Saturday, August 8

ವಿಶೇಷ

4 ರಾಜ್ಯಗಳನ್ನು ಗುರಿಯಾಗಿಸಿ ಡ್ರೋನ್ ದಾಳಿಗೆ ಯತ್ನಿಸಿರುವ ಪಾಕಿಸ್ತಾನಕ್ಕೆ ಭಾರತದ ಸೇನೆ ಪ್ರತ್ಯುತ್ತರ

4 ರಾಜ್ಯಗಳನ್ನು ಗುರಿಯಾಗಿಸಿ ಡ್ರೋನ್ ದಾಳಿಗೆ ಯತ್ನಿಸಿರುವ ಪಾಕಿಸ್ತಾನಕ್ಕೆ ಭಾರತದ ಸೇನೆ ಪ್ರತ್ಯುತ್ತರ

ದೇಶ, ಪ್ರಮುಖ ಸುದ್ದಿ, ವಿಶೇಷ
ಜಮ್ಮು: ಉಗ್ರರ ಪೋಷಕ ದೇಶಬ್ ಪಾಕಿಸ್ತಾನ ಮತ್ತೆ ತನ್ನ ಕಿತಾಪತಿ ಮಿಂದುವರಿಸಿದೆ. ನಾಲ್ಕು ರಾಜ್ಯಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ಡ್ರೋನ್ ದಾಳಿಗೆ ಯತ್ನಿಸಿರುವ ಪಾಕಿಸ್ತಾನಕ್ಕೆ ಭಾರತದ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.ಜಮ್ಮು-ಕಶ್ಮೀರ, ರಾಜಸ್ತಾನ, ಪಂಜಾಬ್ ರಾಜ್ಯಗಳ ಹಲವು ನಗರಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ಕೈಗೊಂಡಿದೆ. ಆದರೆ ಭಾರತದ ಸೇನೆ ಪಾಕಿಸ್ತಾನದ ನೂರಾರು ಡ್ರೋನ್ ಗಳನ್ನೂ ಹೊಡೆದುರುಳಿಸಿದೆ. ಶುಕ್ರವಾರ ಸಂಜೆ ದಕ್ಷಿಣ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣ ಮತ್ತು ಆವಂತಿಪೋರಾ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. चार पाकिस्तानी हेलीकाप्टरभारत क़े भुज में बरसा रहे थे बम...भारत ने एक ही हमले में चारों को किया स्वाहा 🔥भारतीय सेना जिंदाबाद #IndianArmy✊ pic.twitter.com/0IW9IbUAk9— Deepak Sharma (@SonOfBharat7) May 9, 2025ಬಾರಾಮುಲ್ಲಾದಿಂದ ಭುಜ್‌ವರೆಗಿನ ಅಂತರರಾಷ್ಟ್ರೀಯ ಗಡಿ ...
ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವಿಶೇಷ, ವೀಡಿಯೊ
ಮಂಗಳೂರು: ಪುರಾಣ ಪ್ರಸಿದ್ಧ ಶ್ರೀ ಕಟೀಲು ಕ್ಷೇತ್ರದಲ್ಲಿ ಇದೀಗ ವೈಭವದ ಜಾತ್ರಾ ಮಹೋತ್ಸವದ ಸಡಗರ ಆವರಿಸಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಾರೆ. ಕಟೀಲು ಕ್ಷೇತ್ರದ ಜಾತ್ರೆಯ ಸಂದರ್ಭದಲ್ಲೇ ಕರಾವಳಿಯ ಯುವಜನ ಸಮೂಹ ಶ್ರೀ ದುರ್ಗಾಪರಮೇಶ್ವರಿಯ ಮಹಿಮೆಯ ಬಗ್ಗೆ ಬೆಳಕು ಚೆಲ್ಲುವ ಹಾಡೊಂದನ್ನು ಲೋಕಾರ್ಪಣೆ ಮಾಡಿ ಗಮನಸೆಳೆದಿದ್ದಾರೆ. ಈ ಭಕ್ತಿ ಗಾನಕ್ಕೆ ಆಸ್ತಿಕರ ಪಾಳಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.https://www.youtube.com/watch?v=etv5WCNznXQಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೆ ಪ್ರಯುಕ್ತ ದೇವಲೋಕ ಕ್ರಿಯೇಷನ್ಸ್ ವತಿಯಿಂದ 'ಅಪ್ಪೆ ಭ್ರಾಮರಿಯೇ' ಎಂಬ ಹೊಸ ಭಕ್ತಿಗೀತೆಯನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಜ್ಯೋತಿಗುಡ್ಡೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಗಿದೆ. ಜ್ಯೋತಿಗುಡ್ಡೆ ಕ್ಷೇತ್ರದ ಅರ್ಚಕಿ ಗುಲಾಬಿ ಅಮ್ಮನವರು ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಿದರು.ಸಾಫಲ್ಯ ಸೇವಾ ಸಂಘ (ರಿ) ...
ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೀಡಿಯೊ
ಮಂಗಳೂರು: 'ಕಟೀಲು' ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪುಟ್ಟ ಉರಾದರೂ ಇಲ್ಲಿನ ದೇಗುಲವು ಜಗದಗಲ ಖ್ಯಾತಿಯನ್ನು ಹೊಂದಿದೆ. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಕ್ಷೇತ್ರವು ಕರಾವಳಿಯ ಪ್ರಸಿದ್ಧ ದೇಗುಲವಾಗಿದ್ದು, ದೇಶ-ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.https://www.youtube.com/watch?v=etv5WCNznXQಮಂಗಳೂರಿನಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಕ್ಷೇತ್ರವು ನಂದಿನಿ ನದಿಯ ಮಧ್ಯೆ ಇದ್ದು, ಹಚ್ಚ ಹಸಿರಿನ ವನಸಿರಿಯ ಸಿಂಗಾರದಿಂದಾಗಿ ಪ್ರವಾಸಿಗರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ನಿತ್ಯವೂ ಭಕ್ತಸಾಗರದಿಂದ ತುಂಬಿ ತುಳುಕುತ್ತಿರುವ ಕಟೀಲು ದೇಗುಲವು ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲಗಳಲ್ಲೊಂದು. ಇದೀಗ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ವಾರ್ಷಿಕ ಅದ್ಧೂರಿ ಜಾತ್ರೆಗೆ ಸಾಕ್ಷಿಯಾಗುತ್ತಿದೆ. ಪ್ರತೀ ವರ್ಷ ಏಪ್ರಿಲ್ ತಿಂಗಳಲ್ಲಿ 8 ದಿನಗಳ ಕಾಲ ಈ ವೈಭವ ನೆರವೇರುತ್ತದೆ. ವೈಶಿಷ್ಟ್ಯಗಳೊಂದಿಗೆ ಮೊದಲ ದಿನ ಕೋಡಿ (ಧ್ವಜ) ಏರಿಸುವ ಮೂಲಕ ಜಾತ್ರೆ ಆರಂಭವಾಗುತ್ತದೆ.3ನೇ ದಿನ ದೇವರ ಮೂಡು ಸವಾರಿ (ಮೂಡಣದ ದಿಕ್ಕಿಗೆ) ನಡೆಯುತ್ತದೆ. 5...
ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

ಅಯೋಧ್ಯೆಯಲ್ಲಿ ಅನನ್ಯ ಸನ್ನಿವೇಶ.. ಬಾಲರಾಮನಿಗೆ ಸೂರ್ಯ ರಶ್ಮಿಯ ತಿಲಕ..!

