Thursday, August 6

ವಿದೇಶ

ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ; ಸರಣಿ ಅವಘಡಗಳ ಆತಂಕ

ಜಪಾನ್‌ನಲ್ಲಿ 7.2 ತೀವ್ರತೆಯ ಭೂಕಂಪ; ಸರಣಿ ಅವಘಡಗಳ ಆತಂಕ

ಪ್ರಮುಖ ಸುದ್ದಿ, ವಿದೇಶ
ಟೋಕಿಯೊ: ಈಶಾನ್ಯ ಜಪಾನ್‌ನಲ್ಲಿ ಗುರುವಾರ ಬೆಳಿಗ್ಗೆ 7.2 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಭೂಕಂಪವು ಇವಾಟೆ ಪ್ರಾಂತ್ಯದ ಪೂರ್ವ ಕರಾವಳಿಯಲ್ಲಿ ಸುಮಾರು 40 ಕಿ.ಮೀ ಆಳದಲ್ಲಿ ಸಂಭವಿಸಿದೆ. ಆರಂಭದಲ್ಲಿ 6.9 ತೀವ್ರತೆ ಎಂದು ಅಂದಾಜಿಸಲಾಗಿದ್ದ ಭೂಕಂಪವನ್ನು ಬಳಿಕ 7.2ಕ್ಕೆ ಪರಿಷ್ಕರಿಸಲಾಗಿದೆ. ಅಮೋರಿ ಪ್ರಾಂತ್ಯದ ಹಶಿಕಾಮಿ ಮತ್ತು ಹಚಿನೋಹೆ ಪ್ರದೇಶಗಳಲ್ಲಿ ತೀವ್ರ ಕಂಪನ ಅನುಭವವಾಗಿದೆ. ಹೊಕ್ಕೈಡೊ, ಅಕಿತಾ, ಫುಕುಶಿಮಾ, ಮಿಯಾಗಿ, ಯಮಗಾಟಾ ಸೇರಿದಂತೆ ಹಲವು ಪ್ರದೇಶಗಳಲ್ಲೂ ಭೂಕಂಪದ ಪರಿಣಾಮ ಕಂಡುಬಂದಿದೆ. ಆದರೆ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಮುಂದಿನ ದಿನಗಳಲ್ಲಿ ಇದೇ ರೀತಿಯ ಕಂಪನಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ಜನರು ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚಿಸಿದ್ದಾರೆ.ಅಮೋರಿ, ಮಿಯಾಗಿ ಹಾಗೂ ಫುಕುಶಿಮಾ ಪ್ರದೇಶಗಳಲ್ಲಿರುವ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ವೆನೆಜುವೆಲಾದಲ್ಲೂ ಎರಡು ಪ್ರಬಲ ಭೂಕಂಪಗಳು ಸಂಭ...
ವೆನೆಜುವೆಲಾದಲ್ಲಿ ಸರಣಿ ಭೂಕಂಪ; ಕಟ್ಟಡಗಳು ನೆಲಸಮ, ಭಾರೀ ಹಾನಿ

