BMTC: ನೌಕರರ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ನೋಡಲು ಅಂತರ್ಜಾಲ ಸೌಲಭ್ಯ; ಸಚಿವ ರಾಮಲಿಂಗರೆಡ್ಡಿ ಚಾಲನೆ
ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿನ ನೌಕರರ/ಅಧಿಕಾರಿಗಳ 2023-2024ನೇ ಸಾಲಿನ ಭವಿಷ್ಯ ನಿಧಿ ಹಾಗೂ ಐಚ್ಛಿಕ ಭವಿಷ್ಯ ನಿಧಿ ಚೀಟಿಗಳನ್ನು ಅಂತರ್ಜಾಲದಲ್ಲಿ ವೀಕ್ಷಿಸುವ ಸೌಲಭ್ಯ ಗಮನಸೆಳೆದಿದೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಸುಮಾರು 27,000 ಅಧಿಕಾರಿ /ನೌಕಕರು ಕರ್ತವ್ಯ ನಿರ್ವಹಿಸುತ್ತಿದ್ದು ಸದರಿ ಅಧಿಕಾರಿ/ನೌಕರರ ಭವಿಷ್ಯನಿದಿ/ಐಚ್ಛಿಕ ಭವಿಷ್ಯನಿಧಿ ಮಾಹೆಯಾನ ವಂತಿಗೆಗಳ ಮಾಹಿತಿಯನ್ನು ಈ ಹಿಂದೆ ಮುದ್ರಿತ ಚೀಟಗಳ ರೂಪದಲ್ಲಿ ಮುದ್ರಿಸಿ ಪ್ರತಿ ನೌಕರರಿಗೆ ವಾರ್ಷಿಕವಾರು ವಿತರಿಸಲಾಗುತ್ತಿತ್ತು.2022-2023 ನೇ ಸಾಲಿನಿಂದ ಪ್ರಾಯೋಗಿಕವಾಗಿ ತಂತ್ರಜ್ಞಾನವನ್ನು ಬಳಸಿ ಆಂತರಿಕವಾಗಿಯೇ ಗಣಕ ಇಲಾಖೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ems.mybmtc.com/pf ತಂತ್ರಜ್ಞಾನದಲ್ಲಿ ಆನ್ಲೈನ್ ನಲ್ಲಿಯೇ ಪ್ರತಿ ನೌಕರನು ತನ್ನ ಮೊಬೈಲ್ನಲ್ಲಿಯೇ ಆತನ ಪಿ.ಎಫ್ ಸಂಖ್ಯೆಯನ್ನ ನಮೂದಿಸಿ ಆತನ ಖಾತೆಯಲ್ಲಿರುವ ಪಿ.ಎಫ್ ಮೊತ್ತ, ವಿ.ಪಿ.ಎಫ್ ಮೊತ್ತ, ಬಡ್ಡಿ ಮೊತ್ತ, ಮುಂಗಡಗಳ ವಿವರಗಳು (ಪ್ರಾರಂಭಿಕ/ಅಂತಿಮ ಶಿಲ್ಲುಗಳೊಂದಿಗೆ) ವೀಕ್ಷಿಸಲು ಅವಕಾಶ ಇದೀಗ ಕಲ್ಪಿಸಲಾಗ...





