಸೌಧದ ಗ್ರ್ಯಾಂಡ್‌ ಸ್ಟೆಪ್ಸ್‌ ಮುಂಭಾಗದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಸಾರ್ಟಿಸಿ ಅಧ್ಯಕ್ಷ ಎಸ್.‌ ಆರ್.‌ ಶ್ರೀನಿವಾಸ್‌ (ವಾಸು) ಹಾಗೂ ಉಪಾಧ್ಯಕ್ಷ ಮೊಹಮ್ಮದ್‌ ರಿಜ್ವಾನ್‌ ನವಾಬ್‌ ಉಪಸ್ಥಿತಿಯಲ್ಲಿ, ನೂತನ ಬಸ್ಸುಗಳನ್ನು ಸೇವೆಗೆ ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅಪಘಾತಕ್ಕೆ ಒಳಪಟ್ಟು ಮೃತರಾದ 2 ಸಿಬ್ಬಂದಿಗಳ ಅವಲಂಭಿತರಿಗೆ ಸಾರಿಗೆ ಸುರಕ್ಷಾ ಪರಿಹಾರ ವಿಮಾ ಯೋಜನಡಿ ತಲಾ ರೂ.1 ಕೋಟಿ ಪರಿಹಾರ ಚೆಕ್‌ನ್ನು ಹಾಗೂ ಅಪಘಾತ ಹೊರತುಪಡಿಸಿ ಖಾಯಿಲೆ ಇತ್ಯಾದಿ ಕಾರಣಗಳಿಂದ ಮೃತರಾದ 5 ಸಿಬ್ಬಂದಿಗಳ ಅವಲಂಭಿತರಿಗೆ ಕುಟುಂಬ ಕಲ್ಯಾಣ ಯೋಜನೆ ಅಡಿ ತಲಾ ರೂ.10 ಲಕ್ಷಗಳ ಪರಿಹಾರ ಚೆಕ್‌ನ್ನು ವಿತರಿಸಲಾಯಿತು. ಖಾಸಗಿ ...