ವೆನೆಜುವೆಲಾದಲ್ಲಿ ಸರಣಿ ಭೂಕಂಪ; ಕಟ್ಟಡಗಳು ನೆಲಸಮ, ಭಾರೀ ಹಾನಿ

ಪ್ರಮುಖ ಸುದ್ದಿ, ವಿದೇಶ
ಕ್ಯಾರಕಾಸ್: ದಕ್ಷಿಣ ಅಮೆರಿಕಾದ ರಾಷ್ಟ್ರ ವೆನೆಜುವೆಲಾದಲ್ಲಿ ಎರಡು ಪ್ರಬಲ ಭೂಕಂಪಗಳು ಸಂಭವಿಸಿ ವ್ಯಾಪಕ ಹಾನಿ ಉಂಟಾದ ಹಿನ್ನೆಲೆಯಲ್ಲಿ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಪ್ರಕಾರ, ಬುಧವಾರ ರಾತ್ರಿ ಮೊದಲಿಗೆ 7.1 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕೇವಲ ಒಂದು ನಿಮಿಷದ ಅಂತರದಲ್ಲಿ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ದಾಖಲಾಗಿದೆ. ಎರಡೂ ಭೂಕಂಪಗಳ ಕೇಂದ್ರಬಿಂದು ಕ್ಯಾರಕಾಸ್‌ನ ಪಶ್ಚಿಮಕ್ಕೆ ಸುಮಾರು 160 ಕಿಲೋಮೀಟರ್ ದೂರದಲ್ಲಿರುವ ಮೊರೊನ್ ಕರಾವಳಿ ಪಟ್ಟಣದ ಸಮೀಪ ಇತ್ತು.ಭೂಕಂಪಗಳ ಪರಿಣಾಮವಾಗಿ ರಾಜಧಾನಿ ಕ್ಯಾರಕಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಕೆಲವು ಕಟ್ಟಡಗಳು ಕುಸಿದಿರುವ ವರದಿಗಳು ಬಂದಿದ್ದು, ಭೂಕಂಪದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.Massive 7.2 and 7.5 magnitude earthquakes hits Venezuela💀#Venezuela #Earthquake pic.twitter.com/TE7QVTgnmB — God (@Indic_God) June 25, 2026 ಭೂಕಂಪಗಳು ಕೇವಲ 10 ಕಿಲೋಮೀ...
ಇರಾನ್ ವಿರುದ್ಧದ ಸಂಘರ್ಷ: ಟ್ರಂಪ್ ಆಡಳಿತಕ್ಕೆ ಸೆನೆಟ್‌ನಿಂದಲೇ ಆಘಾತ

ಇರಾನ್ ವಿರುದ್ಧದ ಸಂಘರ್ಷ: ಟ್ರಂಪ್ ಆಡಳಿತಕ್ಕೆ ಸೆನೆಟ್‌ನಿಂದಲೇ ಆಘಾತ

ಪ್ರಮುಖ ಸುದ್ದಿ, ವಿದೇಶ
ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷವನ್ನು ಮುಂದುವರೆಸದಂತೆ ತಡೆಯುವ ಮಹತ್ವದ ನಿರ್ಣಯವೊಂದನ್ನು ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ ಅಂಗೀಕರಿಸಿದೆ. ಈ ನಿರ್ಣಯವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ. ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ ಪಕ್ಷವೇ ಸೆನೆಟ್‌ನಲ್ಲಿ ಬಹುಮತ ಹೊಂದಿದ್ದರೂ, ಅವರದೇ ಪಕ್ಷದ ನಾಲ್ವರು ಸೆನೆಟರ್‌ಗಳು ನಿರ್ಣಯಕ್ಕೆ ಬೆಂಬಲ ನೀಡಿ ಟ್ರಂಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದ ಇರಾನ್ ಜತೆಗಿನ ಯುದ್ಧದ ವಿಚಾರದಲ್ಲಿ ಟ್ರಂಪ್‌ಗೆ ಅಸಹಜ ರಾಜಕೀಯ ಆಘಾತ ಎದುರಾಗಿದೆ. ಸೆನೆಟ್‌ನಲ್ಲಿ ಈ ನಿರ್ಣಯವು 50–48 ಮತಗಳ ಅಲ್ಪ ಅಂತರದಿಂದ ಅಂಗೀಕಾರಗೊಂಡಿದೆ. ಇದಕ್ಕೂ ಮೊದಲು ಅಮೆರಿಕದ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಇದು 215–208 ಮತಗಳಿಂದ ಪಾಸಾಗಿತ್ತು. ಆದರೆ, ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರವಾದರೂ, ಇದು ಕಾನೂನಾತ್ಮಕವಾಗಿ ಅಧ್ಯಕ್ಷರ ಯುದ್ಧಾಧಿಕಾರವನ್ನು ತಕ್ಷಣಕ್ಕೆ ನಿರ್ಬಂಧಿಸುವುದಿಲ್ಲ. ಪ್ರಸ್ತುತ ಇದು ಟ್ರಂಪ್ ಆಡಳಿತಕ್ಕೆ ರಾಜಕೀಯ ಮುಜುಗರ ಉಂಟುಮಾಡುವ ಕ್ರಮವಾಗಿಯೇ ಉಳಿಯಲಿದೆ ಎಂದು ರಾಜಕೀ...
ಇರಾನ್ ಮೇಲಿನ ಕೆಲವು ನಿರ್ಬಂಧ ಸಡಿಲಿಕೆ; ತೈಲ ರಫ್ತಿಗೆ ಅಮೆರಿಕ ಅವಕಾಶ

