Saturday, August 8

ವಿಶೇಷ

ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಕತ್ರಿನಾ ಕೈಫ್, ರವೀನಾ ಟಂಡನ್

ಪ್ರಯಾಗರಾಜ್‌ ಮಹಾ ಕುಂಭದಲ್ಲಿ ಕತ್ರಿನಾ ಕೈಫ್, ರವೀನಾ ಟಂಡನ್

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಮುಂಬೈ,: ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭದಲ್ಲಿ ಭಾಗವಹಿಸುತ್ತಿರುವ ಸೆಲೆಬ್ರಿಟಿಗಳ ಸಾಲಿಗೆ ಕತ್ರಿನಾ ಕೈಫ್ ಮತ್ತು ರವೀನಾ ಟಂಡನ್ ಸೇರಿಕೊಂಡರು. ಧಾರ್ಮಿಕ ಭೇಟಿಯ ಸಮಯದಲ್ಲಿ ಈ ಇಬ್ಬರು 'ಗಂಗಾ ಆರತಿ'ಯಲ್ಲಿ ಭಾಗವಹಿಸಿ ಗಮನಸೆಳೆದಿದ್ದಾರೆ.ಪರಮಾರ್ಥ ನಿಕೇತನ ಆಶ್ರಮದ ಅಧ್ಯಕ್ಷ ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ, ನಟ ಅಭಿಷೇಕ್ ಬ್ಯಾನರ್ಜಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ 'ಗಂಗಾ ಆರತಿ'ಯಲ್ಲಿ ಸೋಮವಾರ ಭಾಗಿಯಾದರು.ಕತ್ರಿನಾ ಕೈಫ್ ತನ್ನ ಅತ್ತೆ ವೀಣಾ ಕೌಶಲ್ ಅವರೊಂದಿಗೆ ಮಹಾ ಕುಂಭಕ್ಕೆ ಭೇಟಿ ನೀಡಿದರು. ದಿವಾ ಪೌಡರ್ ಪಿಂಕ್ ಜನಾಂಗೀಯ ಉಡುಪನ್ನು ಧರಿಸಿದ್ದರು. ಸ್ವಾಮಿ ಚಿದಾನಂದ್ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರ ಮಾರ್ಗದರ್ಶನ ಪಡೆದಿದ್ದಾರೆ....
ಮಹಾ ಕುಂಭಮೇಳ: ಈವರೆಗೂ 60 ಕೋಟಿ ಮಂದಿ ಪುಣ್ಯಸ್ನಾನ

