ಡ್ರೋನ್ ಮುಖಾಂತರ ಜಾಗದ ಅಳತೆ ನಡೆಸಿ ಪಿ.ಆರ್.ಕಾರ್ಡ್ ವಿತರಣೆ; ಶಾಸಕ ಎಂಆರ್ ಮಂಜುನಾಥ್
ಹನೂರು: ತಾಲೂಕಿನ ಅಜ್ಜಿಪುರ ಗ್ರಾಮ ಪಂಚಾಯಿತಿಯಲ್ಲಿ ಸ್ವಾಮಿತ್ವ ಯೋಜನೆಯ ಗ್ರಾಮ ಸಭೆಯನ್ನು ಶಾಸಕ ಎಂಆರ್ ಮಂಜುನಾಥ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.ಈ ವೇಳೆ ಶಾಸಕ ಎಂ ಆರ್ ಮಂಜುನಾಥ್ ರವರು ಮಾತನಾಡಿ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಇ ಸ್ವತ್ತುಗಳ ಸಮಸ್ಯೆಗಳನ್ನು ಬಗೆಹರಿಸಲು ವಸತಿ ಪ್ರದೇಶಗಳಿಗೆ ಡ್ರೋನ್ ಅಥವಾ ಯುಎ ವಿ ತಂತ್ರಜ್ಞಾನದ ಮೂಲಕ ಸರ್ವೇ ನಡೆಸಿ ಡ್ರೋನ್ ಮುಖಾಂತರ ನಿಮ್ಮ ಜಾಗದ ಅಳತೆಯನ್ನು ನಡೆಸಿ ನಿಮಗೆ ಪಿ ಆರ್ ಕಾರ್ಡುಗಳನ್ನು ವಿತರಣೆ ಮಾಡಲಾಗುತ್ತದೆ. ಇದನ್ನು ಜನರು ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.ಡಿ ಡಿ ಎಲ್ ಆರ್ ವಿದ್ಯಾರಾಣಿ ಮಾತನಾಡಿ ಕಳೆದ 50 ವರ್ಷಗಳ ಹಿಂದೆ ಕಂದಾಯ ಕಟ್ಟಿರುವ ಜಮೀನುಗಳಿಗೆ ಮಾತ್ರ ಸರ್ವೆ ಮಾಡಲಾಗಿತ್ತು, ಗ್ರಾಮ ಗ್ರಾಮ ಠಾಣ ವಿಭಾಗಗಳಲ್ಲಿ ನಿಖರವಾದ ಯಾವುದೇ ದಾಖಲಾತಿಗಳು ಸಹ ಲಭ್ಯವಿರುವುದಿಲ್ಲ ಆದ್ದರಿಂದ ಡ್ರೋನ್ ಮುಖಾಂತರ ನಿಮ್ಮ ಜಾಗ ಹಾಗೂ ಜಮೀನುಗಳನ್ನು ಸರ್ವೆ ಮಾಡಿ ಸರ್ವೆ ಇಲಾಖೆ ಗ್ರಾಮ ಪಂಚಾಯಿತಿ ಹಾಗೂ ಜಾಗದ ಮಾಲೀಕರೊಂದಿಗೆ ಚರ್ಚೆ ಮಾಡಿ ಪಿಆರ್...