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ, ವೀಡಿಯೊ
ಅಯೋಧ್ಯೆ: ಶ್ರೀರಾಮ ಜನ್ಮಭೂಮಿ ಅಯೋಧ್ಯೆ ದೇಗುಲ ಇಂದು ಅನನ್ಯ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಶ್ರೀ ರಾಮನವಮಿ ದಿನವಾದ ಇಂದು ಭವ್ಯ ದೇಗುಲದಲ್ಲಿರುವ ಬಾಲರಾಮನ ವಿಗ್ರಹಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿದ ಸನ್ನಿವೇಶ ಆಸ್ತಿಕ ಸಮೂಹದ ಗಮನಸೆಳೆಯಿತು.श्री राम नवमी के पावन पर्व पर प्रभु का सूर्यतिलक Surya Tilak of Prabhu on the pious occasion of Shri Ram Navami pic.twitter.com/UCaweKHT7h— Shri Ram Janmbhoomi Teerth Kshetra (@ShriRamTeerth) April 6, 2025ದೇಶಾದ್ಯಂತ ರಾಮನವಮಿ ಹಬ್ಬವನ್ನು ಆಚರಿಸುತ್ತಿದ್ದ ಹೊತ್ತಿಗೆ ಅಯೋಧ್ಯೆಯಲ್ಲಿರುವ ಬಾಲ ರಾಮನ ಹಣೆಯನ್ನು ಸೂರ್ಯ ರಶ್ಮಿ ಸ್ಪರ್ಶಿಸಿದೆ. ಕೋಟ್ಯಂತರ ಜನರು ಈ ಅದ್ಭುತ ದೃಶ್ಯವನ್ನು ಸಾಕ್ಷೀಕರಿಸಿದರು.ಸೂರ್ಯ ರಶ್ಮಿ ವಿಗ್ರಹಕ್ಕೆ ಸ್ಪರ್ಶಿಸುತ್ತಿದ್ದಂತೆಯೇ ಬಾಲರಾಮನ ಹಣೆಯಲ್ಲಿ ತಿಲಕದ ದೃಶ್ಯ ಕಂಡುಬಂತು. ಅದಾಗಲೇ ಬಾಲರಾಮನಿಗೆ ವಿಶೇಷ ಆರತಿಯನ್ನು ನೆರವೇರಿಸಲಾಯಿತು.సూర్యవంశ రామ 🙇🏻🚩 శ్రీరామ నవమి శుభాకాంశలు #AyodhaRamMandir#RamaNavami pic.twitter.com/nOWjKpZ2J...
‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
ಮಂಗಳೂರು: ಪುರಾಣ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಗತ ವೈಭವ ಮರುಕಳಿಸಿದೆ. ಐತಿಹಾಸಿಕ ವಾರ್ಷಿಕ ಜಾತ್ರಾ ಮಹೋತ್ಸವ ಆರಂಭವಾಗಿದೆ. ಸುಮಾರು ಒಂದು ತಿಂಗಳ ಕಾಲದ ಸುದೀರ್ಘ ಜಾತ್ರೆ ಇದಾಗಿದ್ದು ದೇಶ-ವಿದೇಶಗಳಲ್ಲಿ 'ಪೊಳಲಿ ಚೆಂಡು' ಎಂದೇ ಇದು ಪ್ರತೀತಿ. ಈ ವರ್ಷ 28 ದಿನಗಳ ಜಾತ್ರೆ ನಡೆಯಲಿದ್ದು ಎಪಿಲ್ 9 ರಂದು 'ಕಡೆ ಚೆಂಡು' ನಿಗದಿಯಾಗಿದೆ.ಪೊಳಲಿ ಚೆಂಡು ಉತ್ಸವದ ಸಂಕ್ಷಿಪ್ತ ಕ್ಯಾಲೆಂಡರ್‌ ಹೀಗಿದೆ: ಈ ಬಾರಿ ಏಪ್ರಿಲ್ 4ರಂದು 20ನೇ ದಂಡಮಾಲೋತ್ಸವ, ಏಪ್ರಿಲ್ 5ರಂದು ಮೊದಲ ಚೆಂಡು, ಏಪ್ರಿಲ್ 9ರಂದು ಕಡೇ ಚೆಂಡು, ಏಪ್ರಿಲ್ 10ರಂದು ಬ್ರಹ್ಮ ರಥೋತ್ಸವ, ಏಪ್ರಿಲ್ 11ರಂದು ಆರಾಟ ಮಹೋತ್ಸವ ಜರುಗಲಿದೆ.