ಮಹಾ ಕುಂಭಮೇಳ: ಈವರೆಗೂ 60 ಕೋಟಿ ಮಂದಿ ಪುಣ್ಯಸ್ನಾನ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಲಖನೌ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಈವರೆಗೆ ಸುಮಾರು 60 ಕೋಟಿ ಮಂದಿ ಪುಣ್ಯಸ್ನಾನ ಮಾಡಿದ್ದಾರೆ.ಈ ಕುರಿತಂತೆ ಶನಿವಾರ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಸರ್ಕಾರ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದುತಿಳಿಸಿದೆ.ಜನವರಿ 13 ರಂದು ಪ್ರಾರಂಭವಾದ ಕುಂಭಮೇಳಕ್ಕೆ ಫೆಬ್ರವರಿ 26 ರಂದು ಮಹಾ ಶಿವರಾತ್ರಿ ವರೆಗೂ ನಡೆಯಲಿದೆ. 144 ವರ್ಷಗಳಿಗೊಮ್ಮೆ ನಡೆಯುವ ಕುಂಭ ಮೇಳೆ ಕಣ್ತುಂಬಿಕೊಳ್ಳಲು ಪ್ರಯಾಗರಾಜ್​ ಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದೇ ರೀತಿಯ ಸ್ಥಿತಿ ಇದ್ದರೆ ಅಂತಿಮ 'ಅಮೃತ ಸ್ನಾನ'ದ ವೇಳೆಗೆ ಈ ಸಂಖ್ಯೆ 65 ಕೋಟಿಯನ್ನು ಮೀರುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ....
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿಗೆ ಸಚಿವರ ಮಾಸ್ಟರ್ ಪ್ಲಾನ್; ಆಯುಕ್ತರ ನೇತೃತ್ವದ ಸಮಿತಿ ರಚನೆ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಭಿವೃದ್ಧಿಗೆ ಸಚಿವರ ಮಾಸ್ಟರ್ ಪ್ಲಾನ್; ಆಯುಕ್ತರ ನೇತೃತ್ವದ ಸಮಿತಿ ರಚನೆ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವಿಶೇಷ
ಬೆಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಮುಜರಾಯಿ ಸಚಿವರು ರಾಮಲಿಂಗಾ ರೆಡ್ಡಿ ಮಹತ್ವದ ಕ್ರಮಕ್ಕೆ ಮುನ್ನುಡಿ ಬರೆದಿದ್ದಾರೆ.ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಮಗ್ರ ಅಭಿವೃದ್ಧಿ ಕಾಮಗಾರಿಯನ್ನು ಹಂತಹಂತವಾಗಿ ಅನುಷ್ಠಾನಗೊಳಿಸಿ, ಭಕ್ತಾಧಿಗಳಿಗೆ ಸಮಗ್ರ ಸೌಲಭ್ಯ ಒದಗಿಸುವ ಹಾಗೂ ಶ್ರೀ ಕ್ಷೇತ್ರವನ್ನು ಮತ್ತಷ್ಟು ಸಾರ್ವಜನಿಕ ಸ್ನೇಹಿ ಯಾಗಿಸಲು ಮಾಸ್ಟರ್ ಪ್ಲಾನ್ ರೂಪಿಸಲು ಸಭೆ ನಡೆಸಿದ ಸಚಿವರು, ಹೊಸದಾಗಿ ಸಮಿತಿ ರಚಿಸಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 77 ರನ್ವಯ 15 ಜನ ಅಧಿಕಾರಿ/ಅಧಿಕಾರೇತರ ಸದಸ್ಯರನ್ನು ಮತ್ತು ಹೆಚ್ಚುವರಿಯಾಗಿ 3  ಸದಸ್ಯರನ್ನು ಒಳಗೊಂಡಂತೆ ಮೇಲ್ವಿಚಾರಣಾ ಸಮಿತಿ ರಚಸಿ ಆದೇಶಿಸಲಾಗಿದೆ. 15.02.2025 ರಂದು ನಡೆದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಮಾಸ್ಟರ್ ಪ್ಲಾನ್ ಯೋಜನೆಯ ಮೇಲ್ವಿಚಾರಣೆ ಸಮಿತಿ ಸಭೆಯಲ್ಲಿ ಈ‌ ಕೆಳಕಂಡ ತೀರ್ಮಾನಗಳನ್ನು‌ ತೆಗೆದುಕೊಳ್ಳಲಾಗಿದೆ. ಮುಜರಾಯಿ ಇಲಾಖೆ ಆಯುಕ್ತರು ಈ ಸಮಿತಿಗೆ...
ಹೊಸ ಚರಿತ್ರೆ ಬರೆದ ಮಹಾಕುಂಭಮೇಳ: ಈವರೆಗೂ 50 ಕೋಟಿಗೂ ಹೆಚ್ಚು ಮಂದಿ ಪುಣ್ಯಸ್ನಾನ

ಹೊಸ ಚರಿತ್ರೆ ಬರೆದ ಮಹಾಕುಂಭಮೇಳ: ಈವರೆಗೂ 50 ಕೋಟಿಗೂ ಹೆಚ್ಚು ಮಂದಿ ಪುಣ್ಯಸ್ನಾನ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಪ್ರಯಾಗರಾಜ್: ಹಿಂದೂಗಳ ಪವಿತ್ರ ಆಚರಣೆಯಾಗಿ ಹೆಗ್ಗುರುತಾಗಿರುವ ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಇದು ಜಾಗತಿಕ ದಾಖಲೆಯಾಗಿದೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಜನವರಿ 13ರಂದು ಪ್ರಾರಂಭವಾಗಿರುವ ಮಹಾಕುಂಭ ಮೇಳವು ಫೆಬ್ರವರಿ 26ರವರೆಗೆ ನಡೆಯಲಿದೆ. ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ದಡದಲ್ಲಿ ಮಹಾಕುಂಭ ನಡೆಯುತ್ತಿದೆ.ಈ ಮಹಾಕುಂಭಮೇಳದ ಸಂದರ್ಭದಲ್ಲಿ ಈವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಹೇಳಿದ್ದಾರೆ....
ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