ಇರಾನ್ ಮೇಲಿನ ಕೆಲವು ನಿರ್ಬಂಧ ಸಡಿಲಿಕೆ; ತೈಲ ರಫ್ತಿಗೆ ಅಮೆರಿಕ ಅವಕಾಶ

ಪ್ರಮುಖ ಸುದ್ದಿ, ವಿದೇಶ
ವಾಷಿಂಗ್ಟನ್: ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆದ ಅಮೆರಿಕ–ಇರಾನ್ ಶಾಂತಿ ಮಾತುಕತೆಗಳ ಬಳಿಕ ಅಮೆರಿಕ ಇರಾನ್ ಮೇಲಿನ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಿಸಿದೆ. ಅಮೆರಿಕ ಖಜಾನೆ ಇಲಾಖೆ ಹೊರಡಿಸಿದ ಆದೇಶದಂತೆ, ಇರಾನಿನ ಕಚ್ಚಾ ತೈಲ, ಪೆಟ್ರೋಕೆಮಿಕಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉತ್ಪಾದನೆ, ಮಾರಾಟ ಹಾಗೂ ವಿತರಣೆಗೆ ಸಂಬಂಧಿಸಿದ ನಿರ್ಬಂಧಗಳಲ್ಲಿ ವಿನಾಯಿತಿ ನೀಡಲಾಗಿದೆ. ಈ ಕ್ರಮವು 2026ರ ಆಗಸ್ಟ್ 21ರವರೆಗೆ ಜಾರಿಯಲ್ಲಿರಲಿದೆ ಎಂದು ತಿಳಿಸಲಾಗಿದೆ. ಆದರೆ ಉತ್ತರ ಕೊರಿಯಾ ಮತ್ತು ಕ್ಯೂಬಾ ಸಂಬಂಧಿತ ಯಾವುದೇ ವಹಿವಾಟುಗಳಿಗೆ ಈ ಸಡಿಲಿಕೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ಹಾಗೂ ಕ್ಯೂಬಾದ ಮಾನವ ಹಕ್ಕುಗಳ ಉಲ್ಲಂಘನೆ ಕುರಿತ ಆತಂಕಗಳ ಹಿನ್ನೆಲೆಯಲ್ಲಿ ಆ ರಾಷ್ಟ್ರಗಳ ಮೇಲಿನ ನಿರ್ಬಂಧಗಳು ಮುಂದುವರಿಯಲಿವೆ.ಇನ್ನೊಂದೆಡೆ, ಎರಡು ದಿನಗಳ ಶಾಂತಿ ಮಾತುಕತೆಗಳಲ್ಲಿ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ಇರಾನ್ ತಿಳಿಸಿದೆ. ಲೆಬನಾನ್‌ನಲ್ಲಿ ಯುದ್ಧ ವಿರಾಮ, ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ...
ಅಮೆರಿಕ–ಇರಾನ್ ಶಾಂತಿ ಮಾತುಕತೆ ಭಗ್ನ; ಸಭೆಯಿಂದ ದಿಢೀರ್ ನಿರ್ಗಮಿಸಿದ ನಿಯೋಗ

ಅಮೆರಿಕ–ಇರಾನ್ ಶಾಂತಿ ಮಾತುಕತೆ ಭಗ್ನ; ಸಭೆಯಿಂದ ದಿಢೀರ್ ನಿರ್ಗಮಿಸಿದ ನಿಯೋಗ

ಪ್ರಮುಖ ಸುದ್ದಿ, ವಿದೇಶ
ಸ್ವಿಟ್ಜರ್‌ಲ್ಯಾಂಡ್: ಅಮೆರಿಕ ಮತ್ತು ಇರಾನ್ ನಡುವಿನ ಮಹತ್ವದ ಶಾಂತಿ ಮಾತುಕತೆ ಮೊದಲ ದಿನವೇ ಭಿನ್ನಾಭಿಪ್ರಾಯಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಡೆದ ಈ ಸಭೆಯಲ್ಲಿ ಲೆಬನಾನ್ ಕದನ ವಿರಾಮ ಪ್ರಮುಖ ಚರ್ಚಾ ವಿಷಯವಾಗಿತ್ತು. ಅಮೆರಿಕದ ಪರವಾಗಿ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ನಿಯೋಗ ಹಾಗೂ ಇರಾನ್ ಪರವಾಗಿ ಸಂಸತ್ ಸ್ಪೀಕರ್ ಮೊಹಮ್ಮದ್ ಬಾಘರ್ ಖಾಲಿಬಾಫ್ ಮತ್ತು ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಭಾಗವಹಿಸಿದರು. ಮಾತುಕತೆಯಲ್ಲಿ ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳ ಸಡಿಲಿಕೆ, ತೈಲ ರಫ್ತು ಮೇಲಿನ ನಿರ್ಬಂಧ ತೆರವು ಹಾಗೂ ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ ಆಸ್ತಿಗಳ ಬಿಡುಗಡೆ ಕುರಿತು ಚರ್ಚೆ ನಡೆಯಿತು. ಆದರೆ ಲೆಬನಾನ್‌ನಲ್ಲಿ ಕದನ ವಿರಾಮ ಸಂಪೂರ್ಣ ಜಾರಿಯಾಗದಿದ್ದರೆ ಇತರೆ ವಿಷಯಗಳ ಕುರಿತು ಪ್ರಗತಿ ಸಾಧ್ಯವಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿತು.ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲೆಬನಾನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನ್ ಬೆಂಬಲಿತ ಸಂಘಟನೆಗಳು ಚಟುವಟ...
ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ

ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಬಲ ಹೆಚ್ಚಳ: 39ಕ್ಕೆ ಏರಿಕೆ, ಬಿಜೆಪಿ 28ಕ್ಕೆ, ಜೆಡಿಎಸ್ 6ಕ್ಕೆ ಕುಸಿತ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಯ ಫಲಿತಾಂಶದೊಂದಿಗೆ ಮೇಲ್ಮನೆಯ ರಾಜಕೀಯ ಚಿತ್ರಣ ಮಹತ್ವದ ಬದಲಾವಣೆಗೆ ಸಾಕ್ಷಿಯಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ತನ್ನ ಬಲವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದು, ಸದನದಲ್ಲಿ ಸಂಖ್ಯಾಬಲದ ಮೇಲುಗೈ ಸಾಧಿಸಿದೆ.ಚುನಾವಣಾ ಫಲಿತಾಂಶದ ಬಳಿಕ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯೆ 39ಕ್ಕೆ ಏರಿಕೆಯಾಗಲಿದ್ದು, ಬಿಜೆಪಿ ಬಲ 28ಕ್ಕೆ ಹಾಗೂ ಜೆಡಿಎಸ್ ಬಲ 6ಕ್ಕೆ ಇಳಿಕೆಯಾಗಲಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ಹಿಡಿತ ಇನ್ನಷ್ಟು ಬಲವಾಗುವ ನಿರೀಕ್ಷೆ ವ್ಯಕ್ತವಾಗಿದೆ.ಇದೀಗ ಕಾಂಗ್ರೆಸ್ 37, ಬಿಜೆಪಿ 29 ಹಾಗೂ ಜೆಡಿಎಸ್ 7 ಸದಸ್ಯರನ್ನು ಹೊಂದಿವೆ. ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಮೂವರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯರ ಅವಧಿ ಜೂನ್ 30ರಂದು ಅಂತ್ಯಗೊಳ್ಳಲಿದ್ದು, ನೂತನ ಸದಸ್ಯರ ಅವಧಿ ಜುಲೈ 1ರಿಂದ ಆರಂಭವಾಗಲಿದೆ.ಇದರ ನಡುವೆ, ವಿಧಾನಪರಿಷತ್‌ನಲ್ಲಿ ಬಹುಮತ ಹೆಚ್ಚಿಸಿಕೊಂಡಿರುವ ಕಾಂಗ್ರೆಸ್, ಸಭಾಪತಿ ಸ್ಥಾನವನ್ನೂ ತನ್ನ ವಶಕ್ಕೆ ಪಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಮುಂದಾಗಿದೆ ಎನ್ನಲಾಗಿದೆ....
‘ಪರಿಷತ್ ಫಲಿತಾಂಶ ರಾಜ್ಯದ ಅಭಿವೃದ್ಧಿಕಾರ್ಯಕ್ರಮಗಳ ಮೇಲಿನ ವಿಶ್ವಾಸದ ಪ್ರತೀಕ’; ಡಿಕೆಶಿ