ದಕ್ಷಿಣಕನ್ನಡದ ಪೊಳಲಿಯಲ್ಲಿರುವ ನಾಡಿನ ಅಧಿ ದೇವತೆ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಪ್ರತೀ ವರ್ಷ ಮಾರ್ಚ್ 14ರ ತಡರಾತ್ರಿ ಧ್ವಜಾರೋಹಣ ಮೂಲಕ ಜಾತ್ರಾ ಮಹೋತ್ಸವಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಧ್ವಜಾರೋಹಣ ನಂತರವಷ್ಟೇ  ಎಷ್ಟು ದಿನಗಳ ಜಾತ್ರೆ ನಡೆಯುತ್ತದೆ ಎಂಬುದು ಘೋಷಣೆಯಾಗುವುದು. ಈ ಘೋಷಣೆಯನ್ನು ಕೇಳಲು ಇಡೀ ನಾಡು ಕಾತುರದಿಂದ ಕಾಯುತ್ತಿರುವುದೇ ವಿಶೇಷ. ಈ ಬ...
VIDEO: ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

VIDEO: ಚೆಂಡಿನ ನಾಡಿನ ಹಿರಿಮೆಯನ್ನು ಸಾರಿದ ‘ಪುರಲ್ದ ಸಿರಿಯೇ..’ ನಾಡಿನ ಅಧಿದೇವತೆ ಬಗ್ಗೆ ಗುಣಗಾನ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೀಡಿಯೊ
ಕರ್ನಾಟಕದ ಪುರಾಣ ಪ್ರಸಿದ್ಧ ಶ್ರೀ ಪೊಳಲಿ ಕ್ಷೇತ್ರ ಒಂದಿಲ್ಲೊಂದು ಮಹಿಮೆಯಿಂದ ಗಮನಸೆಳೆಯುತ್ತಿರುತ್ತದೆ. ಶತಮಾನಗಳಷ್ಟು ಹಳೆಯ ಈ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ 105 ವರ್ಷಗಳ ಬಳಿಕ ನಡೆದ 'ಶತ ಚಂಡಿಕಾಯಾಗ' ಆಸ್ತಿಕ ವಲಯದ ಕುತೂಹಲದ ಕೇಂದ್ರಬಿಂದುವಾಗಿತ್ತು. ಇದೀಗ ಪುರಾಣ ಪ್ರಸಿದ್ಧ 'ಚೆಂಡಿನ ಉತ್ಸವ'ಕ್ಕೆ ಪೊಳಲಿ ಕ್ಷೇತ್ರ ಸಜ್ಜಾಗಿರುವಂತೆಯೇ ಶ್ರೀ ಕ್ಷೇತ್ರದ ಗುಣಗಾನ ಮಾಡಿರುವ ಹಾಡೊಂದು ಬಿಡುಗಡೆಯಾಗಿದೆ.https://www.youtube.com/watch?v=LGZAxO0gJzkಪೊಳಲಿ ಸನ್ನಿಧಾನದಲ್ಲಿ ನಿನ್ನೆ (ಬುಧವಾರ) ಬಿಡುಗಡೆಯಾಗಿರುವ 'ಪುರಲ್ದ ಸಿರಿಯೇ..' ಹೆಸರಿನ ಭಕ್ತಿ ಗಾಯನದ ವೀಡಿಯೊ ನಾಡಿನ ಆಸ್ತಿಕ ಸಮೂಹದ ಚಿತ್ತವನ್ನು ಸೂಜಿಗಲ್ಲಿನಂತೆ ಸೆಳೆದಿಟ್ಟುಕೊಳ್ಳುವಂತಿದೆ.ದೇವೀ ನೆಲೆಯಾಗಿರುವ ಪೊಳಲಿಯನ್ನು ತುಳು ಭಾಷೆಯಲ್ಲಿ 'ಪುರಾಲ್' ಎಂದು ಕರೆಯಲಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಭಕ್ತ ಸೀಮೆಗೆ ಪೊಳಲಿ ರಾಜರಾಜೇಶ್ವರಿಯೇ ನಾಡಿನ ಅಧಿದೇವತೆ. ಈ ಸೀಮೆಯುದ್ದಕ್ಕೂ ಪೊಳಲಿ ದೇವಿಯನ್ನು 'ಪುರಲ್ದ ಉಳ್ಳಾಲ್ತಿ' ಎಂದೇ ಆಸ್ತಿಕರು ಕರೆಯು...
ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

ಮಂಗಳೂರು ರಥಬೀದಿ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ‘ಬ್ರಹ್ಮರಥೋತ್ಸವ’ ವೈಭವ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
(ಚಿತ್ರ : ಮಂಜು ನೀರೇಶ್ವಾಲ್ಯ) ಮಂಗಳೂರು: ಆಸ್ತಿಕರ ನಾಡು, ರಾಜ್ಯ ಕರಾವಳಿ ಇದೀಗ ಸಾಲು ಸಾಲು ವೈದ್ಧಿಕ ಕೈಂಕರ್ಯಗಳಿಗೆ ಸಾಕ್ಷಿಯಾಗುತ್ತಿವೆ. ಅದರ ನಡುವೆಯೇ ಮಂಗಳೂರಿನಲ್ಲಿ ನೆರವೇರಿದ 'ಮಹಾಮಾಯ ರಥೋತ್ಸವ'ವು ಮಹಾ ವೈಭವವಾಗಿ ಗಮನಸೆಳೆಯಿತು.ಮಂಗಳೂರು ರಥಬೀದಿಯ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದಲ್ಲಿ ಅಭೂತಪೂರ್ವ ಉತ್ಸವ: ಭಕ್ತ ಸಾಗರದ ನಡುವೆ 'ಬ್ರಹ್ಮರಥೋತ್ಸವ' ವೈಭವ..ಮಂಗಳೂರು ನಗರದ ರಥಬೀದಿಯಲ್ಲಿರುವ ಶ್ರೀ ಕುಡ್ತೆರಿ ಮಹಾಮಾಯ ದೇವಸ್ಥಾನದ ಬ್ರಹ್ಮರಥೋತ್ಸವ ಮಂಗಳವಾರ ಭಕ್ತಸಾಗರದ ನಡುವೆ ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ ಮಹಾಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಪುಳಕಾಭಿಷೇಕ , ಕನಕಾಭಿಷೇಕ ಗಳು ನಡೆದವು. ಯಜ್ಞ ಮಂಟಪದಲ್ಲಿ ನಡೆದ ಮಹಾ ಪೂರ್ಣಾಹುತಿ ಸಂದರ್ಭದಲ್ಲಿ ಧರ್ಮಿಕ ಪ್ರಮುಖರು ಯತಿಗಳು ಭಾಗಿಯಾದರು.ಸಂಜೆ ಬೆಳ್ಳಿ ಪಲ್ಲಕಿಯಲ್ಲಿ ಶ್ರೀ ದೇವರು ವಿರಾಜಮಾನರಾಗಿ ರಥಾರೋಹಣವು ಅನನ್ಯ ಮಹೋತ್ಸವವಾಗಿ ಆಸ್ತಿಕರ ಗಮನಕೇಂದ್ರೀಕರಿಸಿತು. ಭಕ್ತರು ರಥ ಎಳೆದು ಪುನೀತರಾದರು.ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಸಿ.ಎ.ಶ್ರೀನಿವಾಸ್ ಕಾಮತ್, ಮಾರೂ...
ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

ಶತಮಾನದ ನಂತರ ಪೊಳಲಿಯಲ್ಲಿ ಮರುಕಳಿಸಿದ ಮಹಾವೈಭವ; ಶತಚಂಡಿಕಾ ಯಾಗಕ್ಕೆ ಭಕ್ತರ ಮಹಾಪೂರ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೈವಿಧ್ಯ
ಮಂಗಳೂರು: ದಕ್ಷಿಣ ಭಾರತದ ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ಇದೀಗ ಮತ್ತೊಂದು ಕೈಂಕರ್ಯದಿಂದ ಆಸ್ತಿಕರ ಗಮನಸೆಳೆದಿದೆ. 'ಚೆಂಡು ಉತ್ಸವದ ನಾಡು' ಎಂದೇ ಗುರುತಾಗಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಶತಮಾನದ ನಂತರ ಶತಚಂಡಿಕಾಯಾಗ ನಡೆಯುತ್ತಿದೆ.ಇದು ನಿಜಕ್ಕೂ ಅಪೂರ್ವ ಹಾಗೂ ಅನನ್ಯ ಕೈಂಕರ್ಯ. ಸುಮಾರು 105 ವರ್ಷಗಳ ಹಿಂದೆ ಈ ಕ್ಷೇತ್ರದಲ್ಲಿ ಇಂತಹಾ ಚಂಡಿಕಾ ಯಾಗ ನಡೆದಿತ್ತು. ಲೋಕ ಕಲ್ಯಾಣಾರ್ಥವಾಗಿ ನೆರವೇರುತ್ತಿರುವ ಈ ಶತಚಂಡಿಕಾಯಾಗದಲ್ಲಿ ದೇಶದ ವಿವಿಧೆಡೆಯ ಯತಿಗಳು ಭಾಗಿಯಾಗುತ್ತಿದ್ದಾರೆ. ಚೆಂಡು ಉತ್ಸವ ಸಂದರ್ಭದ ಜನೋತ್ಸಾಹಕ್ಕೆ ಈ ಶತಚಂಡಿಕಾಯಾಗದ ಸಡಗರ ಸಾಕ್ಷಿಯಾಗುತ್ತಿರುವುದು ವಿಶೇಷ.ಮಾರ್ಚ್ 5ರ ಬೆಳಿಗ್ಗೆ 6 ರಿಂದ ಶತಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ ಗಂಟೆ 12ಕ್ಕೆ ಪೂರ್ಣಾಹುತಿ ನೆರವೇರಲಿದೆ. ಮರುದಿನ, ಮಾರ್ಚ್ 6, ಗುರುವಾರ 'ದೊಡ್ಡ ರಂಗಪೂಜೆ' ಉತ್ಸವ ನೆರವೇರಲಿದೆ.ಮಾರ್ಚ್ 1 ರಿಂದ ಶ್ರೀ ಕ್ಷೇತ್ರ ಪೊಳಲಿಯಲ್ಲಿ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು ವಿವಿಧ ಕೈಂಕರ್ಯಗಳು ನೆರವೇರುತ್ತಿವೆ. ಮಾರ್ಚ್ 5 ರಂದು ಬುಧವಾರ ಶತಚಂಡಿಕಾಯಾಗ ...