ಅಯೋಧ್ಯೆ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ಅಯೋಧ್ಯೆ: ಅಯೋಧ್ಯೆಯಲ್ಲಿರುವ ಶ್ರೀ ರಾಮ ಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ವಿಧಿವಶರಾಗಿದ್ದಾರೆ.ಇದೀಗ ಇಂಗ್ಲೀಷ್ ಆವೃತ್ತಿಯಲ್ಲೂ 'ಉದಯ ನ್ಯೂಸ್' ಲಭ್ಯ.. Ayodhya Ram Temple’s chief priest Acharya Satyendra Das passes awayಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಫೆಬ್ರವರಿ 3 ರಂದು ಅವರು ಪಾರ್ಶ್ವವಾಯುವಿಗೆ ಒಳಗಾಗಿದ್ದು ಅನಂತರ ಅವರ ಆರೋಗ್ಯ ಕ್ಷೀಣಿಸಿತ್ತೆನ್ನಲಾಗಿದೆ.85 ವರ್ಷ ವಯಸ್ಸಿನ ಆಚಾರ್ಯ ಸತ್ಯೇಂದ್ರ ದಾಸ್ ಅವರು, 1992ರ ಡಿಸೆಂಬರ್ 6ರಂದು ಬಾಬರಿ ಮಸೀದಿಯನ್ನು ಕೆಡವಿದಾಗ ತಾತ್ಕಾಲಿಕ ರಾಮ ಮಂದಿರದ ಅರ್ಚಕರಾಗಿದ್ದರು. ಭವ್ಯ ರಾಮ ಮಂದಿರ ನಿರ್ಮಾಣ ನಂತರವೂ ಶ್ರೀರಾಮನ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿದ್ದರು.‌...
ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ: ರಾಮಲಿಂಗಾ ರೆಡ್ಡಿ

ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ: ರಾಮಲಿಂಗಾ ರೆಡ್ಡಿ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವಿಶೇಷ
ಬೆಂಗಳೂರು: ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲು ಮುಜರಾಯಿ ಮಂತ್ರಿ ರಾಮಲಿಂಗಾ ರೆಡ್ಡಿ ಪಣತೊಟ್ಟಿದ್ದಾರೆ. ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ ರೂ‌. 6 ಕೋಟಿ‌ ಅನುದಾನ‌ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿಅವರು ಮಾಹಿತಿ ಹಂಚಿಕೊಂಡಿದ್ದಾರೆ.ಸುಮಾರು ಮೂರೂವರೆ ದಶಕದಿಂದಲೂ ಮೂರು ವರ್ಷಗಳಿಗೊಮ್ಮೆ ಕುಂಭಮೇಳವನ್ನು ತಿನರಸೀಪುರದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ದಕ್ಷಿಣ ಭಾರತದಲ್ಲಿ ಈ‌ ಪುಣ್ಯಸ್ನಾನವನ್ನು ಪ್ರಾರಂಭಿಸಲು ಪ್ರಮುಖರಾದವರು ಆದಿಚುಂಚನಗಿರಿಯ ಪೀಠಾಧ್ಯಕ್ಷರಾಗಿದ್ದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಕೈಲಾಸಾಶ್ರಮ ತಿರುಚ್ಚಿ ಮಹಾಸಂಸ್ಥಾನ ಮಠದ ಶ್ರೀ ಜಯೇಂದ್ರಪುರಿ ಮಹಾ ಸ್ವಾಮಿ. ದಕ್ಷಿಣ ಭಾ...
ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ: ‘ಚಂದ್ರ ಮಂಡಲ’ ಆಕರ್ಷಣೆ