‘ಪರಿಷತ್ ಫಲಿತಾಂಶ ರಾಜ್ಯದ ಅಭಿವೃದ್ಧಿಕಾರ್ಯಕ್ರಮಗಳ ಮೇಲಿನ ವಿಶ್ವಾಸದ ಪ್ರತೀಕ’; ಡಿಕೆಶಿ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶಗಳು ಕಾಂಗ್ರೆಸ್ ಸರ್ಕಾರ ಹಾಗೂ ಅದರ ಜನಪರ ನೀತಿಗಳಿಗೆ ದೊರೆತ ಬೆಂಬಲವನ್ನು ಪ್ರತಿಬಿಂಬಿಸುತ್ತವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಅವರು, ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಕೆ. ಹರಿಪ್ರಸಾದ್, ಬಿ.ಎಸ್. ಶಿವಣ್ಣ, ಪಿ.ವಿ. ಮೋಹನ್, ವಿನಯ್ ಕಾರ್ತಿಕ್ ಹಾಗೂ ತಿಪ್ಪಣ್ಣಪ್ಪ ಕಾಮಕನೂರ್ ಅವರನ್ನು ಅಭಿನಂದಿಸಿದರು.ಶಾಸಕರಿಂದ ದೊರೆತ ಬೆಂಬಲವು ಕೇವಲ ಕಾಂಗ್ರೆಸ್ ಸರ್ಕಾರಕ್ಕಷ್ಟೇ ಅಲ್ಲ, ರಾಜ್ಯದ ಅಭಿವೃದ್ಧಿ ಮತ್ತು ಜನಕಲ್ಯಾಣ ಕಾರ್ಯಕ್ರಮಗಳ ಮೇಲಿನ ವಿಶ್ವಾಸದ ಪ್ರತೀಕವಾಗಿದೆ ಎಂದು ಅವರು ಹೇಳಿದರು.“ಪಕ್ಷಗಳ ಗಡಿಗಳನ್ನು ಮೀರಿ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ಹಿತಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮಗಳ ಮೇಲೆ ಶಾಸಕರು ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ,” ಎಂದು ಶಿವಕುಮಾರ್ ತಿಳಿಸಿದರು.ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ ಶಾಸಕರು, ಪಕ್ಷದ ಮುಖಂಡರು ಹಾಗೂ ರಣದೀ...
ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಮಾರ್ಗಸೂಚಿ; ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ, ಈಗಾಗಲೇ ಪಾವತಿಸಿದ್ದಾರೆ ಹಣ ವಾಪಸ್

ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಮಾರ್ಗಸೂಚಿ; ಕರ್ನಾಟಕ ಒನ್, ಬೆಂಗಳೂರು ಒನ್ ನಲ್ಲಿ ಅರ್ಜಿ, ಈಗಾಗಲೇ ಪಾವತಿಸಿದ್ದಾರೆ ಹಣ ವಾಪಸ್

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಮಾಡುವ ಐತಿಹಾಸಿಕ ಗ್ಯಾರಂಟಿ ಯೋಜನೆಗೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಸಾರಿಗೆ ಸಚಿವರಾದ ಬೈರತಿ ಸುರೇಶ್ ಅವರು ಈ ವಿಷಯವನ್ನು ಘೋಷಿಸಿದ್ದಾರೆ.ಈಗಾಗಲೇ ಹಣ ಪಾವತಿ ಮಾಡಿ ಬಸ್ ಪಾಸ್ ಖರೀದಿಸಿರುವ ವಿದ್ಯಾರ್ಥಿಗಳಿಗೆ ಆ ಹಣವನ್ನು ವಾಪಸ್ ನೀಡಲಾಗುವುದು ಎಂದೂ ಅವರು ವಿದ್ಯಾರ್ಥಿ ಸಮೂಹಕ್ಕೆ ಸಿಹಿ ಸುದ್ದಿ ನೀಡಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದುವರೆಗೆ ವಿದ್ಯಾರ್ಥಿನಿಯರಿಗೆ ಮಾತ್ರ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿತ್ತು. ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಗಂಡುಮಕ್ಕಳಿಗೂ ಈ ಸೌಲಭ್ಯವನ್ನು ಕಲ್ಪಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದರು.ಉಚಿತ ಬಸ್ ಪಾಸ್ ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದ್ದು, ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ಬಡವ ಶ್ರೀಮಂತ ಎನ್ನದೇ ಪ್ರತಿಯೊಬ್ಬ ಮಕ್ಕಳೂ ಆರ್ಥಿಕ ಹೊರೆ ಇಲ್ಲದೇ ತಮ್ಮ ವಿದ್ಯಾಭ್ಯಾಸ ಮಾಡಬೇಕೆಂಬುದು ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಅದರ...
ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ; ಸಿದ್ದರಾಮಯ್ಯ ಸ್ಪಷ್ಟನೆ

ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆರೋಪ; ಸಿದ್ದರಾಮಯ್ಯ ಸ್ಪಷ್ಟನೆ

ಪ್ರಮುಖ ಸುದ್ದಿ, ರಾಜ್ಯ, ವಿದೇಶ
ಬೆಂಗಳೂರು: ಹಿಂದುಳಿದ ವರ್ಗಗಳ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ನೀಡಲಾದ ಅನುದಾನದಲ್ಲಿ ತಾರತಮ್ಯ ನಡೆದಿದೆ ಎಂಬ ಆರೋಪಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಹೆಚ್ಚಿನ ಅನುದಾನ ನೀಡಿರುವುದು ಉದ್ದೇಶಪೂರ್ವಕವಲ್ಲ, ಆ ಸಮುದಾಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಸಲ್ಲಿಕೆಯಾಗಿದ್ದರಿಂದ ಮಾತ್ರ ಎಂದು ತಿಳಿಸಿದ್ದಾರೆ.ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಮನವಿಗಳನ್ನು ಪರಿಶೀಲಿಸಿ, ಸುಮಾರು 155 ಸಂಘಟನೆಗಳಿಗೆ ₹71.85 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಪೂರ್ವಭಾವಿ ಮಂಜೂರಾತಿ ನೀಡಿದೆ ಎಂದು ಹೇಳಿದ್ದಾರೆ.ಇದು ಅಂತಿಮ ಫಲಾನುಭವಿಗಳ ಪಟ್ಟಿ ಅಲ್ಲ. ಇತರೆ ಹಿಂದುಳಿದ ಜಾತಿಗಳಿಂದ ಬಂದಿರುವ ಮನವಿಗಳನ್ನೂ ಪರಿಶೀಲಿಸಿ ಮುಂದಿನ ಹಂತಗಳಲ್ಲಿ ಅನುದಾನ ಮಂಜೂರು ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿವಿಧ ಹಿಂದುಳಿ...
‘ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ; ಮೃತ, ಅನರ್ಹರ ಪತ್ತೆಗಷ್ಟೇ ಕ್ರಮ’

‘ಗೃಹಲಕ್ಷ್ಮಿ ಯೋಜನೆಯ ಪರಿಷ್ಕರಣೆಯೇ ಹೊರತು ಸ್ಥಗಿತ ಇಲ್ಲ; ಮೃತ, ಅನರ್ಹರ ಪತ್ತೆಗಷ್ಟೇ ಕ್ರಮ’

ಪ್ರಮುಖ ಸುದ್ದಿ, ರಾಜ್ಯ, ವಿದೇಶ
​ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಯನ್ನು ದುರುಪಯೋಗದಿಂದ ತಡೆದು, ಅರ್ಹರಿಗೆ ಮಾತ್ರ ತಲುಪಿಸುವ ನಿಟ್ಟಿನಲ್ಲಿ ಯೋಜನೆ ಪರಿಷ್ಕರಣೆಗೆ ಆಗ್ರಹಿಸಲಾಗಿದೆಯೇ ಹೊರತು, ಯೋಜನೆಯನ್ನು ನಿಲ್ಲಿಸುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರಾದ ದಿನೇಶ್ ಗೂಳಿಗೌಡ ಅವರು ಸ್ಪಷ್ಟಪಡಿಸಿದ್ದಾರೆ.​ವಿರೋಧ ಪಕ್ಷದ ವರು ಗೃಹಲಕ್ಷ್ಮಿ ಯೋಜನೆ ಕುರಿತು ಇಲ್ಲದ ಅಪಪ್ರಚಾರಗಳನ್ನು ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಹೇಳಿದ್ದಾರೆ.ರಾಜ್ಯದಲ್ಲಿ ಇದುವರೆಗೆ ಸುಮಾರು 1 ಕೋಟಿ 24 ಲಕ್ಷಕ್ಕೂ ಅಧಿಕ ಮಹಿಳಾ ಯಜಮಾನಿಯರಿಗೆ ಪ್ರತಿ ತಿಂಗಳು ತಲಾ 2,000 ರೂಪಾಯಿಗಳಂತೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪುತ್ತಿದೆ. ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಯೋಜನೆಯ ಫಲಾನುಭವಿಗಳಾಗಿದ್ದ ಸುಮಾರು 1 ಲಕ್ಷದ 95 ಸಾವಿರಕ್ಕೂ ಹೆಚ್ಚು ಕುಟುಂಬದ ಯಜಮಾನಿಯರು ಮರಣ ಹೊಂದಿದ್ದಾರೆ. ಆದಾಗ್ಯೂ,...