45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

45 ದಿನಗಳಲ್ಲಿ 66 ಕೋಟಿಗೂ ಹೆಚ್ಚು ಆಸ್ತಿಕರಿಂದ ಪುಣ್ಯಸ್ನಾನ: ‘ವಸುಧೈವ ಕುಟುಂಬಕಂ’ ಘೋಷಣೆಗೆ ಸಾಕ್ಷಿಯಾದ ಮಹಾಕುಂಭಮೇಳ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಲಕ್ನೋ: ಇಡೀ ಜಗತ್ತಿನ ಗಮನಸೆಳೆದಿದ್ದ ಪ್ರಯಾಗರಾಜ್ ಮಹಾ ಕುಂಭ 2025 ಪರಿಪೂರ್ಣವಾಗಿದೆ. ಈ ಕೈಂಕರ್ಯದ ಯಶಸ್ವಿಗೆ ಕಾರಣರಾದವರನ್ನು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ಮರಿಸಿದ್ದಾರೆ. ಮಹಾಕುಂಭ ಯಶಸ್ವಿ ಪೂರ್ಣಗೊಳಿಸುವಿಕೆಗೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವೇ ಕಾರಣ ಎಂದಿರುವ ಅವರು ಈ ಭವ್ಯ ಧಾರ್ಮಿಕ ಸಭೆಯನ್ನು "ಏಕತೆ, ಸಮಾನತೆ ಮತ್ತು ಸಾಮರಸ್ಯದ ಮಹಾಯಜ್ಞ" ಎಂದು ಕರೆದಿದ್ದಾರೆ.ಪ್ರಧಾನಿ ಮೋದಿಯವರ ಮಾರ್ಗದರ್ಶನಕ್ಕೆ ಕೃತಜ್ಞತೆ ಸಲ್ಲಿಸಿರುವ ಸಿಎಂ ಯೋಗಿ, ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ನಿಮ್ಮ ಯಶಸ್ವಿ ಮಾರ್ಗದರ್ಶನದ ಪರಿಣಾಮವಾಗಿ 'ಏಕತೆ, ಸಮಾನತೆ, ಸಾಮರಸ್ಯದ ಮಹಾಯಜ್ಞ' - ಮಹಾ ಕುಂಭ 2025, ಪ್ರಯಾಗರಾಜ್ ಮುಕ್ತಾಯಗೊಂಡಿದೆ, ಭವ್ಯತೆ ಮತ್ತು ದೈವತ್ವದ ಜೊತೆಗೆ ಭದ್ರತೆ, ಸ್ವಚ್ಛತೆ ಮತ್ತು ನಿರ್ವಹಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿದೆ" ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.ಕಳೆದ 45 ಪವಿತ್ರ ದಿನಗಳಲ್ಲಿ, ಪೂಜ್ಯ ಸಂತರು ಮತ್ತು ಋಷಿಗಳು ಸೇರಿದಂತೆ 66 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ತ್ರಿವೇಣಿಯಲ್ಲಿ ನಂಬಿಕೆಯ ಸ್ನಾನ ಮಾಡುವ ಮೂಲಕ ಆಶೀರ್...
ಭಕ್ತಿ ವೈಭವ, ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾದ ಇಶಾ ‘ಶಿವರಾತ್ರಿ’

ಭಕ್ತಿ ವೈಭವ, ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾದ ಇಶಾ ‘ಶಿವರಾತ್ರಿ’

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ, ವೀಡಿಯೊ
ಕೊಯಮತ್ತೂರು: ಇಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದಲ್ಲಿ ಕೊಯಮತ್ತೂರಿನ ಇಶಾ ಕೇಂದ್ರದಲ್ಲಿ ಬುಧವಾರ ರಾತ್ರಿ ಶಿವರಾತ್ರಿ ಮಹಾ ವೈಭವ ನಾಡಿನ ಗಮನಸೆಳೆಯಿತು.https://www.youtube.com/watch?v=jwcuwMBBKIw&ab_channel=SoundsofIshaಶಿವಸ್ಮರಣೆಯ ಮಹಾ ಹಬ್ಬದಲ್ಲಿ ದೇಶದ ವಿವಿಧೆಡೆಯ ಆಸ್ತಿಕರು ಆಗಮಿಸಿದ್ದರು. ಸಾವಿರಾರು ಶಿವಭಕ್ತರ ಸಮ್ಮುಖದಲ್ಲಿ ನಡೆದ ಭಕ್ತಿ ವೈಭವ ಸಾಂಸ್ಕೃತಿಕ ಸಂಭ್ರಮಕ್ಕೂ ಸಾಕ್ಷಿಯಾಯಿತು.https://www.youtube.com/watch?v=N8CcJj5y6kA&ab_channel=SoundsofIshaಈ ಮಹಾಶಿವರಾತ್ರಿ ಆಚರಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹಿತ ಅನೇಕ ಗಣ್ಯರು ಭಾಗವಹಿಸಿದ್ದರು.https://www.youtube.com/watch?v=zA7Fozc0VCw&ab_channel=SoundsofIsha ...