ಮಂಗಳೂರು ಶ್ರೀ ವೆಂಕಟರಮಣ ದೇವಸ್ಥಾನ: ‘ಚಂದ್ರ ಮಂಡಲ’ ಆಕರ್ಷಣೆ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿಶೇಷ
ಮಂಗಳೂರು : ನಗರದ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ದೇವರ ಉತ್ಸವವಾದಿ ಕಾರ್ಯಕ್ರಮಗಳಿಗಾಗಿ ನೂತನವಾಗಿ ನಿರ್ಮಿಸಲಾದ ಚಂದ್ರ ಮಂಡಲ ವಾಹನದ ಹಸ್ತಾಂತರ ಕಾರ್ಯಕ್ರಮ ಗಮನಸೆಳೆಯಿತು. ಭಾನುವಾರ ಕುಂಭಾಶಿಯಲ್ಲಿರುವ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ವಿಶೇಷ ಕೈಂಕರ್ಯ ನೆರವೇರಿತು. ಶ್ರೀ ದೇವಳದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ , ​ಸತೀಶ್ ಪ್ರಭು, ಗಣೇಶ್ ಕಾಮತ್, ಜಗನ್ನಾಥ್ ಕಾಮತ್ ಹಾಗೂ ನೂರಾರು ಸ್ವಯಂಸೇವಕರು ಉಪಸ್ಥಿತಿಯಲ್ಲಿ ಈ ಸೇವೆ ನೆರವೇರಿತು.20.01.2025 ಸೋಮವಾರ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಪಾದುಕಾ ಪುರಪ್ರವೇಶ, ನೂತನ ಚಂದ್ರ ಮಂಡಲ ವಾಹನ ಪುರಪ್ರವೇಶ, ಕಾಶಿ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪುರಪ್ರವೇಶ ನಡೆಯಲಿದೆ. ಶ್ರೀ ವೀರ ವೆಂಕಟೇಶ ದೇವರ ಉತ್ಸವ ಕಾರ್ಯಕ್ರಮ ಉದ್ಧಿಶ್ಯ ನೂತನವಾಗಿ ನಿರ್ಮಿಸಲಾದ ಚಂದ್ರಮಂಡಲ ವಾಹನದ ಪುರಪ್ರವೇಶ ಕಾರ್ಯಕ್ರಮ ಜೊತೆಗೆ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದಿ ಕಾರ್ಯಕ್ರಮ ಪ್ರಯುಕ್ತ ಆಯೋಜಿಸಲಾದ ಶ್ರೀ ಗುರು ಪಾದುಕಾ ಯಾತ್ರೆಯ ಪುರಪ್ರವೇಶ ಹಾಗೂ ಮಂಗಳೂರು ರಥೋತ್ಸವ ಪ್ರಯು...
ನಾಡಿನಾದ್ಯಂತ ಮಕರ ಸಂಕ್ರಾಂತಿ ವೈಭವ; ದೇವಕಾಲಯಗಳಲ್ಲಿ ವಿಶೇಷ ಕೈಂಕರ್ಯ

ನಾಡಿನಾದ್ಯಂತ ಮಕರ ಸಂಕ್ರಾಂತಿ ವೈಭವ; ದೇವಕಾಲಯಗಳಲ್ಲಿ ವಿಶೇಷ ಕೈಂಕರ್ಯ

ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ, ವಿದೇಶ, ವಿಶೇಷ
ಬೆಂಗಳೂರು: ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಉತ್ತರಾಯಣ ಪರ್ವಕಾಲವನ್ನು ಸ್ವಾಗತಿಸುವ ಕೈಂಕರ್ಯ ಎಲ್ಲೆಡೆ ಸಾಗಿದೆ. ಎಲ್ಲೆಲ್ಲೂ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರುತ್ತಿದೆ. ಅದರಲ್ಲೂ ಅಯ್ಯಪ್ಪ ದೇಗುಲಗಳಲ್ಲಿ ಮಕರ ಸಂಕ್ರಾಂತಿಯನ್ನು ವಿಶೇಷ ವೈಭವ ರೀತಿಯಲ್ಲಿ ಅಕ್ಕಿಗರಿಸಲಾಗುತ್ತಿದೆ.ಬೆಂಗಳೂರಿನ ಗವಿಪುರದಲ್ಲಿರುವ ಗವಿಗಂಗಾಧರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರುತ್ತಿದ್ದು ಇಂದು ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಅಭೀಷೇಕ, ನೆರವೇರಿದ್ದು, ದೇಗುಲಗಳು ಭಕ್ತಸಮೂಹದಿಂದ ತುಂಬಿವೆ....
ಪ್ರಯಾಗ್‌ರಾಜ್‌ ‘ಮಹಾಕುಂಭ 2025’: ಸಂಗಮ ತ್ರಿವೇಣಿಯಲ್ಲಿ ಭಕ್ತಸಾಗರ

ಪ್ರಯಾಗ್‌ರಾಜ್‌ ‘ಮಹಾಕುಂಭ 2025’: ಸಂಗಮ ತ್ರಿವೇಣಿಯಲ್ಲಿ ಭಕ್ತಸಾಗರ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ, ವೈವಿಧ್ಯ
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಮಹಾಕುಂಭ 2025 ಗಮನಸೆಳೆದಿದೆ. ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತಕೋಟಿಯನ್ನು ಭವ್ಯ ಆಧ್ಯಾತ್ಮಿಕ ಕೈಂಕರ್ಯಕ್ಕೆ ಅದ್ದೂರಿ ಸ್ವಾಗತ ಸಿಕ್ಕಿದೆ. ಭಕ್ತರು, ಸಂತರು ಮತ್ತು ಕಲ್ಪವಾಸಿಗಳನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸುತ್ತಿರುವ ಸನ್ನಿವೇಶ ಗಮನಸೆಳೆದಿದೆ. ಮಹಾಕುಂಭವು ನಂಬಿಕೆ ಮತ್ತು ಆಧುನಿಕತೆಯ ಸಂಗಮ ಎಂದು ಸಾಧು ಸಂತರು ಸಂತಸ ವ್ಯಕ್ತಪಡಿಸಿದ್ದಾರೆವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ಇದಾಗಿದ್ದು, ಈ ‘ಮಹಾಕುಂಭ’ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಅನುಭವಿಸಲು, ಧ್ಯಾನ ಮಾಡಲು ಮತ್ತು ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿರುವ ಸಂತರು, ಕಲ್ಪವಾಸಿಗಳು ಮತ್ತು ಭಕ್ತರ ಕೈಂಕರ್ಯ ಗಮನಸೆಳೆದಿದೆ. ಇದು 'ಸನಾತನ ಹೆಮ್ಮೆ-ಮಹಾ ಕುಂಭ ಉತ್ಸವ" ಎಂಬ ವಿಶ್ಲೇಷಣೆ ವ್ಯಕ್ತವಾಗಿದೆ. ಸಂಗಮ ತ್ರಿವೇಣಿಯಲ್ಲಿ ಪವಿತ್ರ ಸ್ನಾನ: ಮೊದಲ ಸ್ನಾನೋತ್ಸವವಾದ ಪೌಷ ಪೂರ್ಣಿಮೆಗೆ ಮುಂಚಿತವಾಗಿ ಭಾನುವಾರ ಸಂಗಮ ತ್ರಿವೇಣಿಯಲ್ಲಿ 50 ಲಕ್ಷಕ್ಕೂ ಹೆಚ್...
ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ; ಭಕ್ತಕೋಟಿ ಭವ್ಯ ಆಧ್ಯಾತ್ಮಿಕ ಸ್ವಾಗತ ನೀಡಿದ ಯೋಗಿ

ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ; ಭಕ್ತಕೋಟಿ ಭವ್ಯ ಆಧ್ಯಾತ್ಮಿಕ ಸ್ವಾಗತ ನೀಡಿದ ಯೋಗಿ

ಆಧ್ಯಾತ್ಮ, ದೇಶ, ಪ್ರಮುಖ ಸುದ್ದಿ, ವಿಶೇಷ
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಮಹಾಕುಂಭ 2025 ಪ್ರಾರಂಭವಾಗುತ್ತಿದ್ದಂತೆ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಭಕ್ತಕೋಟಿಯನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸಿದ್ದಾರೆ.ಭಕ್ತರು, ಸಂತರು ಮತ್ತು ಕಲ್ಪವಾಸಿಗಳನ್ನು ಭವ್ಯ ಆಧ್ಯಾತ್ಮಿಕ ಸಭೆಗೆ ಸ್ವಾಗತಿಸಿರುವ ಸಿಎಂ ಯೋಗಿ, ಮಹಾಕುಂಭ ಪ್ರತಿನಿಧಿಸುವ ನಂಬಿಕೆ ಮತ್ತು ಆಧುನಿಕತೆಯ ಸಂಗಮ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮ 'X'ನಲ್ಲಿ ಸಂದೇಶ ಹಂಚಿಕೊಂಡಿರುವ ಅವರು, 'ಪೌಷ ಪೂರ್ಣಿಮೆಯ ಶುಭಾಶಯಗಳು. ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ‘ಮಹಾಕುಂಭ’ ಪವಿತ್ರ ನಗರವಾದ ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾಗುತ್ತಿದೆ.ವೈವಿಧ್ಯತೆಯಲ್ಲಿ ಏಕತೆಯನ್ನು ಅನುಭವಿಸಲು, ಧ್ಯಾನ ಮಾಡಲು ಮತ್ತು ನಂಬಿಕೆ ಮತ್ತು ಆಧುನಿಕತೆಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಬಂದಿರುವ ಎಲ್ಲಾ ಪೂಜ್ಯ ಸಂತರು, ಕಲ್ಪವಾಸಿಗಳು ಮತ್ತು ಭಕ್ತರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗುತ್ತದೆ. ಗಂಗಾ ಮಾತೆ ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ' ಎಂದಿದ್ದಾರೆ. 'ಸನ...